Israel- Palestine Conflict: ಇಸ್ರೇಲ್ನಿಂದ ಗಾಜಾದಲ್ಲಿ ಕದನವಿರಾಮ ಘೋಷಣೆ; ಪ್ಯಾಲೆಸ್ತೀನ್ನ ಜಯ ಎಂದ ಹಮಾಸ್
ಗಾಜಾ (ಮೇ 21): ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ದೇಶಗಳ ವಿವಾದಿತ ಸ್ಥಳವಾದ Gaza Stripದಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿದ್ದ ಸಂಘರ್ಷ ಕೊನೆಗೂ ಅಂತ್ಯ ಕಂಡಿದೆ. ಗಾಜಾದಲ್ಲಿ Israelನಿಂದ ಯುದ್ಧವಿರಾಮ ಘೋಷಿಸಲಾಗಿದ್ದು, ಇಸ್ರೇಲ್ ಮತ್ತು Hamas Terrorist Group ನಡುವಿನ ಕದನಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಇದು Palestineನ ಜಯವಾಗಿದ್ದು, ಈ ಸಂಘರ್ಷದಲ್ಲಿ ಇಸ್ರೇಲ್ ಸೋಲನ್ನು ಒಪ್ಪಿಕೊಂಡಿದೆ ಎಂದು ಪ್ಯಾಲೆಸ್ತೀನ್ ಬೆಂಬಲಿತ ಹಮಾಸ್ ಉಗ್ರ ಸಂಘಟನೆ ಸಂಭ್ರಮಾಚರಣೆ ನಡೆಸಿದೆ. ನಿನ್ನೆ ರಾತ್ರಿ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತುನ್ಯಾಹು ಸೇನೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಮಧ್ಯಸ್ಥಿಕೆ ವಹಿಸಿದ್ದ ಈಜಿಪ್ಟ್ನ ಸಲಹೆಗಳನ್ನು ಒಪ್ಪಿಕೊಳ್ಳುವುದಾಗಿ ಮತ್ತು ಕಾರ್ಯರೂಪಕ್ಕೆ ತರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ತಿಳಿಸಿದ್ದಾರೆ. ಮೇ 10ರಿಂದ ಗಾಜಾದಲ್ಲಿ ಇಸ್ರೇಲಿ ವಾಯುದಾಳಿಯಿಂದ 65 ಮಕ್ಕಳು ಸೇರಿದಂತೆ 232 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. 1,900 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿತ್ತು.
ಗಾಜಾ ಪಟ್ಟಿಯ ಇಸ್ಲಾಮಿಸ್ಟ್ ಮೋಮೆಂಟ್ಸ್ ಪೊಲಿಟಿಕಲ್ ಬ್ಯೂರೋದ ಹಿರಿಯ ಸದಸ್ಯ ಖಲೀಲ್ ಅಲ್-ಹಯ್ಯ ಈ ಯುದ್ಧ ವಿರಾಮದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಇಸ್ರೇಲ್ ವಾಯುದಾಳಿಯಿಂದ ಅನೇಕ ಮನೆಗಳು ಧ್ವಂಸವಾಗಿವೆ. ಆ ಮನೆಗಳನ್ನು ನಾವೇ ಕಟ್ಟಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇಸ್ರೇಲ್ನಿಂದ ಯುದ್ಧವಿರಾಮ ಘೋಷಣೆಯಾಗುತ್ತಿದ್ದಂತೆ ಪ್ರಾಣ ಕಳೆದುಕೊಳ್ಳುವ ಆತಂಕದಲ್ಲಿದ್ದ ಗಾಜಾ ಪಟ್ಟಿಯ ಜನರು ಸಂಭ್ರಮಿಸಿದ್ದಾರೆ.
ವಿಶ್ವಸಂಸ್ಥೆಯು ಕದನ ವಿರಾನ ಘೋಷಣೆಗೆ ಸಂಬಂಧಪಟ್ಟಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲು ಯತ್ನಿಸಿತ್ತಾದರೂ, ಇದಕ್ಕೆ ಅಮೆರಿಕಾ ನಾಲ್ಕು ಬಾರಿ ತಡೆ ನೀಡಿತ್ತು. ಕದನ ವಿರಾಮ ಘೋಷಣೆಗೆ ವಿಸ್ವಸಂಸ್ಥೆ ಸಮಿತಿಯ ಇತರೆ ಎಲ್ಲಾ ಸದಸ್ಯರು ಸಮ್ಮತಿ ಸೂಚಿಸಿದ್ದರೂ ಅಮೆರಿಕಾ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.
ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ರಾಷ್ಟ್ರಗಳಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಈವರೆಗೆ 65 ಮಕ್ಕಳು ಸೇರಿದಂತೆ ಒಟ್ಟು 232 ಮಂದಿ ಸಾವನ್ನಪ್ಪಿದ್ದಾರೆ. ಬಹುಪಾಲು ಸಾವು ನೋವುಗಳು ಪ್ಯಾಲೆಸ್ತೀನ್ ನಲ್ಲಿಯೇ ಸಂಭವಿಸಿದೆ. ಗಾಜಾದಲ್ಲಿ 63 ಮಕ್ಕಳು ಸೇರಿದಂತೆ 219 ಜನರು ಬಲಿಯಾಗಿದ್ದಾರೆ. ಪ್ಯಾಲೆಸ್ತೀನ್ ನ ಪಶ್ಚಿಮ ಭಾಗದಲ್ಲಿ ನಾಲ್ವರು ಮಕ್ಕಳು ಮತ್ತು ಸೈನಿಕರು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ.
ಗಾಜಾದಲ್ಲಿ ವೈಮಾನಿಕ ದಾಳಿಯಿಂದ 6 ಆಸ್ಪತ್ರೆಗಳು, 9 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮುಚ್ಚಲಾಗಿತ್ತು. ಈ ದಾಳಿಯಲ್ಲಿ ತೀವ್ರವಾಗಿ ಹಾನಿಗೊಂಡ ಪ್ಯಾಲೆಸ್ತೀನ್ ಪ್ರಾಂತ್ಯಗಳಿಗೆ 14 ಮಿಲಿಯಲ್ ಡಾಲರ್ ನೆರವು ನೀಡುವುದಾಗಿ ವಿಶ್ವಸಂಸ್ಥೆ ಘೋಷಿಸಿತ್ತು.