ವಿಜಯಪುರದಲ್ಲಿ ಯತ್ನಾಳರ ಶ್ರೀಸಿದ್ದೇಶ್ವರ ಸಂಸ್ಥೆಯಿಂದ ಆಕ್ಸಿಜನ್ ಆನ್ ವ್ಹೀಲ್ ಉಚಿತ ಸೇವೆ ಆರಂಭ
ವಿಜಯಪುರ, ಮೇ.22-ವಿಜಯಪುರ ಜಿಲ್ಲೆ ಕೊರೊನಾ ಎರಡನೇ ಅಲೆ ಮುಂದುವರೆದಿದ್ದು, ಕೊರೊನಾ ಸೋಂಕಿತರು ಸೂಕ್ತ ವೈದ್ಯಕೀಯ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ.
ಇದನ್ನು ಮನಗಂಡ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷರಾಗಿರುವ ಶ್ರೀ ಸಿದ್ದೇಶ್ವರ ಸಂಸ್ಥೆ ಮತ್ತು ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ರಾಜ್ಯದಲ್ಲಿಯೇ ಪ್ರಥಮವಾಗಿ ಖಾಸಗಿ ಸಂಸ್ಥೆಯಿಂದ ಆಕ್ಸಿಜನ್ ಆನ್ ವ್ಹೀಲ್ ಸೇವೆ ಆರಂಭವಾಗಿದೆ.
ಸೇವೆಗೆ ಸಜ್ಜಾಗಿರುವ ಆಕ್ಸಿಜನ್ ಆನ್ ವ್ಹೀಲ್ ವಾಹನಗಳುಃ ಶ್ರೀ ಸಿದ್ಧೇಶ್ವರ ಸಂಸ್ಥೆಗೆ ಸೇರಿರುವ ಶಾಲಾ ಬಸ್ಸುಗಳಲ್ಲಿ ಆಕ್ಸಿಜನ್ ಮಷೀನ್ ಒಳಗೊಂಡ ಸೇವೆ ಆರಂಭವಾಗಿದೆ. ಈ ವಾಹನಗಳಿಗೆ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ನಿರ್ದೇಶಕ ಮತ್ತು ಯತ್ನಾಳ ಪುತ್ರ ರಾಮನಗೌಡ ಬಸನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ಧೇಶ್ವರ ಸಂಸ್ಥೆ ಚೇರ್ಮನ್ ಹಾಗೂ ಸಹಕಾರಿ ಉಪಾಧ್ಯಕ್ಷ ಬಸಯ್ಯ ಹಿರೇಮಠ, ಸದಾನಂದ ದೇಸಾಯಿ, ಸುಧೀರ್ ಚಿಂಚಲಿ, ವಿಜಯ ಮೇತ್ರಿ, ಶಿವಾನಂದ ಹಿರೇಮಠ ಸೇರಿದಂತೆ ಶ್ರೀ ಸಿದ್ಧೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.