ಕೋವಿಡ್​ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ 10 ಲಕ್ಷ ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ -19 ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಬೆಂಬಲ ವಿಚಾರವಾಗಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಪ್ರಸ್ತುತ ಕೋವಿಡ್ ಸಾಂಕ್ರಾಮಿಕದಿಂದ ತೊಂದರೆಗೆ ಸಿಲುಕಿರುವ ಮಕ್ಕಳಿಗಾಗಿ ಪ್ರಧಾನಿ ಮೋದಿ ಅವರು ಕೆಲವು ಪರಿಹಾರ ಕ್ರಮಗಳನ್ನು ಘೋಷಿಸಿದರು. ಮಕ್ಕಳು ದೇಶದ ಭವಿಷ್ಯವನ್ನು ಪ್ರತಿನಿಧಿಸುತ್ತಾರೆ ಮತ್ತು ಮಕ್ಕಳನ್ನು ಬೆಂಬಲಿಸಲು ಮತ್ತು ರಕ್ಷಿಸಲು ದೇಶವು ಎಲ್ಲವನ್ನು ಮಾಡುತ್ತದೆ, ಇದರಿಂದ ಅವರು ಪ್ರಬಲವಾದ ಪ್ರಜೆಗಳಾಗಿ ಬೆಳವಣಿಗೆ ಹೊಂದುತ್ತಾರೆ ಮತ್ತು ಉಜ್ವಲ ಭವಿಷ್ಯ ಪಡೆಯಲಿದ್ದಾರೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಹೇಳಿದರು. 

ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ಉಜ್ವಲ ಭವಿಷ್ಯದ ಭರವಸೆ ಮೂಡಿಸುವುದು ನಮ್ಮ ಕರ್ತವ್ಯ ಎಂದು ಪ್ರಧಾನಿ ಹೇಳಿದರು. ಕೋವಿಡ್ 19 ಕಾರಣದಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಅಥವಾ ಉಳಿದಿರುವ ಪೋಷಕರು ಅಥವಾ ಕಾನೂನು ಪಾಲಕರು / ದತ್ತು ಪಡೆದ ಎಲ್ಲ ಮಕ್ಕಳಿಗಾಗಿ ಪ್ರಧಾನಿ ನಿಧಿ ಯೋಜನೆಯಡಿ ಬೆಂಬಲ ನೀಡಲಾಗುವುದು. ಪಿಎಂ ಕೇರ್ ಫಂಡ್ ಭಾರತದಲ್ಲಿ ಕೋವಿಡ್ -19 ವಿರುದ್ಧದ ಸಮಯದಲ್ಲಿ ಎಲ್ಲ ಬೆಂಬಲ ಹಾಗೂ ಕೊಡುಗೆ ನೀಡಲಿದೆ ಎಂದು ಹೇಳಿದರು. ಸಾಂಕ್ರಾಮಿಕ ರೋಗ ಕೋವಿಡ್ ದೇಶದಲ್ಲಿ 577 ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ. ತಂದೆ- ತಾಯಿ ಕಳೆದುಕೊಂಡ ಆ ಮಕ್ಕಳು ತಮ್ಮ ಹತ್ತಿರದ ಸಂಬಂಧಿಗಳ ಆರೈಕೆಯಲ್ಲಿ ಇದ್ದಾರೆ.

ಮಕ್ಕಳ ಹೆಸರಲ್ಲಿ ನಿಗದಿತ ಠೇವಣಿ (ಎಫ್​ಡಿ)

ಪಿಎಂ ಕೇರ್​ ನಿಧಿ ಅಡಿ ಪ್ರತಿ ಮಕ್ಕಳಿಗೆ 10 ಲಕ್ಷ ರೂ. ಸಿಗುವ ಯೋಜನೆಯನ್ನು ರೂಪಿಸಲಾಗಿದೆ.

ಅವನು ಅಥವಾ ಅವಳು 18 ವರ್ಷ ತುಂಬಿದ ಬಳಿಕ ಮುಂದಿನ ಐದು ವರ್ಷಗಳ ಕಾಲ ಅಂದರೆ 23 ವರ್ಷ ತುಂಬುವವರೆಗೆ ಪ್ರತಿ ತಿಂಗಳು ಆರ್ಥಿಕ ಬೆಂಬಲ ಅಥವಾ ಸ್ಟೈಫಂಡ್ ಸಿಗುವ ವ್ಯವಸ್ಥೆ ಮಾಡಲಾಗಿದೆ. 23 ವರ್ಷ ತುಂಬಿದ ಬಳಿಕ 10 ಲಕ್ಷ ಹಣ ನೀಡಲಾಗುವುದು.

ಶಾಲಾ ಶಿಕ್ಷಣ: 10 ವರ್ಷದವರೆಗೆ ಮಕ್ಕಳಿಗೆ ಉಚಿತ ಶಿಕ್ಷಣಅನಾಥ ಮಕ್ಕಳಿಗೆ ಹತ್ತಿರದ ಕೇಂದ್ರೀಯ ವಿದ್ಯಾಲಯ ಅಥವಾ ಖಾಸಗಿ ಶಾಲೆಯಲ್ಲಿ ಪ್ರವೇಶಾತಿ ನೀಡುವುದು

ಒಂದು ವೇಳೆ ಮಕ್ಕಳು ಖಾಸಗಿ ಶಾಲೆಗೆ ದಾಖಲಾದರೆ ಶಾಲಾ ಫಿಜ್​ಅನ್ನು ಆರ್​ಟಿಐ ನಿಯಮದಂತೆ ಪಿಎಂ ಕೇರ್​ನಿಂದ ನೀಡಲಾಗುವುದು.

ಪಿಎಂ ಕೇರ್​ನಿಂದ ಶಾಲಾ ಸಮವಸ್ತ್ರ, ಪಠ್ಯ ಪುಸ್ತಕ ಹಾಗೂ ನೋಟ್​ ಬುಕ್​ಗಳಿಗೆ ಹಣ ನೀಡಲಾಗುವುದು.

11ರಿಂದ 18 ವರ್ಷದವರೆಗೆ ಶಿಕ್ಷಣ ಯಾವುದೇ ಕೇಂದ್ರ ಸರ್ಕಾರಿ ವಸತಿ ಶಾಲೆ, ಸೈನಿಕ ಶಾಲೆ ಹಾಗೂ ನವೋದಯ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶಾತಿ

ಉನ್ನತ ಶಿಕ್ಷಣ ಪಡೆಯಲು ಮುಂದಾಗುವ ಮಕ್ಕಳಿಗೆ ಶಿಕ್ಷಣ ಸಾಲದ ವ್ಯವಸ್ಥೆ ಮಾಡಲಾಗುವುದು. ಆದರೆ, ಬಡ್ಡಿಯನ್ನು ಕೇಂದ್ರ ಸರ್ಕಾರ ಪಾವತಿ ಮಾಡಲಿದೆ.

ಆರೋಗ್ಯ ವಿಮೆ

ಕೋವಿಡ್​ 19 ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳು 18 ವರ್ಷ ತುಂಬುವವರೆಗೂ ಅವರಿಗೆ 5 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುವುದು. ಅದರ ಪ್ರೀಮಿಯಮ್ ಮೊತ್ತವನ್ನು ಪಿಎಂ ಕೇರ್ ನಿಧಿಯಿಂದ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *