Zomato: ಝೊಮ್ಯಾಟೋದಿಂದ ಉದ್ಯೋಗಿಗಳಿಗೆ ಉಚಿತ ಲಸಿಕಾ ಅಭಿಯಾನ
ಭಾರತದಲ್ಲಿ ಕೋವಿಡ್ ಲಸಿಕೆ ಅಭಿಯಾನದ(COVID-19 Vaccination in India) ಮೂರನೇ ಹಂತವನ್ನು ಹೆಚ್ಚಿಸುವಲ್ಲಿ ಸಹಕರಿಸಲು, ಆನ್ಲೈನ್ ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೋ(Zomato), ತನ್ನ ದೆಹಲಿ ಮತ್ತು ಎನ್ಸಿಆರ್ ಪ್ರದೇಶದ ಡೆಲಿವರಿ ಪಾರ್ಟ್ನರ್ಗಳಿಗೆ ಲಸಿಕೆ ಹಾಕಿಸುವ ಉಪಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮ ಕಳೆದ ವಾರ ಆರಂಭವಾಗಿದೆ. ಈ ಕುರಿತು ಝೊಮ್ಯಾಟೊ ಸಿಇಒ ದಿಪಿಂದರ್ ಗೋಯಲ್(Zomato CEO Deepinder Goyal) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೆ ನೀಡಿದ್ದಾರೆ. ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು, ಝೊಮ್ಯಾಟೋ ಕೂಡ ತನ್ನ ಡೆಲಿವರಿ ಪಾರ್ಟ್ನರ್ಗಳಿಗೆ ನೀಡುವ ಲಸಿಕೆಗಳ ಖರ್ಚನ್ನು ಭರಿಸಿಸುತ್ತಿದ್ದು, ಅವರಿಗೆ ಅನುಕೂಲವಾಗುವಂತ ವ್ಯಾಕ್ಸಿನ್ ಸ್ಲಾಟ್ಗಳನ್ನು ಪಡೆಯಲು ಸಹಾಯ ಮಾಡುತ್ತಿದೆ.
“ಕಳೆದ ವಾರ ಎನ್ಸಿಆರ್ನಲ್ಲಿ ನಮ್ಮ ಡೆಲಿವರಿ ಪಾರ್ಟ್ನರ್ಗಳಿಗೆ ಲಸಿಕೆ ಹಾಕಿಸಲು ಆರಂಭಿಸಿದೆವು. ನಾವು ನಮ್ಮ 1,50,00ಕ್ಕೂ ಹೆಚ್ಚು ಮುಂಚೂಣಿ ಸಿಬ್ಬಂದಿ ಮತ್ತು ಉದ್ಯೋಗಿಗಳಿಗಾಗಿ ಉಚಿತ ಮತ್ತು ಸುರಕ್ಷಿತ ಲಸಿಕಾ ಕಾರ್ಯಕ್ರಮವನ್ನು ಆರಂಭಿಸಿದ್ದು, ಇದು ನಮ್ಮ ದೊಡ್ಡ ಮಟ್ಟದ ಪ್ರಯತ್ನವಾಗಿದೆ.ನಮ್ಮ ಸಾವಿರಾರು ಡೆಲಿವರಿ ಪಾರ್ಟ್ನರ್ಗಳು ಈಗಾಗಲೇ ಲಸಿಕೆ ಪಡೆದುಕೊಂಡಿದ್ದಾರೆ” ಎಂದು ಘೋಯಲ್(Deepinder Goyal)) ಬರೆದುಕೊಂಡಿದ್ದಾರೆ.
ಈ ಲಸಿಕಾ ಅಭಿಯಾನವನ್ನು(Vaccine Campaign) ದೇಶದ ಇತರ ಭಾಗಗಳಿಗೂ ವಿಸ್ತರಿಸಲಿದ್ದೇವೆ ಎಂದು ಘೋಯಲ್ ಘೋಷಿಸಿದ್ದಾರೆ. ಶನಿವಾರ ಮುಂಬೈ ಮತ್ತು ಬೆಂಗಳೂರಿನಲ್ಲಿ ಇದಕ್ಕೆ ಚಾಲನೆ ಸಿಗಲಿದೆ. ಮುಂದಿನ ವಾರದಲ್ಲಿ ಹಲವಾರು ನಗರಗಳ ಡೆಲಿವರಿ ಪಾರ್ಟ್ನರ್ಗಳು ಈ ಲಸಿಕಾ ಅಭಿಯಾನದ ಮೂಲಕ ಲಸಿಕೆಗಳನ್ನು ಪಡೆಯಲು ಸಾಧ್ಯವಾಗುವುದು ಎಂದು ಅವರು ತಿಳಿಸಿದ್ದಾರೆ.
“ಗ್ರಾಹಕರ ಸುರಕ್ಷತೆ, ನಮ್ಮ ಮೊದಲ ಆದ್ಯತೆ ಮತ್ತು ನಮ್ಮ ಡೆಲಿವರಿ ಪಾರ್ಟ್ನರ್ಗಳು ಈ ಕೋವಿಡ್ -19 ಹಾವಳಿಯ ದಿನಗಳಲ್ಲಿ ನಿಸ್ವಾರ್ಥವಾಗಿ ಮತ್ತು ಸುರಕ್ಷಿತವಾಗಿ ಸಾವಿರಾರು, ಲಕ್ಷಗಟ್ಟಲೆ ಆರ್ಡರ್ಗಳನ್ನು ತಲುಪಿಸಿದ್ದಾರೆ” ಎಂದು ಘೋಯಲ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
“ನಾವು ಮುಂದಿನ ದಿನಗಳಲ್ಲಿ ಹಲವಾರು ನಗರಗಳಲ್ಲಿ ಶಿಬಿರಗಳನ್ನು ಆಯೋಜಿಸಲಿದ್ದೇವೆ, ಮತ್ತು ಸ್ವಯಂ ಆಗಿ ಲಸಿಕೆ ಹಾಕಿಸಿಕೊಳ್ಳುವಂತೆ ನಮ್ಮ ಡೆಲಿವರಿ ಪಾರ್ಟ್ನರ್ಗಳಿಗೆ ಪ್ರೋತ್ಸಾಹ ನೀಡಲಿದ್ದೇವೆ. ವೆಚ್ಚವನ್ನು ಭರಿಸುವುದಕ್ಕಿಂತ ಮುಖ್ಯವಾಗಿ, ನಮ್ಮ ಡೆಲಿವರಿ ಪಾರ್ಟ್ನರ್ಗಳಿಗೆ ಅವರ ಪ್ರದೇಶಗಳಲ್ಲಿ ಸ್ಲಾಟ್ಗಳನ್ನು ಹುಡುಕಲು ಸಹಕರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ” ಎಂದವರು ತಿಳಿಸಿದ್ದಾರೆ.
ಕೋವಿಡ್ -19ನ ಈ ಕಠಿಣ ಪರಿಸ್ಥಿತಿಯಲ್ಲಿ ಹಲವಾರು ಕಂಪೆನಿಗಳು, ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕಿಸಲು ಮುಂದೆ ಬಂದಿವೆ. ವಿಪ್ರೋ ಕಂಪೆನಿಯು ಕೂಡ ಬರುವ ಜೂನ್ ತಿಂಗಳ ಒಳಗೆ, ತನ್ನ ಉದ್ಯೋಗಿಗಳು ಮತ್ತು ಅವರ ಅವಲಂಬಿತರಿಗಾಗಿ ಸುಮಾರು ಒಂದು ಲಕ್ಷ ಲಸಿಕೆಗಳ ವ್ಯವಸ್ಥೆ ಮಾಡುವ ಯೋಜನೆ ಹೊಂದಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.
ವಿಪ್ರೋ , ತನ್ನ ಉದ್ಯೋಗಿಗಳಿಗೆ ಲಸಿಕೆ ನೀಡಲು, ಭಾರತದಲ್ಲಿರುವ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಗಳ ಸಹಾಯ ಪಡೆದುಕೊಳ್ಳುವ ಯೋಜನೆ ಹೊಂದಿದೆ. ಈ ಬೃಹತ್ ಐಟಿ ಸಂಸ್ಥೆಯು ಒಟ್ಟು 1.9 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದು, ಅವರಲ್ಲಿ ಹೆಚ್ಚಿನವರು ಭಾರತದಲ್ಲಿದ್ದಾರೆ.
ಅದೇ ರೀತಿಯ ಸಂಸ್ಥೆಗಳಾದ ಇನ್ಫೋಸಿಸ್ ಮತ್ತು ಹೆಚ್ಸಿಎಲ್ ಟೆಕ್ಗಳು ಕೂಡ ತಮ್ಮ ಉದ್ಯೋಗಿಗಳಿಗಾಗಿ ಲಸಿಕಾ ಅಭಿಯಾನಗಳನ್ನು ಆರಂಭಿಸಿವೆ.