ಡಾ. ಎಸ್.ಪಿ. ಮೇಲಕೇರಿ ಕೊರೊನಾಗೆ ಬಲಿ
ಕಲಬುರಗಿ, ಮೇ. 22: ಕಲಬುರಗಿ ವಿಶ್ವವಿದ್ಯಾಲಯದ ಮಾಜಿ ಪ್ರಭಾರಿ ಕುಲಪತಿಗಳು ಹಾಗೂ ಮನೋ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಎಸ್. ಪಿ. ಮೇಲಕೇರಿ ಅವರು ಇಂದು ನಿಧನಹೊಂದಿದ್ದಾರೆ.
ದಿವAಗತರಿಗೆ 59 ವರ್ಷ ವಯಸ್ಸಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಈ.ಎಸ್.ಐ. ಆಸ್ಪತ್ರೆಯಲ್ಲಿ ಕೊರೊನಾದಿಂದ ಬಳಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು.
ಮೂಲತ ಆಳಂದ ತಾಲೂಕಿನ ಖ್ಯಾಡ ಗ್ರಾಮದವರಾಗಿದ್ದ ಇವರಿಗೆ ಮೂರು ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರ ಹಾಗೂ ಹೆಂಡತಿ, ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿ ದ್ದಾರೆ.
ಸ0ತಾಪ:
ಡಾ. ಎಸ್.ಪಿ. ಮೇಲಕೇರಿ ಅವರ ಅಕಾಲಿಕ ನಿಧನಕ್ಕೆ ಕೇಂದ್ರೀಯ ವಿಶ್ವವಿದ್ಯಾಲಯದ ಎಸ್.ಸಿ., ಎಸ್.ಟಿ. ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ ಕಾಂಬಳೆ ಅವರು ಸಂತಾಪ ವ್ಯಕ್ತಪಡಿಸಿ, ಆ ಭಗವಂತನು ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.