ಮಾಜಿ ಪ್ರಧಾನಿ ದಿ/ರಾಜೀವ ಗಾಂಧಿ ಪುಣ್ಯಸ್ಮರಣೆ: ಬಡವರಿಗೆ ಆಹಾರ, ಔಷಧ ಕಿಟ್ ವಿತರಣೆ
ವಿಜಯಪುರ, ಮೇ.23-ದಿ.ಪ್ರಧಾನಿ ರಾಜೀವ ಗಾಂಧಿ ಪುಣ್ಯತಿಥಿ ನಿಮಿತ್ತ ಕಾಂಗ್ರೆಸ್ ಪಕ್ಷದ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರು ನಗರದ 2ನೇ ವಾರ್ಡ್, ಖಾಜಾ ಅಮೀನ್ ದರ್ಗಾದ ಬಳಿ ಬಡವರಿಗೆ ಆಹಾರ ಧಾನ್ಯ ಹಾಗೂ ಔಷಧ ಕಿಟ್‍ನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಹಲವು ಯೋಜನೆಗಳನ್ನು ಜಾರಿಗೆ ತಂದು, ಅಭಿವೃದ್ಧಿಯ ಹರಿಕಾರರಾಗಿದ್ದ ದಿ||ಪ್ರಧಾನಿ ರಾಜೀವ ಗಾಂಧಿ ಅವರ ಪುಣ್ಯತಿಥಿ ನಿಮಿತ್ತ ಬಡವರಿಗೆ ಆಹಾರ ಕಿಟ್ ಹಾಗೂ ಔಷಧದ ಕಿಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪಾಲಿಕೆ ಮಾಜಿ ಸದಸ್ಯ ಅಬ್ದಲ್ ಮುಖಂಡರಾದ ಅಲ್ತಾಫ್ ಅಸ್ಕಿ, ಆರತಿ ಶಾಹಪುರ, ಶಬ್ಬೀರ ಜಹಾಗೀರದಾರ, ಶರಣಪ್ಪ ಯಕ್ಕುಂಡಿ, ಲಾಯಪ್ಪ ಬಿಜ್ಜರಗಿ, ರಾಕೇಶ, ಅಜೇಯ, ಮೊಹಿನ್, ಖಾಜಾಜಿ ಶೇಖ್, ಆರೋಗ್ಯ ಕೇಂದ್ರದ ನರ್ಸ್‍ಗಳು ಸೇರಿದಂತೆ ಮತ್ತಿತರರು ಇದ್ದರು.