ಶ್ರೀ ಕ್ಷೇತ್ರ ರೆವಗ್ಗಿ(ರಟಕಲ್) ರೇವಣಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ‘ವಿಶ್ವ ಪರಿಸರ ದಿನಾಚರಣೆ’
ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಸುಕ್ಷೇತ್ರ ರೇವಗ್ಗಿ (ರಟಕಲ್ )ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸಸಿನೆಟ್ಟ ಎಸಿ ರಮೇಶ ಕೋಲಾರ.
ಸಸಿ ನೆಟ್ಟು ಸಾರ್ವಜನಿಕರಿಗೆ ಪರಿಸರ ಪ್ರಜ್ಞೆಯ ಪಾಠ ಹೇಳಿದ್ದರು.
ಮನುಷ್ಯನಿಗೆ ನೈಸರ್ಗಿಕವಾಗಿ ದೋರೆಯುವ ಸಂಪತ್ತುಗಳಾದ ಬೆಟ್ಟ-ಗುಡ್ಡ, ಕಾಡು-ಮೇಡು, ಪ್ರಾಣಿ-ಪಕ್ಷಿಗಳು, ನೀರು, ಗಾಳಿ ಇವೇಲ್ಲವುಗಳನ್ನು ಸಂರಕ್ಷಣೆ ಮಾಡಿಕೊಂಡು ಹೊಗುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ ಎಂದು ಸೇಡಂ ಸಹಾಯಕ ಆಯುಕ್ತ ಹಾಗೂ ರೇವಗ್ಗಿ(ರಟಕಲ್) ರೇವಣಸಿದ್ಧೇಶ್ವರ ದೇವಸ್ಥಾನದ ಆಡಳಿತಾಧೀಕಾರಿಯೂ ಆಗಿರುವ ರಮೇಶ ಕೋಲಾರ ತಿಳಿಸಿದರು.
ತಾಲೂಕಿನ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ಶನಿವಾರ “ವಿಶ್ವ ಪರಿಸರ ದಿನಾಚರಣೆ” ಅಂಗವಾಗಿ ದೇವಸ್ಥಾನದ ಆವರಣದಲ್ಲಿ ವಿವಿಧ ಪ್ರಕಾರಗಳ ಸಸಿಗಳನ್ನು ನೆಟ್ಟು, ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆಯ ಪಾಠ ಹೇಳಿದರು.
ಮನುಷ್ಯ ತನ್ನ ಆರೋಗ್ಯವನ್ನು ಎಷ್ಟು ಎಚ್ಚರದಿಂದ ಕಾಪಾಡಿಕೊಂಡು ಹೊಗುತ್ತಾನೆಯೋ ಹಾಗೆ ಪರಿಸರದ ಬಗ್ಗೆಯೂ ಕೂಡಾ ಅಷ್ಟೇ ಜವಾಬ್ದಾರಿಯಿಂದ ಕಾಪಾಡಿಕೊಂಡು ಹೊಗಬೇಕಾಗಿದೆ ಎಂದರು.
ದೇವಸ್ಥಾನದ ಗೋಶಾಲೆ ಹಾಗೂ ವೀಭೂತಿ ಕೇಂದ್ರದ ಪರಿಶೀಲನೆ ಮಾಡಿದ ಅವರು, ಮಹಾಮಾರಿ ಕರೋನಾದಿಂದಲೂ ತುಂಬಾ ಜಾಗರುಕರಾಗಿರುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಪ್ರಮುಖರಾದ ಶಿವರಾಜ ಪಾಟೀಲ ಗೊಣಗಿ, ಕವಿರಾಜ, ಶಿವುಕುಮಾರ ಹೆಬ್ಬಾಳ, ಮಂಜುನಾಥ ನಾವಿ, ನಾಗೇಶ ಬಿರಾದಾರ, ಆಶಿಷ್ ಹಾಗೂ ದೇವಸ್ಥಾನದ ಸಿಬ್ಬಂದಿಗಳು ಸೇರಿದಂತೆ ಅನೇಕರಿದ್ದರು.ವರದಿ ಶಿವರಾಜ್ ಕಟ್ಟಿಮನಿ