ಬಿಗ್ ಬಾಸ್ ನಿಂದ ಹೊರಬಂದ ನಂತ್ರ ನಟ ‘ಶಂಕರ್ ಅಶ್ವಥ್’ ಎಂಥ ಕೆಲಸ ಮಾಡಿದ್ದಾರೆ ನೋಡಿ..!
ಶಂಕರ್ ಅಶ್ವಥ್ ಬಹಳಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕಷ್ಟ ಪಟ್ಟು ಜೀವನವನ್ನು ನಡೆಸಲು, ಮಾದರಿ ಬದುಕನ್ನು ಕಟ್ಟಿಕೊಳ್ಳಲು ಅವರ ಜೀವನವೊಂದು ಪ್ರೇರಣೆ ಎನಿಸುತ್ತದೆ. ಈ ಬಾರಿ ಬಿಗ್ ಬಾಸ್ ಸೀಸನ್ ನಲ್ಲಿ ಕೂಡ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದರು ಶಂಕರ್ ಅಶ್ವಥ್ ಅವರು. ಬಿಗ್ ಬಾಸ್ ಮೂಲಕ ಕರುನಾಡಿನ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಮತ್ತೆ ಹಳೆಯ ಶ್ರಮಜೀವಿಯಾಗಿದ್ದಾರೆ ಶಂಕರ ಅಶ್ವಥ್. ಸೋಶಿಯಲ್ ಮೀಡಿಯಾ ಗಳಲ್ಲಿ ಸಕ್ರಿಯವಾಗಿರುವ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಜೀವನದಲ್ಲಿ ಕಂಡ ಏಳುಬೀಳುಗಳ ಕುರಿತಾಗಿ, ತನ್ನ ಅನುಭವಗಳ ಕುರಿತಾಗಿ ಹಲವಾರು ಉತ್ತಮ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ, ಬಹಳಷ್ಟು ಜನರಿಗೆ ಜೀವನದ ಬಗ್ಗೆ ಒಂದು ಉತ್ಸಾಹವನ್ನು ತುಂಬುವಂತಹ ಒಂದು ಕಾರ್ಯವನ್ನು ಪರೋಕ್ಷವಾಗಿ ಮಾಡುತ್ತಿದ್ದಾರೆ. ಇದೀಗ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ದುಡಿದು ತಿನ್ನುವ ಕುರಿತಾಗಿ ಉತ್ತಮ ವಿಚಾರವನ್ನ ಹಂಚಿಕೊಂಡಿದ್ದಾರೆ.