*ಕಾಳಗಿ ತಾಲ್ಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವಿವಿಧ ಮೂಲ ಸೌಲಭ್ಯ ಒದಗಿಸುವಂತ್ತೆ ಜಿಲ್ಲಾಧಿಕಾರಿಗಳಿಗೆ ದಲಿತ ಸೇನೆ ಮನವಿ*
ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವು ಮೂಲ ಸೌಲಭ್ಯ ಒದಗಿಸುವಂತೆ ಇಂದು ಕಾಳಗಿ ತಹಸಿಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ದಲಿತ ಸೇನೆ ಸಂಘಟನೆಯ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ತಮ್ಮ ಮನವಿ ಪತ್ರದಲ್ಲಿ ತಾಲ್ಲೂಕಿನ ಆಸ್ಪತ್ರೆಯಲ್ಲಿ ಆಗುವ ಸಮಸ್ಯೆಗಳಾದ ಸಿಬ್ಬಂದಿಗಳ ಕೊರತೆ, ಆಕ್ಸಿಜನ್ ಸಿಲೆಂಡರ್ ಸಮಸ್ಯೆ, ವೆಂಟಿಲೇಟರ್ ಸಮಸ್ಯೆ, ಬೆಡ್ ಗಳ ಸಮಸ್ಯೆ, ವ್ಯಾಕ್ಸಿನ್ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ತಾಲೂಕಿನ ಆಸ್ಪತ್ರೆಯಲ್ಲಿ ಎದ್ದುಕಾಣುತ್ತಿವೆ. ಕೋವಿಡ್ ಸಂಧರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಸಹ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಆಸ್ಪತ್ರೆಯಲ್ಲಿ ಯಾವುದೇ ರೋಗಿಗಳು ಬಂದ್ರೆ ಅವರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ದಾಖಲೆಗಳು ಕೊಡುವ ತನಕ ಆಸ್ಪತ್ರೆಯಲ್ಲಿ ಚಿಕಿತ್ಸೆಯ ನೀಡುತ್ತಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ದಲಿತ ಸೇನೆಯ ಮುಖಂಡರು ಆರೋಪ ಮಾಡಿದ್ದಾರೆ. ಒಂದು ವೇಳೆ ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವುದರ ಮೂಲಕ ತಮ್ಮ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಸಂಧರ್ಭದಲ್ಲಿ ದಲಿತ ಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ಮೋಹನ್ ಚಿನ್ನ, ಕಾಳಗಿ ತಾಲ್ಲೂಕ ಅಧ್ಯಕ್ಷ ಖತಲಪ್ಪಾ ಅಂಕನ್, ಕಾರ್ಯಧ್ಯಕ್ಷ ನಾಗರಾಜ ಬೇವಿನಕರ್ ಉಪಸ್ಥಿತರಿದ್ದರು. ವರದಿ ಶಿವರಾಜ ಕಟ್ಟಿಮನಿ