Karnataka Lockdown Extension: ಕರ್ನಾಟಕದಲ್ಲಿ ಜೂನ್​ 14ರವರೆಗೆ ಲಾಕ್​ಡೌನ್ ವಿಸ್ತರಣೆ;

ಬೆಂಗಳೂರು(ಜೂ. 03): ಕರ್ನಾಟಕದಲ್ಲಿ ಈಗಾಗಲೇ ಜೂನ್​ 7ರವರೆಗೆ ಜಾರಿಯಲ್ಲಿದ್ದ ಲಾಕ್​ಡೌನ್​ನ್ನು ಜೂನ್ 14ರವರೆಗೆ ವಿಸ್ತರಿಸುವುದು ಖಚಿತವಾಗಿದೆ. ಸಿಎಂ ಬಿಎಸ್​ ಯಡಿಯೂಪ್ಪ ಈ ಬಗ್ಗೆ ಇಂದು ಸಂಜೆ 5 ಗಂಟೆಗೆ ಆದೇಶ ಹೊರಡಿಸಲಿದ್ದಾರೆ. ಹೀಗಾಗಿ ಜೂನ್​ 14ವರೆಗೂ ಲಾಕ್​ಡೌನ್​ ಮುಂದುವರೆಯಲಿದೆ ಎನ್ನಲಾಗುತ್ತಿದೆ. ಎರಡು ಹಂತದಲ್ಲಿ ಲಾಕ್​ಡೌನ್ ಮಾಡಲಾಗುತ್ತಿದ್ದು, ಈಗ ಜೂನ್​ 14ರವರೆಗೆ ಒಂದು ಲಾಕ್ ಡೌನ್​ ಮುಂದುವರೆದರೆ, ​ ಮತ್ತೆ ಜೂನ್​ 21 ರವರೆಗೆ ಮತ್ತೊಂದು ಹಂತದ ಲಾಕ್​ಡೌನ್​ ಮುಂದುವರೆಯಲಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

 

ನಿನ್ನೆ ನಡೆದ ಸಚಿವರ ಸಭೆಯಲ್ಲಿ ಲಾಕ್​ಡೌನ್​ ವಿಸ್ತರಣೆ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಂದು ಸಂಜೆ ಸಿಎಂ ಬಿಎಸ್​ವೈ ಈ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಲಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಾರದ ಕಾರಣ, ಸಿಎಂ ಲಾಕ್​ಡೌನ್​ ಮುಂದುವರಿಸುವ ಕಡೆ ಒಲವು ತೋರಿದ್ದಾರೆ.

ಈಗಾಗಲೇ ಜೂನ್​ 7ರವರೆಗೆ ಕರ್ನಾಟಕದಲ್ಲಿ ಲಾಕ್​ಡೌನ್​ ಘೋಷಣೆಯಾಗಿದೆ. ಸೋಂಕು ಮತ್ತಷ್ಟು ಉಲ್ಭಣಗೊಳ್ಳುವುದು ಬೇಡವೆಂದು ಅನ್​ಲಾಕ್​ ಮಾಡುವ ನಿರ್ಧಾರ ಮಾಡಿಲ್ಲ. ಬದಲಾಗಿ 2 ಹಂತದಲ್ಲಿ ಲಾಕ್​ಡೌನ್​ ಘೋಷಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.  ಜೂನ್ 14ರ ವರೆಗೆ ಒಂದು ಹಂತದ ಲಾಕ್ ಡೌನ್, ಮತ್ತೆ ಜೂನ್ 14ರಿಂದ 21ರ ವರೆಗೆ ಮತ್ತೊಂದು ಹಂತದ ಲಾಕ್ ಡೌನ್.  ಒಟ್ಟು ಎರಡು ಹಂತಗಳಲ್ಲಿ ಲಾಕ್ ಡೌನ್ ಮಾಡಲು  ನಿರ್ಧಾರ ತೆಗೆದುಕೊಳ್ಳಲಾಗಿದೆ.

ಒಂದೇ ಬಾರಿ ಎರಡು ವಾರ ಅಂದರೆ ತೊಂದರೆಯಾಗುತ್ತೆ ಹಾಗೂ ಪದೇ ಪದೇ ಲಾಕ್ ಡೌನ್ ನಿಂದ ಜನರು ಭಯ‌ಬೀಳುತ್ತಾರೆ ಎಂದು ಎರಡು ಹಂತದಲ್ಲಿ ಲಾಕ್ ಡೌನ್ ಜಾರಿ ಮಾಡಲು ತೀರ್ಮಾನಿಸಲಾಗಿದೆ.

ನಿನ್ನೆ ನಡೆದ ಸಚಿವರ ಸಭೆಯಲ್ಲೂ ಸಹ ಲಾಕ್​ಡೌನ್​ ಮಾಡಿ, ಕೊರೋನಾ ನಿಯಂತ್ರಿಸಿ ಎಂದೇ ತಮ್ಮ ಅಭಿಪ್ರಾಯಗಳನ್ನು ಸಚಿವರು ಸಿಎಂಗೆ ತಿಳಿಸಿದ್ದಾರೆ. ಹೀಗಾಗಿ ಸದ್ಯಕ್ಕಂತೂ ಲಾಕ್​ಡೌನ್ ವಿಸ್ತರಣೆಯಾಗುವುದು ಪಕ್ಕಾ ಆಗಿದೆ.

ನಿನ್ನೆಯ ಸಭೆಯಲ್ಲಿ ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಸಡಿಲಿಕೆ ಮಾಡುವ ಬಗ್ಗೆಯೂ ಚರ್ಚೆ ಮಾಡಲಾಗಿತ್ತು.  ಆದರೆ ಇದರಿಂದ ಮತ್ತಷ್ಟು ಕೊರೋ ಉಲ್ಭಣವಾಗುವ ಸಾಧ್ಯತೆ ಇದೆ. ಜನರ ಓಡಾಟದಿಂದ ಮತ್ತೆ ಸೋಂಕು ಹೆಚ್ಚುವ ಸಾಧ್ಯತೆ ಇರುವುದರಿಂದ ಇನ್ನೂ ಎರಡು ವಾರ ಲಾಕ್​ಡೌನ್​ ವಿಸ್ತರಣೆ ಮಾಡುವುದು ಖಚಿತವಾಗಿದೆ.

ಲಾಕ್ ಡೌನ್ ವಿಸ್ತರಣೆಗೆ ಸರ್ಕಾರ ಅಂತಿಮ ನಿರ್ಧಾರ ಮಾಡಿದ್ದು,  ಈ ಬಗ್ಗೆ ಅಧಿಕೃತವಾಗಿ ಘೋಷಣೆಯೊಂದೆ ಬಾಕಿ ಉಳಿದಿದೆ.  ಹೀಗಾಗಿ ಇಂದು ಸಂಜೆಯೊಳಗೆ ಸಿಎಂ ಬಿಎಸ್​ವೈ ಲಾಕ್ ಡೌನ್ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಪ್ರಸ್ತುತ ಇರುವ ಲಾಕ್​ಡೌನ್​ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಜೂನ್​ 14ರವರೆಗೆ ವಿಸ್ತರಿಸಲಾಗುವ ಲಾಕ್​ಡೌನ್​ ಕೂಡ ಇದೇ ರೀತಿಯಾಗಿದ್ದು, ಯಾವುದೇ ಸಡಿಲಿಕೆ ಇರುವುದಿಲ್ಲ ಎನ್ನಲಾಗುತ್ತಿದೆ. ಇಂದು ಸಂಜೆ ಸಿಎಂ ಯಡಿಯೂರಪ್ಪ ಅಧಕೃತವಾಗಿ ಲಾಕ್​ಡೌನ್​ ವಿಸ್ತರಣೆ ಬಗ್ಗೆ ಘೋಷಣೆ ಮಾಡಲಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *