ಪೊಲೀಸರಿಗೆ ಹ್ಯಾಂಡ್ ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ ಕಾಂಗ್ರೆಸ್ ಮುಖಂಡ ಅಬ್ದುಲ ಮುಶ್ರೀಫ್
ವಿಜಯಪುರ, ಮೇ.23-ನಗರದ ಜನಪ್ರಿಯ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್ ಅವರು ಫ್ರಂಟ್‍ಲೈನ್ ವಾರಿಯರ್ಸ್‍ಗಳಾಗಿರುವ ಪೊಲೀಸರಿಗೆ ಕೊರೊನಾ ರಕ್ಷಣಾ ಕವಚಗಳಾದ ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಬಾಟಲನ್ನು ವಿತರಿಸಿ, ಮಾನವೀಯತೆ ಮೆರೆದಿದ್ದಾರೆ.
ನಂತರ ಮಾತನಾಡಿದ ಮುಶ್ರೀಫ್ ಅವರು, ಕೊರೊನಾ ತಡೆಗೆ ತಮ್ಮ ಜೀವವನ್ನು ಲೆಕ್ಕಿಸದೇ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯವಾದದು. ಮಹಾಮಾರಿ ಕೊರೊನಾ ತಡೆಗೆ ಸಾರ್ವಜನಿಕರು ಸರಕಾರ ಮಾರ್ಗಸೂಚಿಗಳನ್ನು ಪಾಲಿಸಬೇಕು, ನಿಯಯಗಳನ್ನು ಉಲ್ಲಂಘಿಸಿದರೆ ಪೊಲೀಸರು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಯಾಗದೆ ನಾವೆಲ್ಲರೂ ಸಹಕಾರ ನಿಡಬೇಕು ಎಂದು ಹೇಳಿದರು.
ಪಾಲಿಕೆ ಮಾಜಿ ಸದಸ್ಯ ಅಬ್ದಲ್ ಮುಖಂಡರಾದ ಅಲ್ತಾಫ್ ಅಸ್ಕಿ, ಆರತಿ ಶಾಹಪುರ, ಶಬ್ಬೀರ ಜಹಾಗೀರದಾರ, ಶರಣಪ್ಪ ಯಕ್ಕುಂಡಿ, ಲಾಯಪ್ಪ ಬಿಜ್ಜರಗಿ, ರಾಕೇಶ, ಅಜೇಯ, ಮೊಹಿನ್, ಖಾಜಾಜಿ ಶೇಖ್, ಆರೋಗ್ಯ ಕೇಂದ್ರದ ನರ್ಸ್‍ಗಳು ಸೇರಿದಂತೆ ಮತ್ತಿತರರು ಇದ್ದರು.