Coronavirus Found In Water: ನೀರಿನಲ್ಲಿ ಪತ್ತೆಯಾದ ಕೊರೊನಾ ವೈರಸ್, ಮೂರು ಕಡೆಗಳಿಂದ ಸ್ಯಾಂಪಲ್ ಸಂಗ್ರಹ

ಲಖನೌ: Coronavirus Found In Water – ಕೊರೊನಾ ಮಹಾಮಾರಿಯ ಎರಡನೇ ಅಲೆಯ (Coronavirus Second Wave) ಹಿನ್ನೆಲೆ ಈ ಅಲೆಯನ್ನು ಹತೋಟಿಗೆ ತರಲು ಎಲ್ಲ ರಾಜ್ಯ ಸರ್ಕಾರಗಳು ಅದನ್ನು ನಿಯಂತ್ರಣಕ್ಕೆ ತರಲು ನಿರಂತರ ಪ್ರಯತ್ನದಲ್ಲಿ ತೊಡಗಿವೆ. ಏತನ್ಮಧ್ಯೆ ಉತ್ತರ ಪ್ರದೇಶದ ರಾಜಧಾನಿ ಲಖನೌನ್ ನ ಸೀವೇಜ್ ವಾಟರ್ ನಲ್ಲಿ ಕೋರೋನಾ ವೈರಸ್ ಪತ್ತೆಯಾಗಿರುವುದರಿಂದ ತೀವ್ರ ಕೋಲಾಹಲ ಸೃಷ್ಟಿಯಾಗಿದೆ. ಲಖನೌನ PGI (PGI Lucknow) ಈ ನೀರಿನ ಸ್ಯಾಂಪಲ್ ನ ಪರೀಕ್ಷೆ ನಡೆಸಿದೆ. ಇದಾದ ಬಳಿಕ ನೀರಿನಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಈ ಕುರಿತು ಹೇಳಿಕೆ ನೀಡಿರುವ PGI ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ.ಉಜ್ವಲಾ ಘೋಶಾಲ್, ICMR-WHO ಮೂಲಕ ದೇಶದಲ್ಲಿ ಸೀವೇಜ್ ಸ್ಯಾಂಪಲಿಂಗ್ ಕಾರ್ಯ ಆರಂಭವಾಗಿದೆ. ಇದರ ಅಡಿಯಲ್ಲಿ ಉತ್ತರ ಪ್ರದೇಶದಲ್ಲಿಯೂ ಕೂಡ ನಮೂನೆಗಳನ್ನು ಸಂಗ್ರಹಿಸಲಾಗಿದೆ ಎಂದಿದ್ದಾರೆ.

ಎಸ್‌ಜಿಪಿಐ ಲ್ಯಾಬ್‌ನಲ್ಲಿ ಬಂದ ಒಳಚರಂಡಿ ನೀರಿನಲ್ಲಿ ಮಾದರಿ  ವೈರಸ್ ಇರುವುದು ದೃಢಪಟ್ಟಿದೆ. ಲಖನೌನ ಖಾದ್ರಾದ ರುಕ್ಪುರ್, ಘಂಟಾಘರ್ ಮತ್ತು ಮಚಲಿ ಮೊಹಲ್ಲಾ ಪ್ರದೇಶಗಳಿಂದ  ಒಳಚರಂಡಿ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇಡೀ ಮೊಹಲ್ಲಾ ಪ್ರದೇಶದ ಒಳಚರಂಡಿ ನೀರು ಒಂದೆಡೆ ಬೀಳುತ್ತದೆ.  ಮೇ 19 ರಂದು ಈ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ  ಮತ್ತು ರುಕ್ಪುರ್ ಖಾದ್ರಾದ ಒಳಚರಂಡಿ ಮಾದರಿಯಲ್ಲಿ ಕರೋನಾ ವೈರಸ್ ಇರುವುದು ಪತ್ತೆಯಾಗಿದೆ. ಈ ಕುರಿತು ಐಸಿಎಂಆರ್ (ICMR) ಹಾಗೂ ಡಬ್ಲ್ಯುಎಚ್‌ಒಗೆ (WHO) ವರದಿ ಮಾಡಲಾಗಿದ್ದು,  ಪ್ರಸ್ತುತ ಇದು ಪ್ರಾಥಮಿಕ ಅಧ್ಯಯನವಾಗಿದೆ ಎಂದು ಘೋಶಾಲ್ ಹೇಳಿದ್ದಾರೆ. ಭವಿಷ್ಯದಲ್ಲಿ ಈ ಕುರಿತು ಸುದೀರ್ಘ ಅಧ್ಯಯನ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಮಲದಿಂದ ನೀರಿಗೆ ವೈರಸ್ ತಲುಪಬಹುದು
ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಡಾ. ಉಜ್ವಲಾ ಘೋಶಾಲ್, ಕೇಳೆ ದಿನಗಳ ಹಿಂದೆ PGI ರೋಗಿಗಳ ಅಧ್ಯಯನ ನಡೆಸಲಾಗಿತ್ತು. ಈ ವೇಳೆ ಮಲದಲ್ಲಿರುವ ವೈರಸ್ ನೀರಿಗೆ ಸೇರುವ ಸಾಧ್ಯತೆಯನ್ನು ವರ್ತಿಸಲಾಗಿತ್ತು. ಹೀಗಿರುವಾಗ ಕೊರೊನಾ ವೈರಸ್ (Coronavirus) ನಿಂದ ಬಳಲುತ್ತಿರುವ ರೋಗಿಗಳ ಮಲದಿಂದ ವೈರಸ್ ಸೀವೇಜ್ ಗೆ ತಲುಪಿರಬಹುದು ಎಂಬ ಅಂದಾಜು ವ್ಯಕ್ತಪಡಿಸಲಾಗುತ್ತಿದೆ. ಈ ಕುರಿತು ನಡೆದ ಮತ್ತೊಂದು ಸಂಶೋಧನಾ ಅಧ್ಯಯನದಲ್ಲಿ ಶೇ.50 ರಷ್ಟು ಕೊರೊನಾ ರೋಗಿಗಳ ಮಲದಿಂದ ವೈರಸ್ ಸೀವೇಜ್ ವರೆಗೆ ತಲುಪುತ್ತವೆ ಎಂದು ಕೂಡ ಹೇಳಲಾಗಿತ್ತು.

ನೀರಿನಿಂದ ಸೋಂಕಿತರಾಗುವ ಕುರಿತಾದ ಅಧ್ಯಯನ
ಸೀವೇಜ್ ಮೂಲಕ ನೀರು ನದಿಗಳವರೆಗೆ ತಲುಪುತ್ತದೆ. ಹೀಗಿರುವಾಗ ಇದು ಸಾಮಾನ್ಯ ಜನರ ಪಾಲಿಗೆ ಎಷ್ಟೊಂದು ಅಪಾಯಕಾರಿ ಸಾಬೀತಾಗಲಿದೆ ಎಂಬುದರ ಅಧ್ಯಯನ ಕೈಗೊಳ್ಳುವುದು ಇನ್ನೂ ಬಾಕಿ ಇದೆ ಎಂದು ಡಾ. ಉಜ್ವಲಾ ಘೋಶಾಲ್ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *