ರಾಜ್ಯಗಳ ಬಳಿ 1.60 ಕೋಟಿ ಲಸಿಕೆ ಸಂಗ್ರಹ
ನವದೆಹಲಿ,ಮೇ.22-ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನು 1.60 ಕೋಟಿ ಕೊರೊನಾ ಲಸಿಕೆ ಸಂಗ್ರಹವಿದ್ದು ಮೂರ್ನಾಲ್ಕು ದಿನದೊಳಗೆ 2.67 ಲಕ್ಷ ಡೋಸ್‍ಗಳನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದುವರೆಗೂ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 21 ಕೋಟಿಗೂ ಹೆಚ್ಚು ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.ನಿನ್ನೆಯವರೆಗೆ ವೆಸ್ಟೇಜ್ ಸೇರಿದಂತೆ 19 ಕೋಟಿಗೂ ಹೆಚ್ಚು ಲಸಿಕೆ ಹಾಕಲಾಗಿದೆ ಎಂದು ಅಂದಾಜಿಸಲಾಗಿದೆ.
ಸದ್ಯ ರಾಜ್ಯಗಳ ಬಳಿ 1.60 ಕೋಟಿ ಡೋಸ್ ಲಸಿಕೆ ಸಂಗ್ರಹವಿದ್ದು ಸಧ್ಯದಲ್ಲೆ 2,67 ಲಕ್ಷ ಲಸಿಕೆ ನೀಡಲು ತೀರ್ಮಾನಿಸಲಾಗಿದ ಎಂದು ಇಲಾಖೆ ಹೇಳಿಕೊಂಡಿದೆ.