‘ಬಿಗ್ ಬಾಸ್’ ಬಗ್ಗೆ ಬಿಗ್ ಅಪ್ಡೇಟ್: ಸ್ಪರ್ಧಿಗಳ ಸೂಟ್‌ಕೇಸ್ ಪ್ಯಾಕ್ ಆಗಿದೆ..!

ಹೈಲೈಟ್ಸ್‌:

  • ಪುನಃ ಆರಂಭವಾಗಲಿದೆ ‘ಬಿಗ್ ಬಾಸ್ ಕನ್ನಡ 8’
  • ‘ಬಿಗ್ ಬಾಸ್’ ಮನೆಯೊಳಗೆ ಕಾಲಿಡಲು 12 ಸ್ಪರ್ಧಿಗಳ ಸೂಟ್‌ಕೇಸ್‌ ಪ್ಯಾಕ್ ಆಗಿದೆ..!
  • ಇದೇ ತಿಂಗಳಲ್ಲಿ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಮತ್ತೆ ಶುರು!

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಹೇರಲಾಗಿದ್ದ ಲಾಕ್‌ಡೌನ್‌ನಿಂದ ಅರ್ಧಕ್ಕೆ ನಿಂತು ಹೋಗಿತ್ತು. ಲಾಕ್‌ಡೌನ್ ಮಾರ್ಗಸೂಚಿ ಅನುಗುಣವಾಗಿ ‘ ಬಿಗ್ ಬಾಸ್ ಕನ್ನಡ 8′ ಶೋ ಸ್ಥಗಿತಗೊಂಡಿತ್ತು.

ಮೇ 9 ರಂದು ‘ಬಿಗ್ ಬಾಸ್’ ಮನೆಯೊಳಗಿದ್ದ ಸ್ಪರ್ಧಿಗಳೆಲ್ಲಾ ಆಚೆ ಬಂದಿದ್ದರು. ವೈಷ್ಣವಿ ಗೌಡ, ಮಂಜು ಪಾವಗಡ, ಅರವಿಂದ್.ಕೆ.ಪಿ, ಶಮಂತ್, ಶುಭಾ ಪೂಂಜಾ, ರಘು, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಕಣ್ಣೀರು ಹಾಕುತ್ತಾ ‘ಬಿಗ್ ಬಾಸ್’ ಮನೆಯಿಂದ ಆಚೆ ಕಾಲಿಟ್ಟಿದ್ದರು.

”ಬಿಗ್ ಬಾಸ್ ಕನ್ನಡ 8′ ಕಾರ್ಯಕ್ರಮ ಇಲ್ಲಿಗೆ ನಿಂತು ಹೋಗುತ್ತೇನೋ.. 72 ದಿನಕ್ಕೇ ನಮ್ಮ ಜರ್ನಿ ಕ್ಲೋಸ್ ಆಗಿದೆ.. ಈ ಬಾರಿ ವಿನ್ನರ್ ಇರಲ್ವೇನೋ..” ಎಂಬಿತ್ಯಾದಿ ಪ್ರಶ್ನೆಗಳನ್ನು ತಲೆಯಲ್ಲಿಟ್ಟುಕೊಂಡು ‘ಬಿಗ್ ಬಾಸ್’ ಮನೆಯಿಂದ ಸ್ಪರ್ಧಿಗಳು ಹೊರ ಬಂದಿದ್ದರು.

ಈಗ ಗುಡ್‌ನ್ಯೂಸ್
ಇದೀಗ ರಾಜ್ಯದಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಆರಂಭಗೊಂಡಿದ್ದು, ‘ಬಿಗ್ ಬಾಸ್’ ಬಗ್ಗೆ ಗುಡ್ ನ್ಯೂಸ್ ಲಭ್ಯವಾಗಿದೆ. ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಮತ್ತೆ ಶುರುವಾಗುತ್ತಿದೆ. ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಎಲ್ಲಿಗೆ ನಿಂತಿತ್ತೋ.. ಅಲ್ಲಿಂದಲೇ ಮತ್ತೆ ಪ್ರಾರಂಭವಾಗಲಿದೆ.

‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಯಾವಾಗಿನಿಂದ ಪ್ರಸಾರವಾಗಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿಯನ್ನು ಕಲರ್ಸ್ ಕನ್ನಡ ವಾಹಿನಿ ಬಿಟ್ಟುಕೊಟ್ಟಿಲ್ಲ. ಆದರೆ, ‘ಬಿಗ್ ಬಾಸ್ ಕನ್ನಡ 8’ ಮತ್ತೆ ಶುರುವಾಗುತ್ತಿದೆ ಎಂಬುದರ ಸೂಚಕವಾಗಿ ಪೋಸ್ಟ್‌ವೊಂದನ್ನು ಕಲರ್ಸ್ ಕನ್ನಡ ವಾಹಿನಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ.

ಕೆಲವೇ ನಿಮಿಷಗಳ ಹಿಂದೆ ಅಪ್‌ಡೇಟ್‌ ಆಗಿರುವ ಕಲರ್ಸ್ ಕನ್ನಡ ವಾಹಿನಿಯ ಅಫೀಶಿಯಲ್ ಫೇಸ್‌ಬುಕ್‌ ಪೇಜ್‌ನ ಕವರ್ ಫೋಟೋದಲ್ಲಿ ಹನ್ನೆರಡು ಸೂಟ್‌ಕೇಸ್‌ಗಳು ರೆಡಿ ಆಗಿವೆ. ಅಂದ್ಮೇಲೆ, ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಮರಳಿ ಶುರುವಾಗುತ್ತಿದ್ದು, ‘ಬಿಗ್ ಬಾಸ್’ ಮನೆಯೊಳಗೆ ಕಾಲಿಡಲು 12 ಸ್ಪರ್ಧಿಗಳ ಸೂಟ್‌ಕೇಸ್‌ಗಳು ಪ್ಯಾಕ್ ಆಗಿವೆ ಅಂತ್ಲೇ ತಾನೆ ಅರ್ಥ.?

ಹೋದಾಗ 11, ಈಗ 12 ಯಾಕೆ?
‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತಗೊಂಡಿದ್ದಾಗ, ಹನ್ನೊಂದು ಸ್ಪರ್ಧಿಗಳು ‘ಬಿಗ್ ಬಾಸ್’ ಮನೆಯಲ್ಲಿದ್ದರು. ಈಗ 12 ಸೂಟ್‌ಕೇಸ್‌ಗಳು ಇವೆಯಲ್ಲಾ ಎಂಬ ಡೌಟ್ ನಿಮಗೆ ಕಾಡಬಹುದು.

‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಸ್ಥಗಿತಗೊಳ್ಳುವ ಮುನ್ನ ಅನಾರೋಗ್ಯ ಕಾರಣದಿಂದ ದಿವ್ಯಾ ಉರುಡುಗ ‘ಬಿಗ್ ಬಾಸ್’ ಮನೆಯಿಂದ ಆಚೆ ಕಾಲಿಟ್ಟಿದ್ದರು. ಬಹುಶಃ ಈಗ ದಿವ್ಯಾ ಉರುಡುಗ ಕೂಡ ಸೂಟ್‌ಕೇಸ್‌ ಪ್ಯಾಕ್ ಮಾಡಿಕೊಂಡು ‘ಬಿಗ್ ಬಾಸ್’ ಮನೆಗೆ ವಾಪಸ್ ಬರುತ್ತಿರಬಹುದು.

ಇದೇ ತಿಂಗಳು ‘ಬಿಗ್ ಬಾಸ್ ಕನ್ನಡ 8’ ಪುನಃ ಆರಂಭ?
‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಇದೇ ತಿಂಗಳು ಪುನಃ ಆರಂಭವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

ಪ್ರೋಮೋ ಶೂಟ್ ಆಗಿದೆ?
ಮೂಲಗಳ ಪ್ರಕಾರ, ಈಗಾಗಲೇ ಕೆಲವು ಸ್ಪರ್ಧಿಗಳ ಪ್ರೋಮೋ ಶೂಟ್ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದಿದೆ. ಸದ್ಯದಲ್ಲೇ ಹೊಸ ಪ್ರೋಮೋಗಳ ಜೊತೆಗೆ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದ ಪ್ರಸಾರ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *