ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಸುಶೀಲ್ ಕುಮಾರ್ ಬಂಧನ

ನವದೆಹಲಿ, ಮೇ 23 – ಯುವ ಕುಸ್ತಿಪಟುವನ್ನು ಕೊಂದು ಪರಾರಿಯಾಗಿದ್ದ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ರನ್ನು ಇಂದು ಮುಂಜಾನೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಛತ್ರಸಾಲ್ ಕ್ರೀಡಾಂಗಣದಲ್ಲಿ ಸಾಗರ್ ರಾಣಾ ಎಂಬ ಯುವ ಕುಸ್ತಿಪಟುವಿನ ಕೊಲೆಯಲ್ಲಿ ಸುಶೀಲ್ ಕುಮಾರ್ ರ ಪಾತ್ರ ಇದೆ ಎಂಬ ಗುಮಾನಿ ಇತ್ತು ಅಂದಿನಿಂದಲೂ ಸುಶೀಲ್ ಹಾಗೂ ಆತನ ಸಹಚರ ಅಜೇಯ್ ತಲೆ ಮರೆಸಿಕೊಂಡಿದ್ದರು.

ಇಂದು ಬೆಳಗ್ಗೆ ಎಸಿಪಿ ಅತ್ತರ್ ಸಿಂಗ್, ಇನ್ಸ್ ಪೆಕ್ಟರ್ ಗಳಾದ ಶಿವಕುಮಾರ್ ಹಾಗೂ ಕರಮ್ ಬೀರ್ ರ ತಂಡ ಸುಶೀಲ್ ಕುಮಾರ್ ಹಾಗೂ ಅಜಯ್ ರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮೇ 4 ರಂದು ಛತ್ರಸಾಲ್ ಕ್ರೀಡಾಂಗಣದಲ್ಲಿ ಪಾರ್ಕಿಂಗ್ ವೇಳೆ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಹಾಗೂ ಅಜಯ್ ಅವರು ಯುವ ಕುಸ್ತಿಪಟುಗಳಾದ ಪ್ರಿನ್ಸ್, ಸೋನು, ಅಮಿತ್ ರಿಗೆ ಗಾಯಗೊಳಿಸಿ ಸಾಗರ್ ರಾಣಾರನ್ನು ಕೊಂದು ಪರಾರಿಯಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸುಶೀಲ್ ಕುಮಾರ್ ಹಾಗೂ ಅಜಯ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದರೆ, ದೆಹಲಿ ಪೊಲೀಸರು ಸುಶೀಲ್ ಪತ್ತೆಗೆ 1 ಲಕ್ಷ ಹಾಗೂ ಅಜಯ್ ಗೆ 50000 ಪ್ರಕಟಿಸಿತ್ತು.
ಇಂದು ಪೊಲೀಸರ ಬಲೆಗೆ ಬಿದ್ದಿರುವ ಸುಶೀಲ್ ಕುಮಾರ್ ಹಾಗೂ ಅಜಯ್ ಕುಮಾರ್ ರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *