ಕೋವಿಡ್ ಅಬ್ಬರದಲ್ಲೂ ಭಾರತದಿಂದ ಸ್ವಿಸ್‌ ಬ್ಯಾಂಕ್‌ಗೆ ದಾಖಲೆ ಮೊತ್ತದ ಹಣ ರವಾನೆ..!

ಹೈಲೈಟ್ಸ್‌:

  • ಭಾರತೀಯರ ಒಟ್ಟು ಹೂಡಿಕೆ 20,700 ಕೋಟಿ ರೂ.ಗೆ ಏರಿಕೆ
  • ಈ ಮೊತ್ತವು 13 ವರ್ಷಗಳಲ್ಲೇ ಅತ್ಯಧಿಕ..!
  • ದೇಶದಲ್ಲಿ ಕೊರೊನಾರ್ಭಟದ ನಡುವೆಯೂ ಕುಬೇರರ ಪರಾಕ್ರಮ..!

ಹೊಸ ದಿಲ್ಲಿ: ಕೋವಿಡ್‌ ಆರ್ಭಟದ ನಡುವೆಯೂ ಭಾರತದಿಂದ ಸ್ವಿಸ್‌ ಬ್ಯಾಂಕ್‌ಗೆ ದಾಖಲೆ ಪ್ರಮಾಣದ ಹಣ ಹರಿದುಹೋಗಿದೆ..! ಈ ಹಿನ್ನೆಲೆಯಲ್ಲಿ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿರುವ ಹಣದ ಬಗ್ಗೆ ಮಾಹಿತಿ ನೀಡುವಂತೆ ಸ್ವಿಟ್ಜರ್‌ಲೆಂಡ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವಾಲಯಮಾಹಿತಿ ನೀಡಿದೆ.

2020ರ ಆರ್ಥಿಕ ವರ್ಷದಲ್ಲಿ ಭಾರತೀಯರು ಒಟ್ಟು 20,700 ಕೋಟಿ ರೂ. ಹಣವನ್ನು ಸ್ವಿಸ್‌ ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಜಮೆ ಮಾಡಿದ್ದಾರೆ ಎಂಬ ಅಂಕಿ ಅಂಶಗಳು ಲಭ್ಯವಾಗಿವೆ. ಈ ಮೊತ್ತವು ಕಳೆದ 13 ವರ್ಷಗಳಲ್ಲೇ ಅತ್ಯಧಿಕ ಎಂಬ ಮಾಹಿತಿಯೂ ಲಭ್ಯವಾಗಿದೆ.

ಸ್ವಿಟ್ಜರ್‌ಲೆಂಡ್‌ನ ಸೆಂಟ್ರಲ್‌ ಬ್ಯಾಂಕ್‌ನ ಮಾಹಿತಿಯನ್ವಯ, ಅಲ್ಲಿನ ಬ್ಯಾಂಕ್‌ಗಳಲ್ಲಿ ಹೂಡಿಕೆದಾರರು ಜಮೆ ಮಾಡಿರುವ ಹಣದ ಪ್ರಮಾಣ ಶೇ. 183ರಷ್ಟು ಏರಿಕೆ ಕಂಡಿದೆ. 2019ರ ಅಂತ್ಯಕ್ಕೆ ಹೋಲಿಸಿದರೆ 6,625 ಕೋಟಿ ರೂ. ಹೆಚ್ಚಳ ಕಂಡಿದೆ. ಆದ್ರೆ, ಈ ಬೆಳವಣಿಗೆಯು ಕಪ್ಪು ಹಣ ಸಂಗ್ರಹಣೆ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಸ್ವಿಟ್ಜರ್‌ಲೆಂಡ್‌ನ ಸೆಂಟ್ರಲ್‌ ಬ್ಯಾಂಕ್‌ ನೀಡಿರುವ ಮಾಹಿತಿಯು ಆ ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿ ಭಾರತೀಯರು ಹೂಡಿಕೆ ಮಾಡಿರುವ ಹಣದ ಒಟ್ಟಾರೆ ಮೊತ್ತವಾಗಿದೆ. ಆದ್ರೆ, ಮತ್ತೊಂದು ದೇಶದ ಮಾಹಿತಿ ನೀಡಿ ಭಾರತೀಯರು ಸ್ವಿಸ್‌ ಬ್ಯಾಂಕ್‌ನಲ್ಲಿ ಇಟ್ಟಿರುವ ಹಣವು ಇದರ ವ್ಯಾಪ್ತಿಗೆ ಬರೋದಿಲ್ಲ. ಹಾಗೆ ನೋಡಿದ್ರೆ, 2014ರ ಚುನಾವಣೆಯಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಕಪ್ಪು ಹಣ ವಾಪಸಾತಿ ಘೋಷಣೆಯೂ ಪ್ರಮುಖ ಪಾತ್ರ ವಹಿಸಿತ್ತು. ಲಕ್ಷ ಕೋಟಿಗಳ ಲೆಕ್ಕದಲ್ಲಿ ಭಾರತದಿಂದ ಹರಿದು ಹೋಗಿರುವ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತರೋದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದರು.

ಸ್ವಿಸ್‌ನಲ್ಲಿ ಭಾರತೀಯರು ಬಾಂಡ್‌ಗಳ ಮೇಲೆ, ಸೆಕ್ಯುರಿಟಿ ಡಿಪಾಸಿಟ್ ರೂಪದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಹೂಡಿಕೆ ರೂಪದಲ್ಲಿ ಜಮೆ ಮಾಡಿರುವ ಪ್ರಮಾಣಕ್ಕಿಂತಾ ಇದು ಹೆಚ್ಚಾಗಿದೆ ಎಂದು ಸ್ವಿಸ್‌ ನ್ಯಾಷನಲ್ ಬ್ಯಾಂಕ್‌ನ ಅಂಕಿ ಅಂಶಗಳು ಹೇಳುತ್ತವೆ.

ಸ್ವಿಟ್ಜರ್‌ಲೆಂಡ್‌ನ ಬ್ಯಾಂಕ್‌ಗಳ ಶಾಖೆಯೂ ಭಾರತದಲ್ಲಿಯೂ ಇವೆ. ಈ ಬ್ಯಾಂಕ್‌ಗಳ ಜೊತೆ ಭಾರತೀಯ ಬ್ಯಾಂಕ್‌ಗಳು ನಡೆಸಿದ ಹಣಕಾಸಿನ ವ್ಯವಹಾರವೂ ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಅಂದಾಜಿಸಿದ್ದು, ಈ ಸಂಬಂಧ ಸ್ವಿಸ್‌ ಸರ್ಕಾರದಿಂದ ಮಾಹಿತಿ ಸಂಗ್ರಹಿಸಲಿದ್ದೇವೆ ಎಂದು ತಿಳಿಸಿದೆ.

 

 

 

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *