ಕೊರೋನಾ ಎರಡನೇ ಅಲೆಯಿಂದ 2 ಲಕ್ಷ ಕೋಟಿ ರೂ. ಉತ್ಪಾದನಾ ನಷ್ಟ: ಆರ್ ಬಿಐ

ನವದೆಹಲಿ: ಕೊರೋನಾ ಎರಡನೇ ಅಲೆಯ ಹೊಡೆತ ಎಲ್ಲಾ ಕ್ಷೇತ್ರಗಳ ಮೇಲೆ ತೀವ್ರವಾಗಿದೆ. ಇದರಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ 2 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂದಾಜಿಸಿದೆ.

ಈ ತಿಂಗಳ ಮಾಸಿಕ ಬುಲೆಟಿನ್ ನಲ್ಲಿ ಆರ್ ಬಿಐ, ಕೊರೋನಾ ವೈರಸ್ ನ ನಿರ್ಬಂಧದಿಂದಾಗಿ ಸಣ್ಣ ನಗರಗಳಿಗೆ ಮತ್ತು ಗ್ರಾಮಗಳಲ್ಲಿ ಕೂಡ ಬೇಡಿಕೆ ಕಡಿತಗೊಂಡಿದೆ. ಭಾರತದ ಆರ್ಥಿಕತೆ ಸಾಂಕ್ರಾಮಿಕದ ಎರಡನೇ ಅಲೆಯೊಂದಿಗೆ ಸೆಣಸಾಡುತ್ತಿದೆ ಎಂದು ಹೇಳಿದೆ.

ಹಣಕಾಸು ವರ್ಷ 2021ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 24ರಷ್ಟು ಅಂದರೆ ರಾಷ್ಟ್ರೀಯ ಉತ್ಪಾದನೆಯಲ್ಲಿ 11 ಲಕ್ಷ ಕೋಟಿ ರೂಪಾಯಿ ನಷ್ಟವುಂಟಾಗಬಹುದು ಅಂದಾಜಿಸಲಾಗಿದ್ದು, ಆರ್ಥಿಕ ತಜ್ಞರ ಅಂದಾಜಿಗಿಂತ 5-6 ಲಕ್ಷ ಕಡಿಮೆಯಾಗಿದೆ. ಎಸ್‌ಬಿಐ ರಿಸರ್ಚ್ ಪ್ರಸಕ್ತ ತ್ರೈಮಾಸಿಕದ ಜಿಡಿಪಿ ನಷ್ಟವನ್ನು 6 ಲಕ್ಷ ಕೋಟಿ ರೂ ಎಂದು ಪರಿಗಣಿಸಿದರೆ, ಬಾರ್ಕ್ಲೇಸ್ ಇದನ್ನು 5.4 ಲಕ್ಷ ಕೋಟಿ ರೂ ಎಂದು ಅಂದಾಜಿಸಿದೆ, ಲಾಕ್‌ಡೌನ್‌ ಜೂನ್ ಅಂತ್ಯದವರೆಗೆ ಮುಂದುವರಿಯಬಹುದು.

ದೇಶೀಯ ಬೇಡಿಕೆಯಲ್ಲಿ ತೀವ್ರ ಹೊಡೆತ ಬಿದ್ದರೂ, ಒಟ್ಟಾರೆ ಪೂರೈಕೆಯ ಪರಿಸ್ಥಿತಿ ಸಮಾಧಾನಕರವಾಗಿದೆ. ಕೃಷಿ ಮತ್ತು ಸಂಪರ್ಕವಿಲ್ಲದ ಸೇವೆಗಳು ಮಾರುಕಟ್ಟೆ ಸ್ಥಿತಿಯನ್ನು ಹಿಡಿದಿಟ್ಟುಕೊಂಡಿವೆ. ಕೋವಿಡ್ ನಿರ್ಬಂಧಗಳ ಮಧ್ಯೆ ಕೈಗಾರಿಕೆ ಉತ್ಪಾದನೆ ಮತ್ತು ರಫ್ತು ಹೆಚ್ಚಾಗಿದೆ ಎಂದು ಆರೋ ಬಿಐ ತಿಳಿಸಿದೆ.

ದೇಶದ ನಾಗರಿಕರಿಗೆ ಲಸಿಕೆ ನೀಡುವ ಪ್ರಮಾಣವು ಆರ್ಥಿಕ ವ್ಯವಸ್ಥೆ ಚೇತರಿಕೆ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ ಎಂದು ಆರ್ ಬಿಐ ಹೇಳಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *