7 ವರ್ಷಗಳಲ್ಲಿ ಮೋದಿ ನೇತೃತ್ವದಲ್ಲಿ ಉತ್ತಮ ಸಾಧನೆ:ಅಮಿತ್ ಶಾ ಬಣ್ಣನೆ
ನವದೆಹಲಿ, ಮೇ 31- ಪ್ರಧಾನ ಮಂತ್ರಿ ನಾಯಕತ್ವದ ಏಳು ವರ್ಷಗಳ ಅವಧಿಯಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿ ನೇತ್ರತ್ವದ ಎನ್ ಡಿಎ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಅವರು, ದೇಶದ ಭದ್ರತೆ, ಸಾರ್ವಜನಿಕ ಕಲ್ಯಾಣ, ಸುಧಾರಣೆಯಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.
ಬಡವರ,ದುರ್ಬಲ ವರ್ಗದವರನ್ನು ಹಾಗೂ ರೈತರ ಜೀವನವನ್ನು ಮುನ್ನೆಲೆಗೆ ತಂದು ಅವರ ಸುಧಾರಣೆಗೆ ಮೋದಿಯವರು ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದು ಅಭೂತಪೂರ್ವ ಸಾಧನೆ ಮಾಡಿದ್ದಾರೆ ಎಂದರು.
ಏಳು ವರ್ಚಗಳ ಅವಧಿಯಲ್ಲಿ ದೇಶದ ಜನತೆ ಮೋದಿ ಸರ್ಕಾರದ ಮೇಲೆ ಸ್ಥಿರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಅಭಿವೃದ್ಧಿ ಕಾರ್ಯಗಳನ್ನು ಮುಂವರೆಸುವುದಾಗಿ ಹೇಳಿದರು.