ದಾಸ ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿದ್ದು ಹೇಗೆ..? ದರ್ಶನ್ಗೆ ಚಾಲೆಂಜಿಂಗ್ ಸ್ಟಾರ್ ಬಿರುದು ದೊರೆತು ಎಷ್ಟು ವರ್ಷ ಆಯ್ತು ಗೊತ್ತಾ..?
ಸ್ಯಾಂಡಲ್ವುಡ್ನಲ್ಲಿ ದರ್ಶನ್ ಯಾರಿಗೆ ಗೊತ್ತಿಲ್ಲ ಹೇಳಿ..ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗು ಚಾಲೆಂಜಿಂಗ್ ಸ್ಟಾರ್ ಅಂತಲೇ ಫೇಮಸ್. ಇಂತಹ ಚಾಲೆಂಜಿಂಗ್ ಸ್ಟಾರ್ ಪಟ್ಟ ದರ್ಶನ್ಗೆ ಹೇಗೆ ಬಂದಿದ್ದು ಗೊತ್ತಾ..? ಚಾಲೆಂಜಿಂಗ್ ಹೀರೋ ಆಗಿದ್ದ ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿದ್ಹೇಗೆ ಈ ಸ್ಟೋರಿ ನೋಡಿ..
ಚಾಲೆಂಜಿಂಗ್ ಸ್ಟಾರ್ ದರ್ಶನ್..ಅಭಿಮಾನಿಗಳ ಪ್ರೀತಿಯ ‘ಒಡೆಯ’..ಬಾಕ್ಸ್ ಅಫೀಸ್ ಸುಲ್ತಾನ್..ಮಾಸ್ ಮಹಾರಾಜ.. ಹೆಸರಲ್ಲೇ ಒಂಥಾರ ಧಮ್..ದಾಸ ಹಾಕಿದ್ದೇ ಹೆಜ್ಜೆ, ನಡೆದಿದ್ದೇ ದಾರಿ..ಖಡಕ್ ಮಾತು, ರಗಡ್ ಲುಕ್, ಡೈನಾಮಿಕ್ ವ್ಯಕ್ತಿತ್ವ, ಮಾಸ್ಗೆ ಬಾಸ್ ಅಂದ್ರೆ ಓನ್ ಎಂಡ್ ಓನ್ಲೀ ದಾಸ ದರ್ಶನ್..
ಕನ್ನಡ ಚಿತ್ರರಂಗದಲ್ಲಿ ಮಾಸ್ ಎಂಡ್ ಕ್ಲಾಸ್ ಹೀರೋ ಅಂದ್ರೆ ‘ಸಾರಥಿ’ ದರ್ಶನ್.. ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಅಂದ್ರೆ ದರ್ಶನ್ ತೂಗುದೀಪ್. ಯಾಕಂದ್ರೆ ಚಾಲೆಂಜಿಂಗ್ ಸ್ಟಾರ್ ಕನ್ನಡಿಗರ ನೆಚ್ಚಿನ ಹೀರೋ.. ಕೋಟ್ಯಾಂತರ ಅಭಿಮಾನಿಗಳಿಗೆ ದಚ್ಚು ಅಂದ್ರೆ ಪಂಚ ಪ್ರಾಣ. ಅಭಿಮಾನಿಗಳು ಅಂದ್ರೆ ದರ್ಶನ್ಗೂ ಸಿಕ್ಕಾಪಟ್ಟೆ ಪ್ರೀತಿ. ಮೊದಲ ಸಿನಿಮಾದಲ್ಲಿ ದರ್ಶನ್ ದಾಸ ಪಾತ್ರದ ಮೂಲಕ ಮೋಡಿ ಮಾಡಿರೋ ದರ್ಶನ್ಗೆ, ಫ್ಯಾನ್ಸ್ ದಾಸ ದರ್ಶನ್ ಅಂತ ಬಿರುದು ಕೊಟ್ರು…
2002 ರಿಂದ ದಾಸ ದರ್ಶನ್ ಅಂತಲೇ ಫೇಮಸ್ ಆಗಿರೋ ದರ್ಶನ್ಗೆ, ಹದಿನೆಂಟು ವರ್ಷದ ಹಿಂದೆ ಅಂದ್ರೆ 2003 ಮೇ 23 ರಂದು ಮೈಸೂರಿನ ಹುಣಸೂರಿನ ಬಳಿಯಿರುವ ಹುಟ್ಕಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ದರ್ಶನ್ಗೆ ಚಾಲೆಂಜಿಂಗ್ ಹೀರೋ ಎಂಬ ಬಿರುದು ನೀಡಿ ಗೌರವಿಸಲಾಗಿತ್ತು. ನಂತ್ರ ‘ಚಾಲೆಂಜಿಂಗ್ ಹೀರೋ’ ಅಂತ ಅಭಿಮಾನಿಗಳು ಕರೆಯುತ್ತಿದ್ರು. ದಿನ ಕಳೆದಂತೆ ಚಾಲೆಂಜಿಂಗ್ ಹೀರೋ ಇದ್ದ ಬಿರುದು ಚಾಲೆಂಜಿಂಗ್ ಸ್ಟಾರ್ ಆಯ್ತು. ಈಗ ಎಲ್ಲ ಕಡೆ..ಎಲ್ಲ ಅಭಿಮಾನಿಗಳ ಮನದಲ್ಲಿ ಚಾಲೆಂಜಿಂಗ್ ಸ್ಟಾರ್ ಅಂತಲೇ ಫೇಮಸ್ ಆಗಿದ್ದಾರೆ.
ದರ್ಶನ್ ಚಿಕ್ಕ ವಯಸ್ಸಿನಲ್ಲಿ ಹಾಲು ಮಾರುವ ಹುಡುಗನ್ನಾಗಿ, ನಂತ್ರದ ದಿನಗಳಲ್ಲಿ ಚಿತ್ರರಂಗದಲ್ಲಿ ಲೈಟ್ ಭಾಯ್ ಆಗಿ ಕಷ್ಟಪಟ್ಟು ಕೆಲಸ ಮಾಡಿದ್ರು. ಇದೀಗ ಕಷ್ಟದ ಪ್ರತಿಫಲ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಈಗ ಚಾಲೆಂಜಿಂಗ್ ಸ್ಟಾರ್, ಡಿಬಾಸ್, ಬಾಕ್ಸ್ ಆಫೀಸ್ ಸುಲ್ತಾನ್ ಹೀಗೆ ನಾನಾ ಹೆಸ್ರುಗಳಿಂದ ಕರೆಸಿಕೊಳ್ಳುವ ದರ್ಶನ್, ಬಿಗ್ ಸ್ಟಾರ್ ಆಗಿ ಮೋಡಿ ಮಾಡ್ತಿದ್ದಾರೆ.