Air India Server Hack: ಏರ್ ಇಂಡಿಯಾ ಡೇಟಾ ಹ್ಯಾಕ್; 45 ಲಕ್ಷ ಪ್ರಯಾಣಿಕರ ಖಾಸಗಿ ಮಾಹಿತಿ ಸೋರಿಕೆ

Air India Data Leak: ನವದೆಹಲಿ (ಮೇ 22): ಏರ್ ಇಂಡಿಯಾ ಮೇಲೆ ಭಾರೀ ದೊಡ್ಡ ಸೈಬರ್ ದಾಳಿ ನಡೆದಿದ್ದು, Air Indiaದ 45 ಲಕ್ಷ ಪ್ರಯಾಣಿಕರ ಕ್ರೆಡಿಟ್ ಕಾರ್ಡ್, ಪಾಸ್​ಪೋರ್ಟ್​ ಮಾಹಿತಿ, ಫೋನ್ ನಂಬರ್​ಗಳು ಸೇರಿದಂತೆ ಹಲವು ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ Air India Data Processor ಮೇಲೆ Cyber attack ನಡೆದಿದ್ದು, ಭಾರೀ ಪ್ರಮಾಣದ ಪ್ರಯಾಣಿಕರ ಮಾಹಿತಿಗಳನ್ನು ಕಳುವು ಮಾಡಲಾಗಿದೆ.

2011ರ ಆಗಸ್ಟ್​ 26ರಿಂದ 2021ರ ಫೆಬ್ರವರಿ 3ರವರೆಗಿನ ಅವಧಿಯಲ್ಲಿ ಈ ಡೇಟಾ ಮಾಹಿತಿ ಸೋರಿಕೆಯಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಈ ಅವಧಿಯಲ್ಲಿ ಏರ್ ಇಂಡಿಯಾದಲ್ಲಿ ಟಿಕೆಟ್ ಬುಕ್ ಮಾಡಿದವರ ಮಾಹಿತಿಗಳನ್ನು ಸಂಗ್ರಹಿಸಿಡಲಾಗಿತ್ತು. ಕ್ರೆಡಿಟ್ ಕಾರ್ಡ್​ ಹೊಂದಿದ್ದ ಪ್ರಯಾಣಿಕರ CVV/ CVC ಮಾಹಿತಿಯನ್ನು ನಾವು ಸಂಗ್ರಹಿಸಿಟ್ಟಿರಲಿಲ್ಲ. ಹೀಗಾಗಿ, ಆ ಮಾಹಿತಿ ಸೋರಿಕೆಯಾಗಿಲ್ಲ. ಏರ್ ಇಂಡಿಯಾದ ಡೇಟಾ ಪ್ರೋಸೆಸರ್ ಆಫ್ ಪ್ಯಾಸೆಂಜರ್ ಸರ್ವಿಸ್ ಸಿಸ್ಟಂ ಮೇಲೆ ಸೈಬರ್ ದಾಳಿ ನಡೆದಿದ್ದು, ಸುಮಾರು 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳನ್ನು ಕದಿಯಲಾಗಿದೆ ಎಂದು ಏರ್ ಇಂಡಿಯಾ ಅಧಿಕೃತವಾಗಿ ಪ್ರಕಟಿಸಿದೆ.

 

ಈ ಘಟನೆಯು ವಿಶ್ವದ ಸುಮಾರು 4,500,000 ಡೇಟಾದ ಮೇಲೆ ಪರಿಣಾಮ ಬೀರಿದೆ. ಇದರಲ್ಲಿ ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ಮಾಹಿತಿ, ಪಾಸ್ ಪೋರ್ಟ್ ಮಾಹಿತಿ, ಟಿಕೆಟ್ ಮಾಹಿತಿ, ಸ್ಟಾರ್ ಅಲೈಯನ್ಸ್ ಮತ್ತು ಏರ್ ಇಂಡಿಯಾ ಪ್ರಯಾಣಿಕರ ಡೇಟಾ, ಕ್ರೆಡಿಟ್ ಕಾರ್ಡ್‌ಗಳ ಡೇಟಾ ಕೂಡ ಇತ್ತು. ಈ ಡೇಟಾ ಭದ್ರತಾ ಲೋಪಕ್ಕೆ ಕಾರಣವೇನೆಂಬ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಏರ್ ಇಂಡಿಯಾ ಘೋಷಿಸಿದೆ.

2011ರಿಂದಲೇ ಡೇಟಾ ಸೋರಿಕೆಯಾಗುತ್ತಿದ್ದು, ಕಳೆದ 10 ವರ್ಷಗಳ ಏರ್ ಇಂಡಿಯಾ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡಿ ಕದಿಯಲಾಗಿದೆ. ನಮಗೆ ಫೆಬ್ರವರಿಯಲ್ಲೇ ಡೇಟಾ ಸೋರಿಕೆಯಾದ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಏರ್ ಇಂಡಿಯಾದ ಯಾವ ಡೇಟಾ ಹ್ಯಾಕ್ ಆಗಿದೆ ಎಂಬುದು ಖಚಿತವಾಗಿರಲಿಲ್ಲ. ಏರ್ ಇಂಡಿಯಾ ಆ್ಯಪ್​/ ವೆಬ್​ಸೈಟ್​ಗೆ ಲಾಗಿನ್ ಆದವರು ತಮ್ಮ ಪಾಸ್​ವರ್ಡ್​ ಬದಲಿಸುವಂತೆ ಏರ್ ಇಂಡಿಯಾ ತನ್ನ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *