ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 600000 ರೂಪಾಯಿಯ ಬೆಲೆಯ ಗಾಂಜಾವನ್ನು ಆಳಂದ ಪೊಲೀಸರಿಂದ ಜಪ್ತಿ
ದಿನಾಂಕ .19/06/2021 ರಂದು ಮಧ್ಯಾಹ್ನ 2 ಗಂಟೆಗೆ ಆಳಂದ ಉಪವಿಭಾಗದ ಪೊಲೀಸ್ ಉಪಾದೀಕ್ಷಕರಾದ ಶ್ರೀ ಮಲ್ಲಿಕಾರ್ಜುನ್ ಸಾಲಿ ರವರಿಗೆ ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಓಂದು ವಾಹನದಲ್ಲಿ ಗಾಂಜಾ ಸಾಗಾಟ ವಾಗುತ್ತಿದ್ದ ಖಚಿತ ಮಾಹಿತಿ ಬಂದಮೇರೆಗೆ. ಮಾನ್ಯ ಪೊಲೀಸ್ ಅಧೀಕ್ಷಕರು ಕಲಬುರ್ಗಿ ಜಿಲ್ಲೆ ಶ್ರೀಮತಿ ಸಿಮಿ ಮರಿಯಮ್ ಜಾರ್ಜ್ ಐಪಿಎಸ್ ಮತ್ತು ಮಾನ್ಯ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರಸನ್ ಕುಮಾರ್ ದೇಸಾಯಿ ಇವರುಗಳ ಮಾರ್ಗದರ್ಶನದಲ್ಲಿ ಆಳಂದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಇವರ ನೇತೃತ್ವದಲ್ಲಿ ಮಂಜುನಾಥ್ s ಸಿಪಿಐ ಆಳಂದ ಹಾಗೂ ಮಾಂತೇಶ್ ಪಾಟೀಲ್ ಪಿಎಸ್ಐ ಆಳಂದ್ ಹಾಗೂ ಸಿಬ್ಬಂದಿಯವರಾದ ಸಿದ್ದರಾಮ್ ಬಿರಾದಾರ್, ಮಹಿಬೂಬ್ ಷೇಕ್ , ಚಂದ್ರಶೇಖರ್ , ರಾಜೇಂದ್ರ ರತನ್ , ಸಿದ್ದು ಪಾಟೀಲ್ ಮತ್ತು ಮಾಂತೇಶ್ ಇವರುಗಳನ್ನು ಒಳಗೊಂಡ ತಂಡವನ್ನು ರಚಿಸಿಕೊಂಡು ಆಪಾದಿತರು ಅಕ್ರಮವಾಗಿ ಗಾಂಜಾವನ್ನು ಒಂದು ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾಗ ಹೋಂಚು ಹಾಕಿ ಉಮರ್ಗಾ. ಆಳಂದ್ ರಸ್ತೆಯ ಚಿತಲಿ ಕ್ರಾಸ್ ಹತ್ತಿರ ಸ್ಕಾರ್ಪಿಯೋ ವಾಹನ ಸಂಖ್ಯೆ ಎಂಎಚ್ 04 ಇಟಿ 3143 ಇದನ್ನು ತಡೆದು ನಿಲ್ಲಿಸಿ ಅದರಲ್ಲಿದ್ದ ಇಬ್ಬರು ಅಪರಾಧಿ ತರನು ವಶಕ್ಕೆ ಪಡೆದುಕೊಂಡು ನಂತರ ಸದರಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಚೀಲಗಳನ್ನು ಪರಿಶೀಲಿಸಿ ನೋಡಲು ಒಟ್ಟು ಸುಮಾರು 59 ಕೆಜಿ ಒಣ ಗಾಂಜಾವನ್ನು ಹಾಜರುಪಡಿಸಿದ್ದು ಇರುತ್ತದೆ ಅದರ ಅ.ಕಿ.ರೂ 590000 ಮತ್ತು ವಾಹನದ ಅ.ಕಿ.ರೂ.600000.ಗಳು ಹೀಗೆ ಒಟ್ಟು ಸುಮಾರು 1200000 ರೂಪಾಯಿಗಳ ಮಾಲನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಸದರಿ ಗಾಂಜಾವನ್ನು ವಶಪಡಿಸಿಕೊಂಡ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರು ಕಲಬುರ್ಗಿ ಅವರು ಪ್ರಶಂಸಿರುಇರುತ್ತಾರೆ
ವರದಿ.ಸುರೇಶ ಕಾಮನಳ್ಳಿ