ಸಪ್ನಾ ಬುಕ್ ಹೌಸ್ ನ ಸುರೇಶ್ ಷಾ ನಿಧನ
ಕನ್ನಡ ಪುಸ್ತಕ ಸಂಸ್ಕೃತಿಗೆ ಗಮನಾರ್ಹ ಕೊಡುಗೆ ಕೊಟ್ಟ ಸಪ್ನಾ ಬುಕ್ ಹೌಸ್ ನ ಸುರೇಶ್ ಷಾ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸಂತಾಪ ಸೂಚಿಸಿದ್ದಾರೆ.
ಕನ್ನಡ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟಕ್ಕೆ ಸಪ್ನಾ ಬುಕ್ ಹೌಸ್ ಕೊಟ್ಟ ಕೊಡುಗೆ ದೊಡ್ಡದು.
ರಾಜ್ಯದ ಪುಸ್ತಕೋದ್ಯಮಕ್ಕೆ ಸಪ್ನಾ ಬುಕ್ ಹೌಸ್ ಹೊಸ ಸಾಧ್ಯತೆಗಳನ್ನು ಪರಿಚಯಿಸಿತು.
ಅದನ್ನು ಬೆಳೆಸುವಲ್ಲಿ ಸುರೇಶ ಷಾ ಅವರ ಕೊಡುಗೆ ಅಪಾರ. ಅವರ ನಿಧನದಿಂದ ಕನ್ನಡ ಪುಸ್ತಕ ಲೋಕ ದೊಡ್ಡ ನಷ್ಟ ಅನುಭವಿಸಿದೆ.
ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತನು ನೀಡಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.