PM Modi: ರೇಟಿಂಗ್ ತಗ್ಗಿದರೂ, ಜಾಗತಿಕ ನಾಯಕರನ್ನು ಹಿಂದಿಕ್ಕಿದ ಪ್ರಧಾನಿ ಮೋದಿ

ಮಾರ್ನಿಂಗ್ ಕನ್ಸಲ್ಟ್, ಚುನಾಯಿತ ನಾಯಕರುಗಳ ರೇಟಿಂಗ್ ಪತ್ತೆ ಹಚ್ಚುತ್ತಿದೆ. ಈ ರೇಟಿಂಗ್ನಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಪ್ರಧಾನಿ ಮೋದಿ ಅವರು 20 ಪಾಯಿಂಟ್ ಇಳಿಕೆ ಕಂಡಿದ್ದಾರೆ. ಅವರು ಈ ಬಾರಿ 66ರಷ್ಟಿದ್ದರೂ, ಇತರೆ ಜಾಗತಿಕ ನಾಯಕರನ್ನು ಹಿಂದಿಕ್ಕಿದ್ದಾರೆ

ಮಾರ್ನಿಂಗ್ ಕನ್ಸಲ್ಟ್ ಜಾಗತಿಕ ನಾಯಕರ ಅನುಮೋದನೆ ರೇಟಿಂಗ್ ಪತ್ತೆ ಹಚ್ಚಿದ್ದು, ಗುರುವಾರ ಈ ಕುರಿತು ಪ್ರಕಟಿಸಿದೆ

ಇದಕ್ಕಾಗಿ ಭಾರತದಲ್ಲಿ ಸಮೀಕ್ಷೆ ನಡೆಸಿದವರಲ್ಲಿ 2,126 ಮಂದಿ ಅಂದರೆ ಶೇ 66ರಷ್ಟು ಪ್ರಧಾನಿ ಮೋದಿ ಪರ ಒಲವು ತೋರಿದ್ದರೆ, ಶೇ 28ರಷ್ಟು ಮಂದಿ ಅವರನ್ನು ನಿರಾಕರಿಸಿದ್ದಾರೆ.

ಮಾರ್ನಿಂಗ್ ಕನ್ಸಲ್ಟ್ ರಾಜಕೀಯ ಚುನಾವಣೆಗಳಲ್ಲಿನ ಮತದಾನದ ದತ್ತಾಂಶ ಒದಗಿಸುವ ರಾಜಕೀಯ ಗುಪ್ತಚರದ ಘಟಕವಾಗಿದೆ.

2019ರಲ್ಲಿ ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದಾಗ ಅವರ ರೇಟಿಂಗ್ ಶೇ 82ರಷ್ಟಿತ್ತು. ಇದೇ ವೇಳೆ ಶೇ 11 ರಷ್ಟು ಜನರು ಅವರನ್ನು ನಿರಾಕರಿಸಿದ್ದರು

ಮೋದಿ ನಂತರದಲ್ಲಿ ಇಟಲಿ ಪ್ರಧಾನಿ ಮರಿಯೋ ಡಾಗ್ರಿ 65 ರೇಟಿಂಗ್ ಪಡೆದರೆ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ 63, ಆಸ್ಟೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ 54, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ 53, ಅಮೆರಿಕ ಅಧ್ಯಕ್ಷ ಜೋ ಬಿಡನ್ 53 ರೇಟಿಂಗ್ ಪಡೆದಿದ್ದಾರೆ.