ಕರೋನಾ ಕಾಲದಲ್ಲಿ ತರಕಾರಿ ಖರೀದಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ.!
ಬೆಂಗಳೂರು : ಹೇಳಿ ಕೇಳಿ ಇದು ಕರೋನಾ ಮಹಾಮಾರಿ (Coronavirus) ಹರಡುತ್ತಿರುವ ದುರ್ಬಿಕ್ಷ ಕಾಲ. ಈ ಹೊತ್ತಿನಲ್ಲಿ ಆದಷ್ಟು ಮನೆಯೊಳಗಿದ್ದರೆ ಸೇಫ್. ಇಲ್ಲದೇ ಹೋದರೆ ಅಪಾಯ ತಪ್ಪಿದ್ದಲ್ಲ. ಆದರೆ ಹಾಲು (Milk) , ಹಣ್ಣು ತರಕಾರಿಗಾಗಿ (Vegetable) ಮನೆ ಬಿಟ್ಟು ಹೊರಗೆ ಹೋಗಲೇ ಬೇಕಾಗುತ್ತದೆ. ಈ ಹೊತ್ತಿನಲ್ಲಿ ತರಕಾರಿ, ಹಣ್ಣು ಫ್ರೆಶ್ ಇದ್ದಷ್ಟು ಒಳ್ಳೆಯದು. ಫ್ರಿಜ್ ನಲ್ಲಿಟ್ಟ ತರಕಾರಿ, ಹಣ್ಣನ್ನು ದೂರ ಇಡುವುದೇ ಸೂಕ್ತ. ಜೊತೆಗೆ ನಮ್ಮ ಇಮ್ಯೂನಿಟಿ (Immunity) ಹೆಚ್ಚಿಸಲು ನಮ್ಮ ಊಟೋಪಚಾರದಲ್ಲಿ ಸಾಕಷ್ಟು ಹಸಿರು ತರಕಾರಿ, ಫ್ರೆಶ್ ಹಣ್ಣು ಇರಲೇ ಬೇಕು. ಹಾಗಾಗಿ, ಅದನ್ನೆಲ್ಲಾ ತರಲು ನೀವು ಮಾರುಕಟ್ಟೆಗೆ ಹೋಗಲೇ ಬೇಕು. ಆದರೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುವಾಗ ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ.
ಹಣ್ಣು, ತರಕಾರಿ ಖರೀದಿಸುವಾಗ ಈ ತಪ್ಪುಗಳನ್ನು ಮಾಡಬೇಡಿ :
1. ತರಕಾರಿ (Vegetables) ಖರೀದಿಗೆ ಮಾರುಕಟ್ಟೆಗೆ ಹೋಗುವಾಗ ಖಂಡಿತಾ ಮಾಸ್ಕ್ (Mask) ಸರಿಯಾದ ರೀತಿಯಲ್ಲಿ ಧರಿಸಿ
2. ಹಣ್ಣು ಖರೀದಿಸುವಾಗ ದಟ್ಟಣೆ ಇದ್ದರೆ ಆ ಜಾಗಕ್ಕೆ ಹೋಗಬೇಡಿ
3. ಅಂಗಡಿಯವನಿಗೂ ನಿಮಗೂ ಕನಿಷ್ಠ 6 ಅಡಿ ದೂರವಿರಲಿ
4. ಅಂಗಡಿಯಾತನಿಗೆ ಮಾಸ್ಕ್ (Mask) ಸರಿಯಾಗಿ ಹಾಕಿಕೊಳ್ಳುವಂತೆ ತಾಕೀತು ಮಾಡಿ
5. ಅಂಗಡಿಗೆ ಬಂದಿರುವ ಇತರ ಗ್ರಾಹಕರಿಂದಲೂ (Customer) 6 ಅಡಿ ದೂರ ಇರಿ.
6. ಆದಷ್ಟೂ ತಾಜಾ ಹಣ್ಣು ತರಕಾರಿ ಖರೀದಿಸಿ
7. ಹೋಂ ಡೆಲಿವರಿ (Home delivery) ಹುಡುಗ ಮನೆಯ ಬಾಗಿಲ ಹ್ಯಾಂಡಲ್, ಡೋರ್ ಬೆಲ್, ಬ್ಯಾಗ್ ಮುಟ್ಟಿದ್ದರೆ ಅದನ್ನೂ ಸ್ಯಾನಿಟೈಸ್ ಮಾಡಿ.
8. ಹಣ್ಣು, ತರಕಾರಿ ಮನೆಗೆ ತಂದ ಮೇಲೆ ಬಿಸಿ ನೀರು (Hot water) ಮತ್ತು ಉಪ್ಪು ಹಾಕಿ ಚೆನ್ನಾಗಿ ತೊಳೆಯಿರಿ.
9. ತೊಳೆದಾದ ಮೇಲೆ ಕನಿಷ್ಠ 2 ಗಂಟೆ ಹಾಗೆ ಬಿಡಿ
10. ತರಕಾರಿ ತೊಳೆಯಲು ಅಡುಗೆ ಸೋಡಾ (Baking Soda) ಕೂಡಾ ಬಳಸಬಹುದು.