ಲಸಿಕೆ ಪಡೆಯದಿದ್ದರೆ ‘ಎಣ್ಣೆ’ಯೂ ಇಲ್ಲ: ಮದ್ಯ ಖರೀದಿಗೆ ಲಸಿಕೆ ಪ್ರಮಾಣಪತ್ರ ಕಡ್ಡಾಯ!

ಹೈಲೈಟ್ಸ್‌:

  • ಲಸಿಕೆ ಪಡೆಯದಿದ್ದರೆ ಮದ್ಯ ಮಾರಾಟ ಇಲ್ಲ
  • ಎಡಿಎಂ ಸೂಚನೆ ಅನ್ವಯ ಮದ್ಯದಂಗಡಿಗಳಲ್ಲಿ ನೋಟಿಸ್
  • ಲಸಿಕೆ ಪ್ರಮಾಣ ಪತ್ರ ಪರಿಶೀಲನೆ ಮಾಡದೆ ಮದ್ಯ ನೀಡುವಂತಿಲ್ಲ

ಎಟಾವ: ಲಸಿಕೆ ಪಡೆದ ಪ್ರಮಾಣಪತ್ರವಿಲ್ಲದೆ ಇದ್ದರೆ ಮದ್ಯ ನೀಡಲಾಗುವುದಿಲ್ಲ- ಹೀಗೊಂದು ಸೂಚನೆಗಳು ಉತ್ತರ ಪ್ರದೇಶದ ಎಟಾವ ಜಿಲ್ಲೆಯಲ್ಲಿ ಕಂಡುಬಂದಿವೆ. ಎಟಾವ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಹೇಮ್ ಕುಮಾರ್ ಸಿಂಗ್ ಅವರ ಸೂಚನೆಯಂತೆ ಈ ನೋಟಿಸ್‌ಗಳನ್ನು ಮದ್ಯದಂಗಡಿಗಳ ಮುಂಭಾಗದಲ್ಲಿ ಅಂಟಿಸಲಾಗಿದೆ.

ಎಟಾವ ಜಿಲ್ಲೆಯ ಸೈಫಾಯಿ ಎಂಬಲ್ಲಿ ಈ ನೋಟಿಸ್‌ಗಳನ್ನು ಎಲ್ಲ ಮದ್ಯದಂಗಡಿಗಳಲ್ಲಿಯೂ ಅಳವಡಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಅಲಿಗಡದಲ್ಲಿ ಕಳಪೆ ಮದ್ಯ ಸೇವಿಸಿ ಕನಿಷ್ಠ 25 ಮಂದಿ ಜೀವ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಕೋವಿಡ್ 19 ಲಸಿಕೆ ಪಡೆದುಕೊಳ್ಳದ ಯಾರಿಗೂ ಮದ್ಯ ಮಾರಾಟ ಮಾಡುವುದಿಲ್ಲ ಮದ್ಯದಂಗಡಿಗಳ ಮುಂಭಾಗದಲ್ಲಿ ನೋಟಿಸ್‌ಗಳನ್ನು ಸ್ಪಷ್ಟವಾಗಿ ಅಂಟಿಸುವಂತೆ ಪರಿಶೀಲನೆ ಸಂದರ್ಭದಲ್ಲಿ ಎಡಿಎಂ ಹೇಮ್ ಕುಮಾರ್ ಸಿಂಗ್ ನಿರ್ದೇಶನ ನೀಡಿದ್ದರು.

ಜನರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಲಸಿಕೆ ಪಡೆದುಕೊಳ್ಳಲು ಇದು ನೆರವಾಗುತ್ತಿದೆ ಎಂದು ಮದ್ಯದಂಗಡಿಗಳ ಉದ್ಯೋಗಿಗಳು ತಿಳಿಸಿದ್ದಾರೆ. ಆದರೆ ಲಸಿಕೆ ಪಡೆದುಕೊಳ್ಳದ ಜನರಿಗೆ ಮದ್ಯ ಮಾರಾಟವನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿಲ್ಲ ಎಂದು ಎಟಾವದ ಅಬಕಾರಿ ಅಧಿಕಾರಿ ಕಮಲ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *