ಬೀದರ್:- ಡಾ.ಅಜಯ್ ಸಿಂಗ್ ಉಪಯೋಗಿಸಿದ ವೆಂಟಿಲೆಟರ್ ಗಳನ್ನ ಮತ್ತೆ ಬಳಸಿದ್ದಾರೆ,ಪಿಪಿಈ ಕಿಟ್ ಖರಿದಿಯಲ್ಲೂ ಅಕ್ರಮ ವೆಸಗಿದ್ದಾರೆ ಎಂದು ಆಡಳಿತ ಪಕ್ಷದವರೆ ಆರೋಪಮಾಡುತ್ತಿದ್ದಾರೆ
ಬೀದರ್:- ಡಾ.ಅಜಯ್ ಸಿಂಗ್
ಉಪಯೋಗಿಸಿದ ವೆಂಟಿಲೆಟರ್ ಗಳನ್ನ ಮತ್ತೆ ಬಳಸಿದ್ದಾರೆ,ಪಿಪಿಈ ಕಿಟ್ ಖರಿದಿಯಲ್ಲೂ ಅಕ್ರಮ ವೆಸಗಿದ್ದಾರೆ ಎಂದು ಆಡಳಿತ ಪಕ್ಷದವರೆ ಆರೋಪಮಾಡುತ್ತಿದ್ದಾರೆ. ಮಾಜಿ ಸಚಿವ ಡಾ.ಅಜಯ್ ಸಿಂಗ್ ಹೇಳಿಕೆ.
ಬೀದರ್ ನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಪಿಪಿ ಕಿಟ್ ಖರೀದಿಯಲ್ಲೂ ಅಕ್ರಮವೆಸಗಿದ್ದಾರೆ ಎಂದು ಹೇಳಿದರು. 9.65 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ ಎಂದು ಆರೋಗ್ಯ ಸಚಿವರೆ ಹೇಳಿದ್ದಾರೆ. ಇದರಲ್ಲಿ ಮಹಾರಾಷ್ಟ್ರದ ಪ್ಲಾಸ್ಟ್ ಸರ್ಜಿ ಎನ್ನುವ ಕಂಪನಿಯೊಂದರಿಂದ ಬರೊಬ್ಬರಿ 350 ಲಕ್ಷ ಪಿಪಿಇ ಕಿಟ್ ಖರಿದಿ ಮಾಡಿದ್ದು ಅದರಲ್ಲೂ ಕಳಪೆ ಮಟ್ಟದ್ದಾಗಿದೆ ಎಂದು ರಾಜ್ಯಾದ್ಯಂತ ಈಗಾಗಲೇ ಆರೋಪ ಕೇಳಿ ಬಂದವೆ. ಅದರಲ್ಲಿ 1.25 ಲಕ್ಷ ಕಿಟ್ ಗಳು ಸರ್ಕಾರ ವಾಪಾಸ್ ಪಡೆದಿದೆ. ಮಾರುಕಟ್ಟೆ ದರ 330 ರೂಪಾಯಿ ಇದ್ದರೆ, ರಾಜ್ಯ ಸರ್ಕಾರ ಖರೀದಿ ಮಾಡಿದ್ದು 2117 ರೂಪಾಯಿ ಯಂತೆ 3.5 ಲಕ್ಷ ಖರೀದಿ ಮಾಡುವ ಮೂಲಕ ಪಿಪಿಪಿಇ ಕಿಟ್ ಖರೀದಿಯಲ್ಲೂ ಸರ್ಕಾರ ಭ್ರಷ್ಟಾಚಾರ ವೆಸಗಿದೆ ಎಂದು ಮಾಜಿ ಸಚಿವ ಡಾ.ಅಜಯ್ ಸಿಂಗ್, ರಾಜ್ಯ ಸರ್ಕಾರದ ಮೇಲೆ ಆರೋಪಗಳ ಸುರಿಮಳೆ ಗೈದರು…
ವರದಿ:-ಮಹೇಶ ಸಜ್ಜನ ಬೀದರ