Lunar eclipse 2021: ಇಂದು ವರ್ಷದ ಮೊದಲ ಚಂದ್ರ ಗ್ರಹಣ, ಈ ವಸ್ತುಗಳನ್ನು ದಾನ ಮಾಡಿದರೆ ಈ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ
ಬೆಂಗಳೂರು: ಚಂದ್ರ ಗ್ರಹಣ ಅಥವಾ ಸೂರ್ಯಗ್ರಹಣವು ಖಗೋಳ ಘಟನೆಯಾಗಿದೆ, ಆದರೆ ಧಾರ್ಮಿಕವಾಗಿಯೂ ಕೂಡ ಗ್ರಹಣಗಳು ಮಹತ್ವ ಎಂದು ಪರಿಗಣಿಸಲಾಗುತ್ತದೆ. ಸೂರ್ಯ, ಭೂಮಿ ಮತ್ತು ಚಂದ್ರರು ಸಾಲಿನಲ್ಲಿ ಬಂದು ಭೂಮಿಯ ನೆರಳು ಚಂದ್ರನ ಮೇಲೆ ಬೀಳಲು ಪ್ರಾರಂಭಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ವರ್ಷದ ಮೊದಲ ಚಂದ್ರ ಗ್ರಹಣ 26 ಮೇ 2021 ರಂದು ಅಂದರೆ ಬುಧವಾರ ನಡೆಯಲಿದೆ. ಇಂದು ಮಧ್ಯಾಹ್ನ 3.15 ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, ಸಂಜೆ 6.23 ಕ್ಕೆ ಪೂರ್ಣಗೊಳ್ಳಲಿದೆ.
ಚಂದ್ರ ಗ್ರಹಣ (Lunar Eclipse) ಸಮಯದಲ್ಲಿ ಪೂಜೆ ಮಾಡುವುದು ಅಥವಾ ಯಾವುದೇ ಶುಭ ಕೆಲಸ ಮಾಡುವುದು ನಿಷೇಧ ಎಂದು ಪರಿಗಣಿಸಲಾಗುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ, ಈ ಅವಧಿಯಲ್ಲಿ ದಾನ ಮಾಡುವುದು ವಿಶೇಷವಾಗಿ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ಗ್ರಹಣದ ಕೆಟ್ಟ ಪರಿಣಾಮಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ಅನೇಕ ಸಮಸ್ಯೆಗಳಿಂದ ನಿಮ್ಮನ್ನು ಪಾರು ಮಾಡುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಚಂದ್ರ ಗ್ರಹಣ ಸಮಯದಲ್ಲಿ ಯಾವ ವಸ್ತುಗಳನ್ನು ದಾನ ಮಾಡುವುದು ಪ್ರಯೋಜನಕಾರಿ ಎಂದು ತಿಳಿಯಿರಿ.
* ಹಣಕಾಸಿನ ಸಮಸ್ಯೆಗಳನ್ನು ನಿವಾರಣೆಗೆ ಇವುಗಳನ್ನು ದಾನ ಮಾಡಿದರೆ ಒಳ್ಳೆಯದು:
ಜ್ಯೋತಿಷ್ಯದ ಪ್ರಕಾರ, ಚಂದ್ರ ಗ್ರಹಣ ದಿನದಂದು ಬಿಳಿ ವಸ್ತುಗಳನ್ನು ದಾನ ಮಾಡುವುದು ತುಂಬಾ ಪ್ರಯೋಜನಕಾರಿ. ಬಿಳಿ ವಸ್ತುಗಳು ಚಂದ್ರನಿಗೆ (Moon) ಸಂಬಂಧಿಸಿವೆ ಎಂದು ನಂಬಲಾಗಿದೆ. ಚಂದ್ರ ಗ್ರಹಣ ಸಮಯದಲ್ಲಿ ಅಕ್ಕಿ ದಾನ ಮಾಡಬೇಕು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಮನೆಯಲ್ಲಿ ಹಣದ ಕೊರತೆ ಎಂದಿಗೂ ಕಾಡುವುದಿಲ್ಲ ಎಂದು ನಂಬಲಾಗಿದೆ.
* ರೋಗವನ್ನು ತೊಡೆದುಹಾಕಲು ಇದನ್ನು ದಾನ ಮಾಡಿ:
ಜ್ಯೋತಿಷ್ಯದ ಪ್ರಕಾರ, ನಿಮ್ಮ ಮನೆಯ ಸದಸ್ಯರು ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಬೆಳ್ಳಿಯನ್ನು ದಾನ ಮಾಡಬೇಕು. ಇದಕ್ಕಾಗಿ, ಒಂದು ಬೆಳ್ಳಿಯ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಒಂದು ಬೆಳ್ಳಿ ನಾಣ್ಯವನ್ನು ಹಾಕಿ ಅದರಲ್ಲಿ ಅದರ ನೆರಳು ನೋಡಿ ಆ ಬಟ್ಟಲು ಮತ್ತು ನಾಣ್ಯವನ್ನು ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಅಗತ್ಯವಿರುವ ವ್ಯಕ್ತಿಗೆ ಮಾತ್ರ ದೇಣಿಗೆ ನೀಡಬೇಕು ಎಂಬುದನ್ನು ನೆನಪಿನಲ್ಲಿಡಿ.
ಎಳ್ಳಿನ ದಾನದಿಂದಲೂ ಸಿಗಲಿದೆ ಪ್ರಯೋಜನ:
ಜ್ಯೋತಿಷ್ಯ ಪ್ರಕಾರ, ನಿಮ್ಮ ಜೀವನದಲ್ಲಿ ಒಂದರ ನಂತರ ಒಂದರಂತೆ ಸಮಸ್ಯೆಗಳಿವೆ. ಆಸ್ತಿ ಅಥವಾ ಸಂಪತ್ತಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಗ್ರಹಣ ದಿನದಂದು ಎಳ್ಳನ್ನು ದಾನ ಮಾಡುವುದು ಪ್ರಯೋಜನಕಾರಿ. ಇದು ವೃತ್ತಿಯಲ್ಲಿ ನಿಮಗೆ ಎದುರಾಗುವ ಸಮಸ್ಯೆಗಳು ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ.