ಕೋವಿಡ್ ನಿಂದ ಚೇತರಿಸಿಕೊಂಡವರು ಲಸಿಕೆ ಪಡೆಯವ ಅವಧಿ 3 ತಿಂಗಳು ಮುಂದೂಡಿ: ಕೇಂದ್ರ
ನವದೆಹಲಿ, ಕೊರೊನಾ ಸೋಂಕಿನಿಂದ ಚೇತರಸಿಕೊಂಡ ಮಂದಿ ಲಸಿಕೆ ಪಡೆಯುವ ಅವಧಿಯನ್ನು 3 ತಿಂಗಳು ಮುಂದೂಡಿ ಎಂದು ಕೇಂದ್ರ ಸರ್ಕಾರ ಸಲಹೆ ಮಾಡಿದೆ.
ಅಲ್ಲದೆ ಮೊದಲ ಡೋಸ್ ಪಡೆದ ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದಿದ್ದರೆ ಅವರು ಕೂಡ ಎರಡನೇ ಡೋಸ್ ಪಡೆಯುವ ಅವಧಿಯನ್ನು ಮುಂದೂಡಿ ಎಂದು ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಹಾಗು ಅಖಿಲ ಭಾರತೀಯ ವೈಧ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
ಸದ್ಯದ ಸಂದರ್ಭದಲ್ಲಿ ಲಸಿಕೆ ಪಡೆಯುವ ಅವದಿಯಲ್ಲಿ ಯಾವುದೇ ಮಿತಿ ಇಲ್ಲ. ವೈಯಕ್ತಿಕ ವೈದಗಯರ ಸಲಹೆ ಪಡೆದು 2 ರಿಂದ 4 ವಾರದಲ್ಲಿ ಲಸಿಕೆ ಪಡೆಯಬಹುದು ಎಂದು ಹೇಳಿದರು.
ಕಳೆದ ಕೆಲ ವಾರದ ಹಿಂದೆ ಮಾಹಿತಿ ನೀಡಿದ್ದ ರಣದೀಪ್ ಗುಲೇರಿಯಾ ಮೊದಲ ಡೊಸ್ ಪಡೆದ ನಂತರ ಎರಡನೇ ಡೋಸ್ ಪಡೆಯುವ ಅವಧಿಯನ್ನು ನಾಲ್ಕು ವಾರಗಳಿಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕತ ಶಿಫಾರಸು ಮಾಡಿದ್ದರು.
ಆದರೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕೋವಿಡ್ ಸೋಂಕಿನಿಂದ ಚೇತರಿಕೆ ಕಂಡವರು ಲಸಿಕೆ ಪಡೆಯುವ ಅವಧಿಯನ್ನು 3 ತಿಂಗಳು ಮುಂದೂಡಬೇಕು ಎಂದು ಹೇಳಿದ್ದಾರೆ.
ಹೊಸ ಶಿಫಾರಸು ಒಪ್ಪಿಗೆ:
ರಾಷ್ಟ್ರೀಯ ಲಸಿಕೆ ಕುರಿತು ತಜ್ಞರ ಆಡಳಿತ ಗುಂಪು ಲಸಿಕೆ ಪಡೆಯುವ ಅವಧಿಯ ಕುರಿತು ಮಾಡಿದ್ದ ಶಿಫಾರಸು ಅನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಪ್ಪಿಕೊಂಡಿದೆ.
ಕೋವಿಶೀಲ್ಡ್ ಲಸಿಕೆ ಪಡೆಯುವ ಅವಧಿಯನ್ನು 12 ರಿಂದ 16 ವಾರಕ್ಕೆ ಹೆಚ್ಚಖ ಮಾಡುವಂತೆಯೂ ಮಾಡಿದ್ದ ಸಲಹೆಯನ್ನು ಸಚಿವಾಲಯ ಸ್ವೀಕಾರ ಮಾಡಿದೆ.