“ನಾನು ಸಿಎಂ ಆಗ್ಬೇಕು, ನೀವು ಓಟ್ ಮಾಡಿ ಗೆಲ್ಲಿಸ್ತೀರಾ?” ಉಪ್ಪಿ (Upendra) ಪ್ರಶ್ನೆಗೆ ಸಖತ್ ಉತ್ತರ ಕೊಡ್ತಿದ್ದಾರೆ ಜನ , ಏನು ಹೇಳಿದ್ದಾರೆ ನೋಡಿ..!
Actor Upendra: ಎಲ್ಲಾ ಕಡೆ ಉಪ್ಪಿಯ ಸಿಎಂ ಕನಸಿನದ್ದೇ ಸುದ್ದಿ. ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಉದ್ದೇಶಿಸಿ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ‘ನಾನು ಉಪೇಂದ್ರ…ಈ ರಾಜ್ಯದ ಮುಖ್ಯಮಂತ್ರಿ ( C M ) ಆಗ್ಬೇಕು…ನಾನು ಚುನಾವಣೇಲಿ ಸ್ಪರ್ದಿಸಿದರೆ ? ನೀವು ನನ್ನನ್ನ ಗೆಲ್ಲಸ್ತೀರಾ ? ನೋಡಿ ನಾನು ಸಮಾಜ ಸೇವೆ ಮಾಡ್ತಿದೀನಿ ! ರೈತರಿಂದ ಬೆಳೆ ಕೊಂಡು ಉಚಿತವಾಗಿ ಕಷ್ಟದಲ್ಲಿರೋರಿಗೆ ಹಂಚ್ತಿದೀನಿ, ಚುನಾವಣೆ ಸಮಯದಲ್ಲಿ ಹೋರಾಟಾನೂ ಮಾಡ್ತೀನಿ, ಆಡಳಿತ ಪಕ್ಷ, ವಿರೋದ ಪಕ್ಷ ಜನರಿಗೆ ಏನೂ ಮಾಡ್ದೆ ಸಂಪೂರ್ಣ ವಿಫಲ ಆಗಿದೆ ಅಂತ ಮಾಧ್ಯಮದಲ್ಲಿ ಕೂಗಿ ಹೇಳ್ತೀನಿ, ಇವರನ್ನೆಲ್ಲಾ ಕಿತ್ಹಾಕಿ ನನಗೆ ಒಂದು ಅವಕಾಶ ಕೊಡಿ.. ಹೀಗೆ ಸಾಗುತ್ತೆ ಉಪ್ಪಿ ಬರೆದಿರುವ ಪತ್ರ.
ಕೊರೊನಾ ಸಂದರ್ಭದಲ್ಲಿ ಉಪೇಂದ್ರ ಬಹಳ ಆಕ್ಟಿವ್ ಆಗಿ ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಪ್ರತಿದಿನ ಉಪ್ಪಿ ಮನೆಯ ಮುಂದೆ ಮಾರುದ್ದದ ಕ್ಯೂ ಇರುತ್ತದೆ. ಆಹಾರ ಸಾಮಗ್ರಿಳು, ದಿನಸಿ, ಔಷಧಿ ಹೀಗೆ ಅಗತ್ಯವಸ್ತುಗಳನ್ನು ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ ರಿಯಲ್ ಸ್ಟಾರ್.
ಅವರ ಈ ಸಮಾಜಮುಖಿ ಕೆಲಸಗಳು ಜನರ ಮನಸ್ಸು ಗೆದ್ದಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಉಪ್ಪಿಯ ಸುದೀರ್ಘ ಪತ್ರಕ್ಕೆ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ಈಗಿನ ಸಮಾಜದ ಉದ್ಧಾರಕ್ಕೆ ಉಪ್ಪಿ ಮುಖ್ಯಮಂತ್ರಿಯಾಗೋದೇ ಸರಿ ಎನ್ನುತ್ತಿದ್ದಾರೆ. ಜೊತೆಗೆ ಯುವಜನತೆ ಖಂಡಿತಾ ಇಂಥಾ ನಾಯಕನಿಗೆ ಬೆಂಬಲ ನೀಡುತ್ತದೆ ಎನ್ನುವ ಅಭಿಪ್ರಾಯಗಳೂ ಕೇಳಿಬಂದಿವೆ. ಅಂದ್ಹಾಗೆ ಉಪ್ಪಿಯ ಪತ್ರ ಇಲ್ಲಿದೆ:
ಆದರೆ ಇನ್ನು ಕೆಲವರು ನೀವು ಹಳ್ಳಿಗಳಿಗೆ ಹೋಗಿ ಕೆಲಸ ಮಾಡಿ, ಆಗ ಜನ ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಫೇಸ್ಬುಕ್, ಇನ್ಸ್ಟಾಗ್ರಾಂಗಳಲ್ಲಿ ಇರೋರು ನಗರವಾಸಿಗಳು, ನಮ್ಮದು ಹಳ್ಳಿಗಳ ದೇಶ. ಹಾಗಾಗಿ ಪಾದಯಾತ್ರೆಗಳನ್ನು ಮಾಡಿ ಹಳ್ಳಿಗಳಲ್ಲಿ ನಿಮ್ಮ ಕೆಲಸ ತೋರಿಸಿ. ಅಲ್ಲಿನ ಜನರ ವಿಶ್ವಾಸ ಪಡೆಯಿರಿ. ಆಗ ನೀವು ನಿಜವಾದ ನಾಯಕ ಎನ್ನಿಸಿಕೊಳ್ಳುತ್ತೀರಿ ಎಂದೂ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಪೇಂದ್ರ ತಮ್ಮ ‘ಸೂಪರ್’ ಚಲನಚಿತ್ರದಲ್ಲಿ ತಮ್ಮ ಕನಸಿನ ಕರ್ನಾಟಕದ ಪರಿಚಯ ಮಾಡಿಕೊಟ್ಟಿದ್ದರು. ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಪಕ್ಷ ಅಷ್ಟೇನೂ ಸದ್ದು ಮಾಡಲಿಲ್ಲ. ಆದರೆ ನಿಧಾನಕ್ಕೆ ತಾವು ರಾಜಕೀಯದಲ್ಲಿ ಬೇರೂರುವ ಭರವಸೆ ವ್ಯಕ್ತಪಡಿಸಿದ್ದಾರೆ.