ಅಫಜಲಪುರ ತಾಲ್ಲೂಕಿನ ತೆಲ್ಲೂರ ಗ್ರಾಮ ಮೂಲಸೌಕರ್ಯಗಳಿಂದ ವಂಚಿತವಾಗಿದೆ.
ಅಫಜಲಪುರ ತಾಲ್ಲೂಕಿನ ತೆಲ್ಲೂರ ಗ್ರಾಮ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಎಷ್ಟೋ ಬಾರಿ ತಂದರು ಯಾವುದಕ್ಕೂ ಕ್ಯಾರೆ ಎನ್ನದೆ ಒಂದೆ ಒಂದು ದಿನವೂ ಪಂಚಾಯತಿಗೆ ಹಾಜರಾಗದ ಇವರು ಯಾರೊಬ್ಬರ ಮಾತಿಗು ಬೆಲೆ ಕೊಡುವುದಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೊಡಗಿಕೊಂಡರು. ಕರವೇ ಅಧ್ಯಕ್ಷರಾದ ಶರಣು ಪೂಜಾರಿ ಅವರು ನಮ್ಮ ಗ್ರಾಮದ ಕುಂದುಕೊರತೆಗಳನ್ನು ಪಿಡಿಓ ಅವರ ಗಮನಕ್ಕೆ ತಂದರು ಯಾವುದೇ ಪ್ರಯೊಜನವಾಗಲ್ಲ. ಹರಕರಯ ಮಾತುಗಳಿಂದ ಜನರನ್ನು ಮರಳು ಮಾಡಿ ತಮ್ಮ ಕರ್ತವ್ಯಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಜಿ ಮಲಂಗ ವಿರುದ್ಧ ಹರಹಾಯ್ದರು.ಇದಲ್ಲದೆ ಗ್ರಾಮದಲ್ಲಿ ಯಾವುದೇ ಒಂದು ಚರಂಡಿ ಸ್ವಚ್ಛ ಗೊಳಿಸದೆ,ಯಾವುದೇ ಶೌಚಾಲಯ ಮಾಡದೆ ಗ್ರಂಥಾಲಯ ವ್ಯವಸ್ಥೆ ಮಾಡದೆ ತಮ್ಮ ಷರತ್ತಿನಲ್ಲೆ ಅಧಿಕಾರ ಚಲಾಯಿಸುವತ್ತಿದ್ದಾರೆ. ಗ್ರಾಮಸ್ಥರು ಎಷ್ಟೇ ಬೆಡಿಕೊಂಡರು ಯಾವುದಕ್ಕೂ ಬಗ್ಗದೆ ಜಗ್ಗದೆ ಇರುವ ಅಧಿಕಾರಿ ಹಾಜಿ ಮಲಂಗ ಸಾಹೇಬರು. ಇವರಿಗೆ ಸಂಬಂಧ ಪಟ್ಟ ಅಧಿಕಾರಿಗಳು ಇವರ ಬಗ್ಗೆ ಸ್ವಲ್ಪ ಗಮನಹರಿಸಬೆಕು