ಬೀದರ್:- ಸಿಎಂ ಬೇಗ ಗುಣಮುಖರಾಗಲೇಂದು ಹೋಮ‌ಹವನ ನಡೆಸಿದ ಪಶುಸಂಗೋಪನಾ ಸಚಿವ ಪ್ರಭುಚೌಹಾಣ್..

ಬೀದರ ಕೋವಿಡ್ ಮಹಾಮಾರಿ ನಾಡಿನ
ದೊರೆ ಬಿಎಸ್ ಯಡಿಯೂರಪ್ಪಾವರಿಗೂ ವಕ್ಕರಿಸಿದೆ..ಸಿಎಂ ಯಡಿಯೂರಪ್ಪ ಅವರಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನಲೆ ಈ‌ ಮಹಾಮಾರಿಯಿಂದ ಆದಷ್ಟು ಬೇಗ ಗುಣಮುಖರಾಗಿ ಹೊರಬಂದು‌ ಮತ್ತೆ ಬೇಗ ಜನರ ಸೇವೆಗೆ ಯಡಿಯೂರಪ್ಪ ನಿಲ್ಲಲಿ ಎಂದು ಪಶುಸಂಗೋಪನಾ ಸಚಿವ ಪ್ರಭುಚೌಹಾಣ್ ತಮ್ಮ ಸ್ವಗ್ರಾಮ ಬೋಂತಿಯ ಘಮಸುಬಾಯಿ ತಾಂಡಾದಲ್ಲಿನ ಶ್ರೀ ಸಂತ ಸೇವಾಲಾಲ್ ಮಹಾರಾಜರು ಮತ್ತು ಇಚ್ಚಾಪೂರ್ತಿ ಮಾತಾ ಜಗದಂಬಾ ದೇವಸ್ಥಾನದಲ್ಲಿ ಇಂದು ಹೋಮ, ಹವನ ಮತ್ತು ವಿಶೇಷ ಪೂಜೆ ನಡೆಸಿದರು…
ಕೋವಿಡ್-19 ಸೋಂಕು ದೇಶವನ್ನು ಪ್ರವೇಶಿಸಿದಾಗ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಕೂಡ ಲಾಕ್‌ಡೌನ್ ಕಟ್ಟುನಿಟ್ಟಿನ ಜಾರಿಗೆ ನಿರ್ದೇಶಿಸಿ, ರಾಜ್ಯದಲ್ಲಿ ಆರಂಭದಲ್ಲಿ ಸೋಂಕು ಹರಡದಂತೆ ಕ್ರಮವಹಿಸಿದರು. ಈ ಹಿನ್ನೆಲೆಯಲ್ಲಿ ಎದುರಾದ ಎಲ್ಲ ಸವಾಲುಗಳನ್ನು ಮಾನ್ಯ ಮುಖ್ಯಮಂತ್ರಿಗಳು, ಎಲ್ಲ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸೇರಿ ಸಮರ್ಥವಾಗಿ ಎದುರಿಸಿದರು.


ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರು, ಅಧಿಕಾರ ಸ್ವೀಕರಿಸಿದ ದಿನಗಳಿಂದ ಹಿಡಿದು ಹತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಲೇ ರಾಜ್ಯವನ್ನು ಪ್ರಗತಿ ಪಥದತ್ತ ಕೊಂಡೋಯ್ಯಲು ಶತಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರದ ಛಾಯೆ ಆವರಿಸಿದಾಗ, ಆನಂತರ ಅತೀವೃಷ್ಟಿ ಬಂದಾಗಲೂ ಕುಗ್ಗದೇ, ರಾಜ್ಯದ ಜನರ ಹಿತ ಕಾಯಲು ಶ್ರಮ ವಹಿಸಿದ್ದಾರೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಕೋವಿಡ್‌ನಿಂದ ಬೇಗ
ಎಂದು ಸಚಿವರಾದ ಪ್ರಭು ಚವ್ಹಾಣ್ ಅವರು ದೇವರಲ್ಲಿ ಪ್ರಾರ್ಥಿಸಿದ್ದೆನೆ ಎಂದು ಹೇಳಿದರು..

ವರದಿ:-ಮಹೇಶ ಸಜ್ಜನ ಬೀದರ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *