ದೇಶದಲ್ಲಿ ಕಪ್ಪು ಶಿಲೀಂದ್ರ ಸೋಂಕಿಗೆ 2100 ಮಂದಿ ಬಲಿ
ನವದೆಹಲಿ, ಜೂ.12-ಕಪ್ಪು ಶಿಲೀಂದ್ರ ಸೋಂಕು ಬಾಧಿತರ ಸಂಖ್ಯೆ ದೇಶದಲ್ಲಿ ಇದುವರೆಗೆ ಶೇ.50 ರಷ್ಟು ಏರಿಕೆ ಕಂಡಿದೆ. ಈ ಸೋಂಕಿಗೆ ಇದುವರೆಗೆ 2100 ಮಂದಿ ಮೃತಪಟ್ಟಿದ್ದು, 31,000 ಜನರಿಗೆ ಈ ಸೋಂಕು ತಗುಲಿದೆ.
ಸೋಂಕಿನ ಏರಿಕೆ ಪ್ರಮಾಣವೂ ಶೇ.150ಕ್ಕಿಂತ ಹೆಚ್ಚಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಒಂದೆಡೆ ಕೊರೊನಾ ಸೋಂಕು ವ್ಯಾಪಕ ಪ್ರಮಾಣದಲ್ಲಿ ಕಾಣಿಸಿಕೊಂಡು ಈಗ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಕಪ್ಪು ಶಿಲೀಂದ್ರ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕ್ಕೆ
ಕಾರಣವಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಈವರೆಗೆ 31,216 ಪ್ರಕರಣಗಳು ಮತ್ತು 2,109 ಸಾವುಗಳು ವರದಿಯಾ ಗಿವೆ. ಬ್ಲಾಕ್ ಫಂಗಸ್ ಸೋಂಕು ಪ್ರಕರಣ ಮತ್ತು ಸಾವಿನ ಏರಿಕೆಗೆ ಆಂಫೊಟೆರಿಸಿನ್-ಬಿ ಔಷಧದ ತೀವ್ರ ಕೊರತೆಯೇ ಕಾರಣ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಹೆಚ್ಚು ಹಾನಿ ಸಂಭವಿಸಿರುವ ರಾಜ್ಯಗಳ ಪಟ್ಟಿಯಲ್ಲಿಯೂ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು.ಈವರೆಗೆ 7,057 ಪ್ರಕರಣಗಳು ದಾಖಲಾಗಿದ್ದು, 609 ಸಾವುಗಳು ಸಂಭವಿಸಿವೆ.
ಗುಜರಾತ್ 5,418 ಪ್ರಕರಣಗಳು ಮತ್ತು 323 ಸಾವುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 2,976 ಪ್ರಕರಣಗಳೊಂದಿಗೆ ರಾಜಸ್ಥಾನ ಮೂರನೇ ಸ್ಥಾನದಲ್ಲಿದೆ. ಮೇ 25 ರಂದು ಮಹಾರಾಷ್ಟ್ರದಲ್ಲಿ ಕೇವಲ 2,770 ಕಪ್ಪು ಶಿಲೀಂದ್ರ ಪ್ರಕರಣಗಳು ಮತ್ತು ಗುಜರಾತ್ನಲ್ಲಿ 2,859 ಪ್ರಕರಣಗಳು ವರದಿಯಾಗಿವೆ.