ಸಿ.ಡಿ ಯುವತಿ ಮತ್ತು ಆಕೆಯ ಕಡೆಯವರಿಗೆ ಕೋಟಿ ಕೋಟಿ ಹಣ ನೀಡಿದ್ದರು ರಮೇಶ್ ಜಾರಕಿಹೊಳಿ!
ಹೈಲೈಟ್ಸ್:
- ರಮೇಶ್ ಜಾರಕಿಹೊಳಿ ಸಿ.ಡಿ ಕೇಸ್‌ಗೆ ಹೊಸ ಟ್ವಿಸ್ಟ್
- ಸಿ.ಡಿ ಯುವತಿಗೆ ಜಾರಕಿಹೊಳಿಯಿಂದ ಕೋಟಿ ಹಣ
- ಪೊಲೀಸ್ ವಿಚಾರಣೆ ವೇಳೆ ರಮೇಶ್ ಹೇಳಿದ್ದೇನು?
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸಿ.ಡಿ ಯುವತಿ ಮತ್ತು ಆಕೆಯ ಕಡೆಯವರಿಗೆ ಆರೇಳು ಬಾರಿ ಹಣ ಕೊಟ್ಟಿರುವ ವಿಚಾರವನ್ನು ತನಿಖಾ ತಂಡದ ಎದುರು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ವಿಡಿಯೋಗಳನ್ನು ತೋರಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಸಿದ ಕಾರಣ ಲಕ್ಷದಿಂದ ಕೋಟಿ ರೂ.ವರೆಗೆ ತಮ್ಮ ಆಪ್ತರ ಕಡೆಯಿಂದ ಹಣ ಕೊಟ್ಟಿ ದ್ದೇನೆ ಎಂದಿದ್ದಾರೆ.
ಯುವತಿ ಜತೆ ನಿರಂತರ ಸಂಪರ್ಕದಲ್ಲಿದ್ದೆವು. ಹೀಗಿರುವಾಗ ಕೆಲವು ತಿಂಗಳ ಹಿಂದೆ ವಿಡಿಯೋಗಳನ್ನು ಆಕೆ ನನ್ನ ಮೊಬೈಲ್‌ಗೆ ಕಳುಹಿಸಿದ್ದಳು. ಹೀಗಾಗಿ, ಹಣ ಕಳುಹಿಸಿದ್ದೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಖಚಿತಪಡಿಸದ ಪೊಲೀಸರು!
ಯುವತಿಯೊಂದಿಗೆ ಸಂಪರ್ಕ ಮತ್ತು ಹಣ ಕೊಟ್ಟಿರುವ ವಿಚಾರವನ್ನು ಮಾಜಿ ಸಚಿವ ಜಾರಕಿಹೊಳಿ ಬಾಯ್ಬಿಟ್ಟಿ ದ್ದಾರೆ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಲ್ಲ. ತನಿಖೆ ಹಂತದಲ್ಲಿರುವ ಕಾರಣ ಈ ಬಗ್ಗೆ ಏನು ಹೇಳ ಲಾಗದು ಎಂದು ಹೇಳುತ್ತಿದ್ದಾರೆ.
ನಿರೀಕ್ಷಣಾ ಜಾಮೀನು ಕೋರಿದ ಆರೋಪಿಗಳು: ಸಿ.ಡಿ ಬಹಿರಂಗ ವಾದ ಬಳಿಕ ತಲೆಮರೆಸಿ ಕೊಂಡಿರುವ ಶಂಕಿತ ಆರೋಪಿಗಳಾದ ನರೇಶ್‌ಗೌಡ ಮತ್ತು ಶ್ರವಣ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೇ 29ಕ್ಕೆ ಅರ್ಜಿ ವಿಚಾರಣೆ ನಡೆಯಲಿದೆ.