ಕರೊನಕ್ಕೆ ಬಲಿಯಾದ ಭೋಗಾನಿಂಗದಳ್ಳಿ ಶಾಲೆಯ ಶಿಕ್ಷಕ ಮರೆಪ್ಪ ಎಂ ಸನದಿ
ಹೌದು ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಮರೆಪ್ಪ ಎಂ ಸನದಿ ಮು //ಹುಲಸಗೂಡ ಇವರು ಕೊರೊನಾ ಎಂಬ ಮಹಾಮಾರಿಯ ಎರಡನೇ ಅಲೆ ಅಟ್ಟಹಾಸಕ್ಕೆ ಬಲಿಯಾಗಿದ ಇವರು ಮುಗ್ಧ ಮನಸ್ಸಿನ ವ್ಯಕ್ತಿ ಆಗಿದ್ದರು .ಹಾಗೂ ಸದಾ ಯಾವಾಗಲೂ ಹಸನ್ಮುಖಿಯಾಗಿ ಎಲ್ಲರನ್ನೂ ನಗಿಸುತ್ತಾ ಹಾಗೂ ತನ್ನ ಶಿಕ್ಷಕರ ವರ್ಗಕ್ಕೆ ಮಾದರಿಯಾಗಿರುವಂತಹ ಇವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಭೋಗಾನಿಂಗದಳ್ಳಿ ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ . ಇವರು ಸಾವನ್ನಪ್ಪಿದ್ದಾರೆ ಮರುಕ್ಷಣದಿಂದ .ಹೆಂಡತಿ ಮಕ್ಕಳ ಗೋಳು ಕೇಳಲು ಕರಳು ಕಿತ್ತಿ ಬರುತ್ತದೆ . ತಂದೆಯ ಪ್ರೀತಿ ಮಮತೆ ಕರುಣೆ ಎಲ್ಲಾನೂ ಇವತ್ತಿಂದ ದೂರಾಯಿತು ಎಂದು ಮಕ್ಕಳು ಗೋಳಾಡುತ್ತಿದ್ದರು ತಂದೆಯ ಶವ ಮುಟ್ಟಿನು ಅಳುವಂತಿಲ್ಲ .ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. ಕೋರೊನಾ ಎಂಬ ಮಹಾಮಾರಿಯನ್ನು ಇವರಿಗೆ ಒಕ್ಕರಿಸಿಕೊಂಡು ನಿನ್ನೆ ರಾತ್ರಿ 9ಗಂಟೆಗೆ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಇವರು ಕೊನೆಯ ಉಸಿರು ಎಳೆದರು .ಇವರ ಅಂತ್ಯಸಂಸ್ಕಾರ ತನ್ನ ಹುಟ್ಟೂರು ಆಗಿರುವಂತಹ .ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಹುಲಸಗೋಡು ಗ್ರಾಮದಲ್ಲಿ ನೆರವೇರಿಸಲಾಯಿತು. ದಿನದಿಂದ ದಿನಕ್ಕೆ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಸಾರ್ವಜನಿಕ ಜಾಗೃತಿಯಿಂದ ಇರಬೇಕು ಎಂಬುವುದೇ ನಮ್ಮ ಆಶೆಯ ವರದಿ ಶಿವರಾಜ್ ಕಟ್ಟಿಮನಿ