ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಭಾರತೀಯ ರೈಲ್ವೆ ಇಲಾಖೆಯು ಬುಧವಾರದಿಂದ ಹಲವಾರು ರೈಲುಗಳ ಸಂಚಾರವನ್ನು ಪ್ರಾರಂಭಿಸಿದೆ.
ಜನಶತಾಬ್ದಿ ಸೇರಿದಂತೆ 15 ಹೊಸ ರೈಲುಗಳ ಸಂಚಾರ ಬುಧವಾರದಿಂದ ಆರಂಭವಾಗಿದೆ. ಈ ರೈಲುಗಳಲ್ಲಿ ಸಂಚಾರ ನಡೆಸಲು ಅನ್ ಲೈನ್ ಬುಕ್ಕಿಂಗ್ ಮುಂಚಿತವಾಗಿಯೇ ಮಾಡಿಕೊಳ್ಳಬೇಕು.
ಕೋವಿಡ್ 2ನೇ ಅಲೆ ಹೆಚ್ಚಾಗಿದ್ದು ಹರಡಿದ್ದು ಅದನ್ನು ತಡೆಯಲು ತಡೆಯುವ ನಿಟ್ಟಿನಲ್ಲಿ ಆಯಾ ರಾಜ್ಯದ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದರಿಂದ ಕೇರಳದಿಂದ ಸಂಚಾರ ನಡೆಸುವ 31 ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಈಗ 15 ರೈಲುಗಳ ಸಂಚಾರ ಪುನಃ ಆರಂಭಿಸಲಾಗಿದೆ.
ಕೇರಳದಿಂದ ಸಂಚಾರ ನಡೆಸುವ ಕೆಲವು ರೈಲುಗಳು ಕರ್ನಾಟಕಕ್ಕೆ ಸಹ ಆಗಮಿಸಲಿವೆ. ರೈಲುಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷಾ ವರದಿ ಕಡ್ಡಾಯವಲ್ಲ. ಅದ್ರೆ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದೆ.
ಕೋಚುವೆಲಿ – ಮೈಸೂರು, ತಿರುವನಂತಪುರಂ – ಮೈಸೂರು, ಎರ್ನಾಕುಲಂ – ಬೆಂಗಳೂರು ಇಂಟರ್ ಸಿಟಿ , ಎರ್ನಾಕುಲಂ – ಕಣ್ಣೂರು ಇಂಟರ್ ಸಿಟಿ ,ತಿರುವನಂತಪುರಂ – ಎರ್ನಾಕುಲಂ, ತಿರುವನಂತಪುರಂ – ಕಣ್ಣೂರು ಜನ ಶತಾಬ್ದಿ ,ನಾಗರಕೋಯಿಲ್ – ಕೊಯಮತ್ತೂರು , ತಿರುವನಂತಪುರಂ – ತಿರುಚಿರಾಪಳ್ಳಿ ರೈಲುಗಳು ಇಂದಿನಿಂದ ಕಾರ್ಯಾರಂಭ ಮಾಡಲಿದೆ.