ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮ ಪಂಚಾಯತಿ ಅಡಿಯಲ್ಲಿ ಅಂಗವಿಕಲರಿಗೆ ಹಾಗೂ ಗ್ರಾಮಸ್ಥರೆಲ್ಲರಗೂ ಲಸಿಕೆ ಕೊಡುವ ಕಾರ್ಯಕ್ರಮ ನಡೆಯಿತು.
ಜಿಲ್ಲಾಧಿಕಾರಿಗಳಾಗ ವಿ.ವಿ.ಜೋತ್ಸ್ನಾ ಅವರು ಮಾತನಾಡಿ ಎಲ್ಲರೂ ತಪ್ಪದೆ ಲಸಿಕೆ ಹಾಕಿಕೊಳ್ಳುಬೆಕು.ಅದರ ಜೊತೆಗೆ ಪರಿಸರದ ಬಗ್ಗೆ ಹೆಚ್ಚಿನ ಕಾಳಸಿ ವಹಿಸಬೇಕು ಎಂದರು. ಸಿ.ಎಸ್. ಅವರು ಮಾತನಾಡಿ ನರೇಗಾ ಯೋಜನೆಯಡಿ ಪ್ರತಿಯೊಬ್ಬರೂ ಉದ್ಯೋಗ ಕಲ್ಪಿಸಿಕೊಳ್ಳಬೆಕು ಅಂಗವಿಕಲರಿಗೆ ಈ ಯೋಜನೆ ಅಡಿಯಲ್ಲಿ ಕೆಲಸ ಕೊಡುವುದಾಗಿ ಹೆಳಿದರು.ಅರಣ್ಯ ಅಧಿಕಾರಿ ಸಂತೋಷ ಇಂಡಿ ಅವರು ಮಾತನಾಡಿ ಪ್ರತಿವರ್ಷಕಿಂತ ಈ ವರ್ಷ ಹೆಚ್ಚು ಮರಗಳನ್ನು ನೆಡುವುದರ ಮುಖಾಂತರ ನಮ್ಮ ತಾಲ್ಲೂಕಿನ ಪ್ರತಿಗ್ರಾಮಗಳಲ್ಲಿ ಅರಣ್ಯ ಪ್ರದೇಶ ಮಾಡುವುದಾಗಿ ತಳಿಸಿದರು.ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿಗಳು ಅರಣ್ಯಾದಿಕಾರಿಗಳು ಉಪಸ್ಥಿತರಿದ್ದರು. ಇದರ ಮಧ್ಯ ಅಂಗವಿಕಲರೊಬ್ಬರು 10 ಸಾವಿರ ಕೊಟ್ಟರು ಲಸಿಕೆ ಹಾಕಿಕೊಳ್ಳುವುದಿಲ್ಲ ಎಂದು ಹಠ ಹಿಡಿದವನಿಗೆ ಜಿಲ್ಲಾಧಿಕಾರಿಗಳು ಆತನ ಮನವೊಲಿಸಿ ಲಸಿಕೆ ಕೊಡಿಸುವುದರಲ್ಲಿ ಯಶಸ್ವಿಯಾದರು.ಇದಾದನಂತರ ಗ್ರಾಮ ಪಂಚಾಯತಿ ಅಧ್ಯಕ್ಷರು ಗ್ರಾಮದ ಬಡ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ಸ್ಯಾನಿಟೈಸರ ಇನ್ನಿತರ ದಿನ ಬಳಕೆ ವಸ್ತುಗಳು ಜನರಿಗೆ ವಿತರಿಸಿದರು.