ದೇಶಾದ್ಯಂತ ಕೇಂದ್ರ ಸರ್ಕಾರದಿಂದಲೇ ಉಚಿತ ಕೊರೊನಾ ಲಸಿಕೆ ಅಭಿಯಾನ: ಪ್ರಧಾನಿ ಮೋದಿ

ಹೈಲೈಟ್ಸ್‌:

  • ದೇಶದ ಯಾವುದೇ ರಾಜ್ಯ ಸರ್ಕಾರ ಲಸಿಕೆಗೆ ಹಣ ವೆಚ್ಚ ಮಾಡುವಂತಿಲ್ಲ
  • ಭಾರತ ಸರ್ಕಾರವೇ ಎಲ್ಲರಿಗೂ ಪುಕ್ಕಟೆ ಲಸಿಕೆ ನೀಡಲಿದೆ
  • 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಪುಕ್ಕಟೆ ಲಸಿಕೆ

ಹೊಸ ದಿಲ್ಲಿದೇಶದಲ್ಲಿ ಕೊರೊನಾ ವೈರಸ್ ನಿರೋಧಕ ಲಸಿಕಾ ಅಭಿಯಾನದ ಸಾರಥ್ಯವನ್ನು ಕೇಂದ್ರ ಸರ್ಕಾರವೇ ವಹಿಸಲಿದೆ ಎಂದು

ಪ್ರಧಾನಿ ಮೋದಿ ಘೋಷಿಸಿದ್ದಾರೆ. ಆರೋಗ್ಯ ವಿಚಾರವು ರಾಜ್ಯಗಳ ವಿಷಯವಾದ ಕಾರಣ, ಈ ಹಿಂದೆ ಲಸಿಕಾ ಅಭಿಯಾನದ ಜವಾಬ್ದಾರಿಯನ್ನು ರಾಜ್ಯಗಳಿಗೂ ನೀಡಲಾಗಿತ್ತು. ಆದ್ರೆ, ಹಲವು ರಾಜ್ಯಗಳಿಗೆ ತೊಂದರೆ ಎದುರಾದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವೇ ಈ ಜವಾಬ್ದಾರಿಯನ್ನು ಹೊರಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೊರೊನಾ ನಿರ್ವಹಣೆ ವಿಚಾರದಲ್ಲಿ ಭಾರತ ಸರ್ಕಾರವೇ ಎಲ್ಲವನ್ನೂ ನಿರ್ಧರಿಸುತ್ತಿದೆ ಎಂದು ಈ ಹಿಂದೆ ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಹೀಗಾಗಿ, ಕೊರೊನಾ ಲಸಿಕೆ, ಸ್ಥಳೀಯ ಮಟ್ಟದಲ್ಲಿ ಕರ್ಫ್ಯೂ, ಕಂಟೈನ್‌ಮೆಂಟ್ ಝೋನ್ ಸೇರಿದಂತೆ ಹಲವು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರಾಜ್ಯಕ್ಕೆ ನೀಡಲಾಗಿತ್ತು ಎಂದ ಪ್ರಧಾನಿ ಮೋದಿ, ಇದೀಗ ಲಸಿಕಾ ಅಭಿಯಾನದ ಸಂಪೂರ್ಣ ಹೊಣೆ ಭಾರತ ಸರ್ಕಾರದ್ದು ಎಂದು ಘೋಷಿಸಿದರು.

ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆಲ್ಲುತ್ತೇವೆ ಎಂದ ಪ್ರಧಾನಿ ಮೋದಿ, ಕೊರೊನಾ ಲಸಿಕೆ ಕುರಿತಾಗಿ ಸುಳ್ಳು ವದಂತಿ ಹರಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ನಮ್ಮ ಲಸಿಕಾ ಅಭಿಯಾನವನ್ನು ಹಾಳುಗೆಡವುವ ತಂತ್ರ ನಡೆಯಿತು ಎಂದು ಬೇಸರಗೊಂಡರು. ದೇಶದ ಜನರು ತಮ್ಮ ಸಮುದಾಯದ ನಡುವೆ ಲಸಿಕೆಯ ಕುರಿತಾಗಿ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ದೇಶದ ಎಲ್ಲಾ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನದ ಸಾರಥ್ಯವನ್ನು ಭಾರತ ಸರ್ಕಾರವೇ ವಹಿಸಿಕೊಳ್ಳಿದೆ ಎಂದು ಮಾಹಿತಿ ನೀಡಿದ ಪ್ರಧಾನಿ ಮೋದಿ, ಜೂನ್ 21 ಅಂತಾರಾಷ್ಟ್ರೀಯ ಯೋಗದಿಂದಲೇ ಭಾರತ ಸರ್ಕಾರದ ಲಸಿಕೆ ಅಭಿಯಾನ ಆರಂಭವಾಗಲಿದೆ ಎಂದು ಪ್ರಕಟಿಸಿದರು.

ಭಾರತ ಸರ್ಕಾರವೇ ಲಸಿಕೆ ಖರೀದಿಸಿ ರಾಜ್ಯಗಳಿಗೆ ನೀಡಲಿದೆ, ದೇಶದ ಯಾವುದೇ ರಾಜ್ಯ ಸರ್ಕಾರವೂ ಲಸಿಕೆಗೆ ಹಣ ವೆಚ್ಚ ಮಾಡುವಂತಿಲ್ಲ ಎಂದು ಪ್ರಧಾನಿ ಮೋದಿ ಘೋಷಿಸಿದರು. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಭಾರತ ಸರ್ಕಾರವೇ ಪುಕ್ಕಟೆ ಲಸಿಕೆ ನೀಡಲಿದೆ.ಒಂದು ವೇಳೆ ಪುಕ್ಕಟೆಯಾಗಿ ಲಸಿಕೆ ಪಡೆಯಲು ಇಷ್ಟವಿಲ್ಲದಿದ್ದರೆ, ಖಾಸಗಿ ಆಸ್ಪತ್ರೆಗೆ ಹೋಗಲು ಇಚ್ಚೆ ಪಟ್ಟರೆ ಆ ಅವಕಾಶವೂ ಇದೆ ಎಂದ ಪ್ರಧಾನಿ ಮೋದಿ, ಇದಕ್ಕಾಗಿ ಶೇ. 25ರಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆಗೆ ಮೀಸಲಿಡಲಾಗುವುದು ಎಂದರು. ಖಾಸಗಿ ಆಸ್ಪತ್ರೆಗಳು 150 ರೂ. ಸೇವಾ ಶುಲ್ಕ ಪಡೆದು ಲಸಿಕೆ ನೀಡಬಹುದಾಗಿದೆ. ಇದನ್ನು ಸರ್ಕಾರ ನಿಗಾ ವಹಿಸಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *