2ನೇ ಅಲೆಯಲ್ಲಿ ತತ್ತರಿಸಿದ್ದ ದೇಶದ ಜನ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕಗೊಂಡಿದ್ದರು . ಈ ಕುರಿತಂತೆ ಆನ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸಂಶೋಧನೆಯನ್ನು ನಡೆಸಿತ್ತು .
ಈ ವರದಿಯ ಪ್ರಕಾರ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ. ಮಕ್ಕಳಲ್ಲಿ ಇರುವಂತಹ ಸೆರೋ ಪಾಸಿಟಿವಿಟಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಅಂಶ ಮಕ್ಕಳಲ್ಲಿ ಹೆಚ್ಚಾಗಿ ಇರುವುದರಿಂದಾಗಿ , ಮಕ್ಕಳಿಗೆ ಕೊರೋನಾ ಬಂದರು ಸಹ ಅವರ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತಿದೆ.
ಈ ಸಂಶೋಧನೆಗಾಗಿ ದೇಶದ 5 ರಾಜ್ಯಗಳಲು ಸೇರಿದಂತೆ ಒಟ್ಟು 4,509 ಮಕ್ಕಳನ್ನು ಸರ್ವೆಗೆ ಒಳಪಡಿಸಲಾಗಿತ್ತು. ಇದರಲ್ಲಿ 700 ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಾಗಿದ್ದು, ಇನ್ನುಳಿದ 3,809 ಮಕ್ಕಳು 18 ವರ್ಷದವರಾಗಿದ್ದಾರೆ. ಎಲಿಸಾ ಕಿಟ್ ಬಳಸಿ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಸೋಂಕು ಮಕ್ಕಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುವುದಿಲ್ಲ ಎಂಬುದು ತಿಳಿದು ಬಂದಿದೆ. ಮಾರ್ಚ್ 15 ರಿಂದ ಜೂನ್ 10ರವರೆಗೆ ಈ ಸಂಶೋಧನೆಯನ್ನು ನಡೆಸಲಾಗಿತ್ತು.