ಮೇಕೆದಾಟು ಯೋಜನೆ ಶೀಘ್ರ ಆರಂಭ: ಬಿಎಸ್ವೈ
ರಾಜ್ಯದ ಮಹತ್ವಕಾಂಕ್ಷೆಯ ಮೇಕೆದಾಟು ಯೋಜನೆಯನ್ನು ಎಲ್ಲ ಅನುಮತಿಗಳನ್ನು ಪಡೆದು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮೇಕೆದಾಟು ಯೋಜನೆ ಕುಡಿಯುವ ನೀರಿಗೆ ಅನುಕೂ ಕಲ್ಪಿಸಲಿದೆ. ಈ ಯೋಜನೆಗೆ ತಡೆ ಕೋರಿರುವ ಅರ್ಜಿಯ ವಿಚಾರಣೆ ನಡೆಸಿದ ಇಂದು ಹಸಿರು ನ್ಯಾಯಪೀಠ ರಾಜ್ಯದ ವಾದ ಮನ್ನಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ ಎಂದು ಹೇಳಿದರು.
ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯದ ನೆಲ,ಜಲ ವಿಚಾರ ಬಂದಾಗಲೆಲ್ಲ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ರಾಜ್ಯದ ಹಿತಾಸಕ್ತಿ ಕಾಪಾಡಿಕೊಂಡು ಬಂದಿದೆ ಎಂದು ಹೇಳಿದರು.
ಮೇಕೆದಾಟು ಯೋಜನೆ ಕುರಿತಂತೆ ಎನ್ ಜಿಟಿ ಸ್ವಯಂ ಪ್ರೇರಿತ ಅರ್ಜಿದಾಖಲಿಸಿಕೊಂಡಿತ್ತು.
ಆದರೆ ಕಾನೂನು ಇಲಾಖೆ ಸಮರ್ಥವಾಗಿ ವಾದ ಮಂಡಿಸಿ ಮೇಕೆದಾಟು ಯೋಜನೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಅಲ್ಲದೆ ಈ ಯೋಜನೆಯಿಂದ ಪರಿಸರಕ್ಕೂ ಯಾವುದೇ ರೀತಿ ಹಾನಿ ಮಾಡಿಲ್ಲವೆಂದು ಎನ್ ಜಿಟಿಗೆ ಮನವರಿಕೆ ಮಾಡಲಾಯಿತು. ಹೀಗಾಗಿ ಟ್ರಿಬ್ಯೂನಲ್ ಆದೇಶ ರಾಜ್ಯದ ಪರವಾಗಿ ಬಂದಿದೆ. ಈ ವಿಷಯ ಕುರಿತಂತೆ ಮತ್ತೊಂದು ಪ್ರಕರಣ ಸುಪ್ರೀಂಕೋರ್ಟಿ ನಲ್ಲಿದೆ.ಹೀಗಾಗಿ ವಿಚಾರಣೆ ವೇಳೆ ರಾಜ್ಯದ ಹಿತಾಸಕ್ತಿ ಕಾಪಾಡಲಾಗುವುದು ಎಂದು ಬೊಮ್ಮಾಯಿ ಹೇಳಿದರು.