ಆರೋಗ್ಯ ಹಿತದೃಷ್ಟಿಯಿಂದ ಎಸ್ ಎಸ್.ಎಲ್.ಸಿ ಪರೀಕ್ಷೆ ರದ್ದು ಮಾಡಿ
ರಾಯಚೂರು, ಜೂ.೪- ಎಸ್ ಎಸ್.ಎಲ್.ಸಿ ಪರೀಕ್ಷೆ ರದ್ದು ಮಾಡಿದರೆ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಪ್ರವೀಣ್ ಪ್ರಭು ಶೆಟ್ಟರ್ ಶಿಕ್ಷಣ ಸಚಿವರಿಗೆ ಒತ್ತಾಯಿಸಿದರು.
ಪರೀಕ್ಷಾ ನಡೆಸಿದರು ಸ್ವಾಗತ ಆದರೆ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಏನಾದರೂ ಆದರೆ ಅದರ ಜವಾಬ್ದಾರಿ ಯಾರು?ಉಪಚುನಾವಣೆಯಲ್ಲಿ ಬಹಳಷ್ಟು ಶಿಕ್ಷಕರು ಪ್ರಾಣ ಕಳೆದು ಕೊಂಡಿದ್ದಾರೆ.ಕರೋನ ದಿಂದ ಪರೀಕ್ಷೆ ಏನಾದರೂ ಆದರೆ ಅದರ ಜವಾಬ್ದಾರಿ ಯಾರು? ನೀವು ತೆಗೆದುಕೊಳ್ಳುವಿರಾ? ವಿದ್ಯಾರ್ಥಿಗಳ ತಂದೆ ತಾಯಿಗಳು ಶಾಲೆಗೆ ಕಳಿಸುವಾಗ ಮುಂಚೆ ನಮ್ಮ ಮಕ್ಕಳಿಗೆ ನಾವೇ ಜವಾಬ್ದಾರಿಯಿಂದ ಶಾಲೆಗೆ ಕಳಿಸಿ ಕೊಡುತ್ತಿದ್ದೇವೆ ಎಂದು ಪತ್ರ ಬರೆಸಿಕೊಂಡಿದ್ದಾರೆ.ಶಾಲೆಗೆ ವಿದ್ಯಾರ್ಥಿಗಳನ್ನು ಕಳಿಸಿಕೊಡಿ ಎಂದು ಒತ್ತಾಯವಿಲ್ಲ ಎಂದು ಸರ್ಕಾರ ಹೇಳುತ್ತಿದೇ ಹಾಗಾಗಿ ನಾಳೆ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಏನಾದರೂ ಆದರೆ ಸರ್ಕಾರವೇ ಜವಾಬ್ದಾರಿಯೆಂದು ಅವರ ಕುಟುಂಬಕ್ಕೆ ಪತ್ರ ಬರೆದು ಕೊಡುವಿರಾ? ಕರೋನಾ ಮೂರನೇ ಅಲೆ ಬರುವುದಿದೆ ಅದರಿಂದ ಮಕ್ಕಳಿಗೆ ತೊಂದರೆ ಜಾಸ್ತಿ ಎಂದು ಪತ್ರಿಕೆಗಳಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬರುತ್ತಿದೆ.ಹೀಗಿರುವಾಗ ಮಕ್ಕಳಿಗೆ ಏನಾದರೂ ಆದರೆ ಜವಾಬ್ದಾರಿ ಯಾರು ಎಂದು ಪ್ರಶ್ನಿಸಿದರು.