ಸಂಜೆ ಸಿಎಂ ಪತ್ರಿಕಾಗೋಷ್ಠಿ: 2ನೇ ಪ್ಯಾಕೇಜ್ ಘೋಷಣೆ ಸಾಧ್ಯತೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದು, 2ನೇ ಹಂತದ ಕೊರೋನಾ ಪ್ಯಾಕೇಜ್ ಘೋಷಣೆ ಸಾಧ್ಯತೆ ಇದೆ.
ಲಾಕ್ ಡೌನ್ ನಿಂದಾಗಿ ಸಮಾಜದ ಹಲವು ವರ್ಗಗಳು ಸಂಕಷ್ಟಕ್ಕೊಳಗಾಗಿವೆ. ಮೊದಲ ಹಂತದ ಪ್ಯಾಕೇಜ್ ನಲ್ಲಿ ಕೆಲವು ವರ್ಗಗಳಿಗೆ ಮಾತ್ರ ಪ್ಯಾಕೇಜ್ ಘೋಷಿಸಲಾಗಿತ್ತು. ನಂತರ ಇನ್ನೂ ಹಲವರಿಂದ ಬೇಡಿಕೆ, ಒತ್ತಡಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ನೇಕಾರರು ಸೇರಿದಂತೆ ಅನೇಕ ವರ್ಗಗಳು ಪ್ಯಾಕೇಜ್ ಬೇಡಿಕೆ ಮುಂದಿಟ್ಟಿದ್ದವು. ಹಾಗಾಗಿ ಮುಖ್ಯಮಂತ್ರಿಗಳು ಈ ಕುರಿತು ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಲಿದ್ದಾರೆ.
ಲಾಕ್ ಡೌನ್ ವಿಸ್ತರಣೆ ಸಂಬಂಧ ಇಂದು ಮುಖ್ಯಮಂತ್ರಿಗಳು ಘೋಷಿಸುವ ಸಾಧ್ಯತೆ ತೀರಾ ಕಡಿಮೆ, ಶನಿವಾರ ಲಾಕ್ ಡೌನ್ ವಿಸ್ತರಣೆ ಕುರಿತು ಪ್ರಕಟಣೆ ಹೊರಬೀಳಬಹುದು.