Astrology: ವೃಷಭ ರಾಶಿಯವರಿಗೆ ಈ ದಿನ ಧನಾಗಮನ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಮೇಷ ರಾಶಿ: ವೃತ್ತಿ ಜೀವನದ ಯಶಸ್ಸಿಗೆ ಪ್ರಯತ್ನಿಸುತ್ತಿದ್ದರೆ, ಅದಕ್ಕೆ ಸ್ಪೂರ್ತಿ ತುಂಬುವ ಕೆಲಸ ಆಗಲಿದೆ. ವ್ಯಪಾರದಲ್ಲಿ ತೊಡಗಿದ್ದರೆ ಅವರಿಗೆ ಇಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ವೃಷಭ ರಾಶಿ: ಷೇರು ಮಾರುಕಟ್ಟೆಯಲ್ಲಿ ತೊಡಗಿದ್ದರೆ ಲಾಭಾ ಆಗಲಿದೆ. ಬಂಡಾವಳ ಹೂಡಿಕೆಗೆ ಇಂದು ಅತ್ಯಂತ ಒಳ್ಳೆಯ ದಿನ. ಇಂದು ಮಹಾಲಕ್ಷ್ಮೀ ಪ್ರಾರ್ಥನೆ ಸಲ್ಲಿಸಿದರೆ ಹೆಚ್ಚಿನ ಲಾಭಾವಾಗಲಿದೆ

ಮಿಥುನ ರಾಶಿ: ಆರೋಗ್ಯದಲ್ಲಿ ಏರುಪೇರಾಗಲಿದೆ. ಏನೇ ಅನಾರೋಗ್ಯದ ಸಮಸ್ಯೆ ಇದ್ದರೆ ಶಿವನ ಆರಾಧನೆ ಮಾಡಿ. ವೈವಾಹಿಕ ಜೀವನದಲ್ಲಿ ಸಂತೋಷ. ಮನೆಗೆ ಹೊಸ ಸದಸ್ಯರ ಆಗಮನ ಸಾಧ್ಯತೆಕಟಕ ರಾಶಿ: ಧನಾಗಮನ ಆಗಲಿದೆ. ಹಳೆಯ ನಿಂತ ಹಣ ಮತ್ತೆ ಮರಳಲಿದೆ. ಯಾವುದೋ ಹಣ ಇಂದು ಕೈ ಸೇರುವ ಶುಭ ದಿನ. ಹೆಚ್ಚಿನ ಧನಾಗಮನಕ್ಕೆ ಮನೆಯ ಉತ್ತರ ದಿಕ್ಕಿನಲ್ಲಿರುವ ಮಹಾಲಕ್ಷ್ಮೀ ದೇವಾಲಯದಲ್ಲಿ ಇಚ್ಛೆಗೆ ಅನುಸರವಾಗಿ ಬೆಲ್ಲ ಸಮರ್ಪಣೆ ಮಾಡಿ

ಸಿಂಹ ರಾಶಿ: ಈ ರಾಶಿಯ ದಂಪತಿಗಳಲ್ಲಿ ಕಲಹ ಉಂಟಾಗುವ ಸಂಭವವಿದೆ. ಯಾರೇ ಸಿಂಹ ರಾಶಿ ದಂಪತಿಗಳು ಇದ್ದರೂ ನಿಮ್ಮ ವೈಮನಸ್ಸನ್ನು ಸಮಾಧಾನದಿಂದ ಬಗೆಹರಿಸಿಕೊಳ್ಳಿ. ಇಲ್ಲವಾದಲ್ಲಿ ಇದು ವಿಕೋಪಕ್ಕೆ ತೆರಳಲಿದೆ. ಇದರ ನಿವಾರಣೆಗೆ ಪಾರ್ವತಿ ಪರಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿ.

ಕನ್ಯಾ ರಾಶಿ : ಅಲಂಕಾರಿಕ ವಸ್ತುಗಳು ಹೆಚ್ಚು ಹಣ ವಿನಿಯೋಗವಾಗಲಿದೆ. ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಹೆಚ್ಚಿನ ಖರ್ಚು ಆಗಲಿದ್ದು, ಮೋಸದಿಂದ ತೊಂದರೆಯಾಗಲಿದೆ. ಇದರ ನಿವಾರಣೆಗೆ ಲಕ್ಷ್ಮೀ ಸ್ತೋತ್ರ ಪರಾಯಣ ಮಾಡಿ

ತುಲಾ ರಾಶಿ : ದ್ವಂದ್ವ ನಿಲುವು, ಚಂಚಲತೆ ಕಾಡುತ್ತದೆ. ಯಾವುದೇ ವಿಚಾರದ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಈ ಚಂಚಲತೆ ನಿವಾರಣೆಗೆ ಅಶ್ವತ್ಥ ಮರಕ್ಕೆ ಹಳದಿ ನೀರು ಹಾಕಿ ಪ್ರಾರ್ಥಿಸಿ

 

ವೃಶ್ಚಿಕ ರಾಶಿ : ಆರೋಗ್ಯದ ಕಡೆ ಗಮನಹರಿಸಬೇಕು. ಮೊದಲಿನಿಂದಲೂ ಶೀತ ಸಮಸ್ಯೆ ಇದ್ದರೆ ಉಲ್ಬಣ ಈ ಹಿನ್ನಲೆ ಚಂದ್ರ ಸಂಬಂಧಿತ ವಸ್ತು ಅಂದರೆ, ಹಾಲು ಮೊಸರು, ಅಕ್ಕಿ ಈ ರೀತಿ ವಸ್ತುವನ್ನು ಶಿವನ ದೇವಾಲಯಕ್ಕೆ ಅಪರ್ಣೆ ಮಾಡಿದರೆ ಆರೋಗ್ಯವೂ ಸುಧಾರಿಸುತ್ತದೆ. ಚಂಚಲ ಮನಸ್ಸಿದ್ದರೆ ನಿವಾರಣೆ ಯಾಗುತ್ತದೆ

ಧನು ರಾಶಿ: ಮಾತು ಜಗಳಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು. ಈ, ವಾಗ್ವಾದ ತಪ್ಪಿಸಲು ಸಾಧ್ಯವಾದಷ್ಟು ಮೌನವಹಿಸಿ. ಹೆಚ್ಚಿನ ವಾಗ್ವಾದ ತಪ್ಪಿಸಲು ಓಂ ನಮೋ ನಾರಾಯಣ ಮಂತ್ರ 108 ಬಾರಿ ಜಪಿಸಿ

ಮಕರ ರಾಶಿ: ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಮೂಡುವ ಕೆಲಸದಿಂದ ಲಾಭಾವಾಗಲಿದೆ. ದೇವರ ದರ್ಶನದಿಂದ ಪುಣ್ಯ ಪ್ರಾಪ್ತಿ. ದೇವರಿಗೆ ತಂಬೂಲ ಅರ್ಪಿಸಿ ಪ್ರಾರ್ಥನೆ ಮಾಡುವುದರಿಂದ ಒಳಿತಾಗಲಿದೆ

ಕುಂಭ ರಾಶಿ : ಹಣದ ಹೂಡಿಕೆ ಇದು ಅತ್ಯಂತ ಒಳ್ಳೆ ದಿನ. ನೀವು ಅಂದು ಕೊಂಡ ಯೋಜನೆ ಯೋಚನೆಗಳು ಇಂದು ಫಲನೀಡಲಿದೆ. ಸಾಕಷ್ಟು ಲಾಭಾದ ನಿರೀಕ್ಷೆ ಇದೆ. ಈ ರಾಶಿಯವರು ಮಹಾ ವಿಷ್ಣು ದೇವಾಲದಲ್ಲಿ ಅರ್ಚನೆ ಮಾಡಿದರೆ ಒಳಿತಾಗಲಿದೆ.

ಮೀನಾ ರಾಶಿ: ಇಲ್ಲ ಸಲ್ಲದ ಆಪಾದನೆಗೆ ಇಂದು ನೀವು ಗುರಿಯಾಗುವಿರಿ. ನಿಮ್ಮದಲ್ಲದಂತಹ ತಪ್ಪುಗಳಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ಇದರ ನಿರ್ವಹಣೆಗೆ ಶಕ್ತಿ ಗಣೇಶ ಪ್ರಾರ್ಥನೆ ಸಲ್ಲಿಸುವುದರಿಂದ ಶುಭವಾಗಲಿದೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *