ಕಲಬುರಗಿ ಲಾಕ್ಡೌನ್ ರೂಲ್ಸ್ ಬ್ರೇಕ್ : ಫೀಲ್ಡಿಗಿಳಿದು ಜನರಿಗೆ ಶಾಕ್ ಕೊಟ್ಟ ನೂತನ ಪೊಲೀಸ್ ಆಯುಕ್ತರು
ನಗರದ ಹಲವೆಡೆ ಸಂಚರಿಸಿ ವಾಹನ್ ಸೀಜ್ ಮಾಡಿದ ಕಮಿಷನರ್, ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸಿದರು. ಅಲ್ಲದೆ ಹಲವು ವಾಹನಗಳನ್ನ ಸೀಜ್ ಮಾಡಿದರು. ಜೊತೆಗೆ ಮತ್ತೊಮ್ಮೆ ರಸ್ತೆ ಮೇಲೆ ಕಾಣದಂತೆ ಜನರಿಗೆ ಎಚ್ಚರಿಕೆ ನೀಡಿದರು..
ಕಲಬುರಗಿ : ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕಲಬುರಗಿ ನಗರದ ನೂತನ ಪೊಲೀಸ್ ಕಮಿಷನರ್ ವೈ.ಎಸ್. ರವಿಕುಮಾರ್ ಅವರು ಫೀಲ್ಡ್‌ಗಿಳಿದು ಸುಖಾಸುಮ್ಮನೆ ರಸ್ತೆಮೇಲೆ ಓಡಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.
ನಗರದಲ್ಲಿ ಸೆಮಿ ಲಾಕ್ಡೌನ್ ಜಾರಿ ಇದ್ದರೂ ಸಹ ಕೆಲವರು 10 ಗಂಟೆಯ ನಂತರವೂ ಅನಗತ್ಯ ಓಡಾಡುತ್ತಿರುವುದು ಕಂಡು ಬಂತು. ಹೀಗಾಗಿ, ಸ್ವತಃ ರಸ್ತೆಗಿಳಿದ ಪೊಲೀಸ್ ಆಯುಕ್ತರು ಬೈಕ್ ಹಾಗೂ ಕಾರ್‌ಗಳು ಸೀಜ್ ಮಾಡುವ ಮೂಲಕ ವಾಹನ ಸವಾರರಿಗೆ ಶಾಕ್ ನೀಡಿದರು.ನಗರದ ಹಲವೆಡೆ ಸಂಚರಿಸಿ ವಾಹನ್ ಸೀಜ್ ಮಾಡಿದ ಕಮಿಷನರ್, ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸಿದರು. ಅಲ್ಲದೆ ಹಲವು ವಾಹನಗಳನ್ನ ಸೀಜ್ ಮಾಡಿದರು. ಜೊತೆಗೆ ಮತ್ತೊಮ್ಮೆ ರಸ್ತೆ ಮೇಲೆ ಕಾಣದಂತೆ ಜನರಿಗೆ ಎಚ್ಚರಿಕೆ ನೀಡಿದರು.