ಚೆನ್ನೈ ವಂಡಲೂರು ಮೃಗಾಲಯಲ್ಲಿ ಬುಧವಾರ ಕವಿತ ಎಂಬ ಹೆಸರಿನ ಹೆಣ್ಣು ಸಿಂಹವೊಂದು ಕೊರೋನಗೆ ಬಲಿಯಾಗಿದೆ.
ವೈರಸ್ ಸೋಂಕಿಗೆ ಒಳಗಾದ ನಂತರ ಈ ಸಿಂಹಿಣಿಯ ಆರೋಗ್ಯ ತೀರ ಹದಗೆಟ್ಟಿ ಹೋಗಿತ್ತು. ಸಿಂಹಿಣಿ ಯಾವುದೆ ಘನ ಆಹಾರವನ್ನು ಸೇವಿಸುತ್ತಿರಲಿಲ್ಲ ಹಾಗೂ ಇದಕ್ಕೆ ದ್ರವ ಮೂಲದ ಆಹಾರವನ್ನು ನೀಡಲಾಗಿತ್ತು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಈ ಸಿಂಹಿಣಿ ನಿಧಾನವಾಗಿ ಚಿಕಿತ್ಸೆಗೆ ಸ್ವಂದಿಸುತ್ತಿತ್ತು ಆದರೆ ಈ 23 ವರ್ಷದ ಸಿಂಹಿಣಿ ಬುಧವಾರ ಬೆಳಿಗ್ಗೆ ಕೊರೋನಾ ಕಾಯಿಲೆಗೆ ಬಲಿಯಾಗಿದೆ.
ಸದ್ಯ ಮೃಗಾಲಯದಲ್ಲಿ 14 ಸಿಂಹಗಳಿದ್ದು ಇದರ ಪೈಕಿ ಮೂರು ಸಿಂಹಗಳು ತಜ್ಞರ ಸಹಯೋಗದೊಂದಿಗೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.