ಸೋಂಕಿತರಿಗೆ ಚಿಕಿತ್ಸೆ ನೀಡಬೇಕಿದ್ದ ಸರಕಾರ ಹಣ ಲೂಟಿ ಮಾಡುವುದರಲ್ಲಿ ನಿರತವಾಗಿದೆ: ಶಾಸಕ ಖರ್ಗೆ

ಕಲಬುರಗಿ: ಕೊರೋನಾದಂತ ಸಂದಿಗ್ಧ ಸಮಯದಲ್ಲಿ ರಾಜಕೀಯ ಮಾಡದೇ ಸರಕಾರದೊಂದಿಗೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಿದೆ. ಕೇಂದ್ರ ಸರಕಾರ ನಾಲ್ಕು ಲಾಕ್ ಡೌನ್ ಹಾಗೂ ಮೂರು ಅನ್ ಲಾಕ್ ಆದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡಬೇಕಿದ್ದ ರಾಜ್ಯ ಸರಕಾರ ಹಣ ಲೂಟಿ ಮಾಡುವುದರಲ್ಲಿ ನಿರತವಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.


ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ವೈದ್ಯಕೀಯ ಸಲಕರಣೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ದೇಶದಲ್ಲೆ ಮೊದಲ ಸಾವು ಸಂಭವಿಸಿರುವುದು ಕಲಬುರಗಿ ನಗರದಲ್ಲಿಯೇ ಆದರೂ ಕೇವಲ ಒಂದೇ ಒಂದು ಕೊರೋನಾ ಸೋಂಕು ತಪಾಸಣೆ ಕೇಂದ್ರ ಸ್ಥಾಪಿಸಲಾಗಿದೆ. ಈ ಮೊದಲು ಹಲವಾರು ಬಾರಿ ನಾನು ಇಎಸ್ ಐ ಸಿ ನಲ್ಲಿ ಒಂದು ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಪತ್ರ ಬರೆದಿದ್ದೇನೆ. ಆದರೂ ಫಲಪ್ರದವಾಗಿಲ್ಲ ಹಾಗಾಗಿ‌ ಇಲ್ಲಿಯವರೆಗೆ ಕನಿಷ್ಠ ಐದು‌ಸಾವಿರ ವರದಿಗಳು ಬಾಕಿ ಉಳಿದಿವೆ. ಇದು ತಕ್ಷಣದ ಚಿಕಿತ್ಸೆ ನೀಡಲು ಅಡ್ಡಗಾಲು ಆಗಿದೆ.‌ ಇದು ಸರಕಾರಕ್ಕೆ ಯಾಕೆ ತಿಳಿಯುತ್ತಿಲ್ಲ, ಎಂದರು.

ಜಿಮ್ಸ್ ಹಾಗೂ ಇಎಸ್ ಐಸಿ ನಲ್ಲಿ ಎಷ್ಟು ಔಷಧಿ ಸಂಗ್ರಹಿಸಿಡಲಾಗಿದೆ ಎನ್ನುವ ಮಾಹಿತಿಯೂ ಯಾರು ಒದಗಿಸುತ್ತಿಲ್ಲ. ಮೂರು ಸಾವಿರಕ್ಕೆ ದೊರಕುವಂತ ಔಷಧಿ ಕಲಬುರಗಿ ಯಲ್ಲಿ ಲಭ್ಯವಿಲ್ಲದ ಕಾರಣ ಅದೇ ಔಷಧಿ ಸೋಲಾಪುರದಲ್ಲಿ ಬ್ಲಾಕ್ ಮಾರ್ಕೆಟ್ ನಲ್ಲಿ ಮೂರುಪಟ್ಟು ಹಣ‌ ತೆತ್ತು ಸೋಂಕಿತರು ಖರೀದಿಸುತ್ತಿದ್ದಾರೆ ಎಂದು ದಾಖಲೆ ಸಮೇತ ಶಾಸಕರು ವಿವರಿಸಿ ಸರಕಾರದ ವೈಫಲ್ಯತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರು.

ಕಲಬುರಗಿಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದರಿಂದ ಕೊವಿಡ್ ಹಾಗೂ ನಾನ್ ಕೊವಿಡ್ ಬೆಡ್ ಗಳ ವಿವರಗಳ ಲಭ್ಯತೆಯಿಲ್ಲ. ಸಿಎಂ, ಡಿಸಿಎಂ, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಸಾಲು ಸಾಲು ಮೀಟಿಂಗ್ ತೆಗೆದುಕೊಂಡರೂ ಸೂಕ್ತ ವೈದ್ಯಕೀಯ ಸೌಲಭ್ಯ ಕಲಬುರಗಿಯಲ್ಲಿ ಸಿಗುತ್ತಿಲ್ಲ ಎಂದರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *