Aadhaar Card alert : ಇನ್ಮುಂದೆ Aadhar Card ಕಳೆದುಕೊಂಡರೆ ಮತ್ತೆ ಪ್ರಿಂಟ್ ಕೊಡಲ್ಲ!
ನವದೆಹಲಿ : ಸಧ್ಯ ದೇಶದಲ್ಲಿ ಪ್ರಮುಖ ಗುರುತಿನ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡ ಒಂದಾಗಿದೆ. ಪ್ರತಿಯೊಂದು ದಾಖಲೆಗೂ ಪ್ರಸ್ತುತ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಕೇಂದ್ರದ ಯುನಿಕ್ ಐಡೆಂಟಿಫಿಕೇಶನ್ ಆಫ್ ಇಂಡಿಯಾ (UIDAI ) ಒಂದು ಪ್ರಮುಖ ಸೇವೆಯನ್ನು ಬಂದ್ ಮಾಡಲು ನಿರ್ಧರಿಸಿದೆ.
UIDAI ಈ ಬಗ್ಗೆ ಹೇಳಿಕೆಯ ಪ್ರಕಾರ, ಇನ್ಮುಂದೆ ಆಧಾರ್(Aadhar Card) ಮುರುಮುದ್ರಣ ಸೇವೆ ಇರುವುದಿಲ್ಲ ಎಂದು ಹೇಳಿದೆ. ಟ್ವಿಟ್ಟರ್ನಲ್ಲೂ ಈ ಬಗ್ಗೆ ಮಾಹಿತಿ ಹರಿದಾಡುತ್ತಿದೆ.
ಆಧಾರ್ ಕಾರ್ಡ್ ಮುರುಮುದ್ರಣದ ನಕಲನ್ನು ಪಡೆಯುವ ಕುರಿತಾಗಿ ಸಾಕಷ್ಟು ಬಳಕೆದಾರರು ಪ್ರಶ್ನಿಸಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಉತ್ತರಿಸಿದ್ದು, ಮರುಮುದ್ರಣ ಸೇವೆ(Reprint service) ಇನ್ನು ಲಭ್ಯವಿರುವುದಿಲ್ಲ ಎಂದು ಹೇಳಿದೆ.
ಆದರೆ ಆನ್ಲೈನ್ನ ಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹೊಸ ಆಧಾರ್ ಪಿವಿಸಿ ಕಾರ್ಡ್(PVC Card) ಸೇವೆ ಪಡೆಯುವ ಆಯ್ಕೆ ಇದೆ ಎಂದು ಬಳಕೆದಾರರಿಗೆ ತಿಳಿಸಿದೆ. ಗ್ರಾಹಕರು ಇ-ಆಧಾರ್ ಅನ್ನು ಫ್ಲೆಸ್ಸಿಬಲ್ ಕಾಗದದ ಮೂಲಕ ಮುದ್ರಿಸಿಕೊಳ್ಳುಬಹುದಾಗಿದೆ ಎಂದು ತಿಳಿಸಿದೆ.
ಆಧಾರ್ ಕಾರ್ಡ್ ಹರಿದು ಹೋದಲ್ಲಿ ಅಥವಾ ಕಳೆದುಕೊಂಡಲ್ಲಿ UIDAI ವೆಬ್ಸೈಟ್ ನಿಂದ ಡೌನ್ಲೋಡ್(Download) ಮಾಡಿಕೊಳ್ಳಬಹುದಾಗಿತ್ತು. ಆದರೆ ಈಗ ಈ ಸೇವೆಯನ್ನು ಬಂದ್ ಆಗಲಿದೆ.
ಇತ್ತೀಚೆಗೆ UIDAI ಜಲನಿರೋಧಕ(Waterproof) ಮತ್ತು ಬಾಳಿಕೆ ಬರುವ ಪಿವಿಸಿ ಆಧಾರ್ ಕಾರ್ಡ್ಗಳನ್ನು ATM ಕಾರ್ಡ್ ರೂಪದಲ್ಲಿ ಪರಿಚಯಿಸಿತು. ಆದರೀಗ ಪಿವಿಸಿ ಆಧಾರ್ ಕಾರ್ಡ್ ಪಡೆಯಬಹುದಾಗಿದೆ. ಮತ್ತು ಕೊಂಡೊಯ್ಯಲು ಸುಳಭವಾಗಿದೆ.