ವಿಜಯಪುರ : ಬಟ್ಟೆ ಅಂಗಡಿ ತೆರೆಯಲು ಅನುಮತಿ ನೀಡಲು ಒತ್ತಾಯಿಸಿ ಮನವಿ

ವಿಜಯಪುರ, ಜೂ.15-ವಿಜಯಪುರ ಜವಳಿ ವ್ಯಾಪಾರಸ್ತರ ಸಂಘ, ವಿಜಯಪುರ ವತಿಯಿಂದ ಬಟ್ಟೆ ಅಂಗಡಿ ವ್ಯಾಪಾರಮಾಡಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಉಪಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಮಾರ್ಕೆಟಿನ ಕೆಲವು ಅಂಗಡಿಗಳು ಶುರುವಾಗುತ್ತಿವೆ. ಅದರಲ್ಲಿ ಬಟ್ಟೆ ಅಂಗಡಿಗಳು ಪಾರಂಭಿಸಲು ಅನುಮತಿ ಇಲ್ಲ ನಾವು ಕಳೆದ ವರ್ಷ 2020 ಅತಿ ಹೆಚ್ಚು ವ್ಯಾಪಾರ ವಿರುವ ಸಮಯ ಎರ್ಪಿಲ್, ಮೇ ತಿಂಗಳಲಿನಲ್ಲಿ ಲಾಕ್‍ಡೌನ್ ಆಗಿ ವ್ಯಾಪಾರ ಕಳೆದುಕೊಂಡಿದ್ದೆವೆ ಈ ವರ್ಷವು 2021 ರಲ್ಲಿ ಅದೇ ರೀತಿಯಾಗಿ ನಾವು ವ್ಯಾಪಾರ ಕಳೆದುಕೊಂಡು ತುಂಬಾ ಕಷ್ಟದಲ್ಲಿದ್ದೆವೆ ನಮಗೆ ಸರಕಾರದಿಂದ ಯಾವುದೇ ರೀತಿಯಲ್ಲಿ ಸಹಾಯವಾಗಿಲ್ಲ. ನಾವು ಕರೆಂಟ್ ಬಿಲ್, ಮಹಾನಗರ ಪಾಲಿಕೆಯ ತೆರಿಗೆ, ನೀರಿನ ಕರ, ಬ್ಯಾಂಕಿನ ಬಡ್ಡಿ, ಸಹಿತ ಎಲ್ಲವು ಪಾವತಿಸಿದ್ದೇವೆ ನಮ್ಮಲ್ಲಿ ದುಡಿಯುವ ಜನರಿಗೆ ಇದುವರೆಗೂ ಸರಕಾರದಿಂದ ಯಾವುದೇ ಆರ್ಥಿಕವಾಗಿ ಅನುಕೂಲವಾಗಿಲ್ಲ ಅವರಿಗೆ ನಾವೇ ಸಂಬಳ ನೀಡಿದ್ದೇವೆ.
ಆದ ಕಾರಣ ತಮಗೆ ವಾರದಲ್ಲಿ ಮೂರು ದಿನವಾದರೂ ನಮಗೆ ವ್ಯಾಪಾರ ಮಾಡಲು ಅನುಮತಿ ನೀಡಬೇಕು. ದಿನಸಿ ಅಂಗಡಿಗಳು ಎಲ್ಲ ದಿನಗಳಲ್ಲಿ ಅನುಮತಿ ನೀಡುವುದಕ್ಕೆ ಏನು ಕಾರಣ ಅವರಿಗೆ ವಾರದಲ್ಲಿ ಮೂರು ದಿನ ವ್ಯಾಪಾರ ಮಾಡಲು ಕೊಡಿ, ಅಥವಾ ದಿನಸಿ ವ್ಯಾಪಾರಸ್ಥರಿಗೆ ಬೆಳಿಗ್ಗೆ 6 ರಿಂದ 10 ರ ವರೆಗೆ, ಹಾಗೆ ನಮಗೆ ಬಟ್ಟೆ ವ್ಯಾಪಾರಸ್ಥರಿಗೆ ಬೆಳಿಗ್ಗೆ 10 ರಿಂದ 3 ಗಂಟೆಯವರೆಗೆ ಅನುಮತಿ ನೀಡಲು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಗೋಪಾಲ ಮಹೇಂದ್ರಕರ್, ಕಾರ್ಯದರ್ಶೀÀ ವಿಕಾಸ ದರಬಾರ, ಚೇರಮನ್ ವಿಶ್ವನಾಥ ಬೀಳಗಿ, ಮಹೇಶ ಭಾವಿ, ಎಪಿಎಮ್‍ಸಿ ಅಧ್ಯಕ್ಷರಾದ ರವಿ ಬಿಜ್ಜರಗಿ, ಪ್ರದೀಪ ಮೊಗಲಿ, ಸಾಗರ ಮೊಗಲಿ ಮುಂತಾದವರು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *