ನನ್ನ ಬದುಕಿನ ಸ್ಫೂರ್ತಿ ನನ್ನ ಅಪ್ಪ | Fathers Day Special Article By Kashibai Guttedar
ನನ್ನ ಅಪ್ಪ ಒಬ್ಬ ರೈತ ಅವರು ರೈತ ಎಂದು ಹೇಳಲು ನನಗೆ ತುಂಬಾ ಹೆಮ್ಮೆಯ ವಿಷಯ ಅವರು ಒಬ್ಬ ರೈತರಾಗಿ ನಮನ್ನ ಇಷ್ಟು ಓದಿಸುವ ಮನಸ್ಸು ಹೊಂದಿರುವರು ಹೌದ ನಾನು ಇಷ್ಟು ಮುಂದುವರಿಯಲು ನನ್ನ ತಂದೆನೆ ನನಗೆ ಸ್ಫೂರ್ತಿ ಹಾಗೂ ಅವರೇ ನನ್ನ ಪ್ರಪಂಚ.
ಯಾವುದೇ ರೀತಿಯ ಒತ್ತಡ ಹೆರದೆ ನನ್ನ ಕನಸುಗಳಿಗೆ ಸದಾ ಕಣ್ಣ ಗಾವಲಾಗಿ ನಿಂತು ನನ್ನ ಬದುಕಿನ ಸ್ಫೂರ್ತಿ ಆದವರು ಈ ನನ್ನ ಅಪ್ಪಾಜಿ.
ಅಪ್ಪ ನೀವು ನಮಗಾಗಿ ಹರಿಸುವ ಒಂದೊಂದು ಬೆವರಿನ ಹನಿಯ ಋಣ ತೀರಿಸುವುದು ಹೇಗೆ ಎಂದು ತಿಳಿಯದು. ನೀವು ನಮಗೆ ಆ ದೇವರು ನೀಡಿದ ಅತ್ಯಮೂಲ್ಯವಾದ ಉಡುಗೊರ. ದೇವರೇ ನಿನಗೆ ತುಂಬು ಹೃದಯದ ಧನ್ಯವಾದಗಳು. ಏಕೆಂದರೆ ಇಂತಹ ಅಪ್ಪಾಜಿಯನ್ನು ನೀಡಿದ್ದಕ್ಕೆ. ಅಪ್ಪಾಜಿ ನೀವು ಹೆಮ್ಮೆಪಡುವಂತಹ ಮಕ್ಕಳು ನಾವಾಗುವೆವು ಎಂದು ನಿರ್ಭಯದಿಂದ ಭಾಷೆ ನೀಡುತ್ತೇನೆ.
ಯಾಕಂದ್ರೆ ಅವರು ಓದು ಬರಹ ಕಲಿತಿಲ್ಲ ಅಂದ್ರು ಕೂಡ ನನ್ನನ್ನು ಇಷ್ಟು ಓದಿಸುವ ಗುಣ ಹಾಗೂ ನನ್ನ ಅಪ್ಪ ನನ್ನನ್ನು ಒಬ್ಬ ಗಂಡು ಮಗುವಿನಂತೆ ಬೆಳಿಸಿದರು ನೀವೇ ಹೇಳಿ ಹಳ್ಳಿಯಲ್ಲಿ ಬೆಳೆದ ಒಂದು ಹೆಣ್ಣು ಮಗಳಿಗೆ ಇಷ್ಟೊಂದು ಸ್ವಾತಂತ್ರ ಸಿಗುತ್ತಾ ಅಂತ ಆದ್ರೆ ಆ ಅದೃಷ್ಟ ನನಗೆ ದೊರೆತಿದೆ ಅಂದ್ರೆ ನನ್ನ ಅಪ್ಪ ಎಲ್ಲರಂತೆ ಅಲ್ಲ ಅವರು ತುಂಬಾ ವಿಶೇಷವಾದ ಗುಣ ಹೊಂದಿದವರು ಈ ನನ್ನ ಅಪ್ಪ.
ಅವರು ಎಷ್ಟೇ ಕಷ್ಟ ಇದ್ರೂ ಕೂಡ ನನ್ನ ಮಕ್ಕಳು ನಮ್ಮ ತರ ಬಿಸಿಲಿನಲ್ಲಿ ದುಡಿಯಬಾರದು ಹಾಗೂ ನಾಲ್ಕು ಜನರ ಮದ್ಯೆ ಇರಲಿ ದೊಡ್ಡ ವ್ಯಕ್ತಿಗಳಾಗಲಿ ಎಂಬ ಆಶೆ ಹೊಂದಿದ್ದರು ಈ ನನ್ನ ತಂದೆ.
ಅಪ್ಪ ನಮ್ಮ ಪಾಲಿಗೆ ಮೊದಲು ನೀವೇ ದೇವರು ಅದರಲ್ಲೂ ನೀವು ಹೆತ್ತಿರುವ 4 ಮಕ್ಕಳಲ್ಲಿ ನನಗೆ ತುಂಬಾ ಪ್ರೀತಿ ತೋರಿಸುವರು ನನ್ನ ತಂದೆ ಹೌದು ನಮ್ಮ ಅಪ್ಪನ ಪ್ರೀತಿಯೇ ಅಂತಹದ್ದು.
ಹಾಗಂತ ನನ್ನ ತಮ್ಮ ತಂಗಿಯರಿಗೂ ಕಾಳಜಿ ಇಂದ ಕಾಣುತ್ತಿರಲಿಲ್ಲ ಎಂದರ್ಥವಲ್ಲ, ಎಲ್ಲರಿಗೂ ಸರಿಸಾಮಾನದ ಪ್ರೀತಿಯನ್ನು ನೋಡುತ್ತಿದರು ಆದ್ರೆ ನನಗೆ ಸ್ವಲ್ಪ ಸ್ವಾತಂತ್ರ ಜಾಸ್ತಿ ನೀಡುತ್ತಿದ್ದರು.
ನಾನು ನನ್ನ ತಂದೆಯಲ್ಲಿ ಅತೀಯಾದ ಸಿಟ್ಟು ಕಂಡಿರುವೇ ಆದರೆ ಅದಕ್ಕಿಂತ ಹೆಚ್ಚು ಗಂಭೀರತೆ, ಮೃದುತನ ಕೂಡ ಕಂಡಿರುವೇ. ನನ್ನ ತಂದೆಯ ಕೋಪ ವಿಪರೀತ ಆದ್ರೆ ಅಷ್ಟೇ ಮೃದುತನದ ಮನಸ್ಸು.
ತಪ್ಪು ಮಾಡಿದರೆ ಗದುರಿಸಿ ತಿದ್ದಿ ತೀಡಿ ಬುದ್ದಿ ಹೇಳುವಿರಿ, ಶಿಕ್ಷೆ ನೀಡುವಿರಿ ಅದರ ಬಗ್ಗೆ ತಿಳಿಸಿ ಮನವರಿಕೆ ಮಾಡಿಕೊಡುವವರು ನಮ್ಮ ತಂದೆ.
ಅಮ್ಮ ಹೆತ್ತು ಹೊತ್ತು ಹಾಲುಣಿಸಿ ಬೆಳೆಸಿದರೆ, ಅಪ್ಪ ನಮಗೆ ರಕ್ಷಣೆ ನೀಡುವವರು.
ಅಪ್ಪ ನೀವು ಎಷ್ಟೇ ನೋವಿದ್ದರೂ ಕೂಡ ಅದನೆಲ್ಲ ನಿಮ್ಮ ಮನಸ್ಸಿನಲ್ಲೇ ಇಟ್ಟುಕೊಂಡು ಅಮ್ಮ ಮತ್ತು ನಮ್ಮೆಲ್ಲರ ಜೊತೆಗೆ ನಗನಗುತ ಇರುವ ಸರಳ ಜೀವಿ ನನ್ನ ತಂದೆ.ಎಷ್ಟೇ ಕಷ್ಟ ಬಂದರು ಕೂಡ ಎಲ್ಲವನ್ನು ಮೌನವಾಗಿಯೇ ನಮ್ಮೆಲ್ಲರ ಜವಾಬ್ದಾರಿಯನ್ನು ಹೊರುವಿರಿ ನೀವು.
ಮಳೆಬರಲಿ, ಚಳಿ ಇರಲಿ, ಗಾಳಿ ಇರಲಿ, ಬಿಸಿಲಿರಲಿ ಏನೇ ಇರಲಿ ಎಲ್ಲವನ್ನು ಸದಾ ನಗುನಗುತ ನಮಗಾಗಿ ಬೆವರು ಸುರಿಸುವವರು ಈ ನನ್ನ ಅಪ್ಪಾಜಿ.
ಅಪ್ಪ ನೀವು ಕಷ್ಟದಲ್ಲಿ ಬೆಳೆದರೂ ಕೂಡ ರೈತರಾಗಿ ನಮ್ಮೆಲ್ಲರನ್ನು ನಿಮ್ಮ ಈ ಬಡತನದ ಪರಿಸ್ಥಿತಿಯಲ್ಲಿಯೇ ನನ್ನ ಮಕ್ಕಳು ನನ್ನಂತೆ ಬಿಸಿಲಿನಲ್ಲಿ ದುಡಿಯದೇ ನೆರಳಲ್ಲಿ ಒಂದು ಉನ್ನತವಾದ ಹುದ್ದೆಯಲ್ಲಿರಬೇಕು ಎಂದು ತಮ್ಮ ಕಷ್ಟ ಕಾರ್ಪಣ್ಯಗಳ ಮದ್ಯೆಯು ನಮ್ಮೆಲರನ್ನು ಓದಿಸುತಿರುವಿರಿ ನಿಮ್ಮ ಈ ಒಳ್ಳೆ ತನಕ್ಕೆ ನಾವೆಲ್ಲರೂ ಯಾವಾಗಲು ಚಿರಋಣಿ.
ಅದರಲ್ಲಿ ಮುಖ್ಯವಾಗಿ ನನ್ನನ್ನು ಒಬ್ಬ ಗಂಡು ಮಗುವಿನಂತೆ ಎಲ್ಲೆಂದರಲ್ಲಿ ಯಾವುದೇ ಸಂದರ್ಭದಲ್ಲಿ ನಾನು ನಿನ್ನ ಜೊತೆ ಇದ್ದೀನಿ ಎಂದು ವಿಶ್ವಾಸದಿಂದ ಹೇಳುತ್ತಾ ನನ್ನನ್ನು ಕಳುಸಿದ್ದೀರಿ ಹೌದು ನನ್ನ ತಂದೆಗೆ ನನ್ನ ಮೇಲೆ ಇದ್ದ ಅಪಾರ ನಂಬಿಕೆಯೇ ಇದಕ್ಕೆ ಮುಖ್ಯ ಕಾರಣ.
ಏನಂತ ಸಂದಿಗ್ದ ಪರಿಸ್ಥಿತಿ ಬಂದರು ಕೂಡ ಧೈರ್ಯ ಗೆಡದೆ ಇರು ಎಂದು ವಿಶ್ವಾಸ ದಿಂದ ಅನುಮತಿ ನೀಡುತ್ತಿರುವ ನನ್ನ ಅಪ್ಪ.
ನಿಮ್ಮಂತ ಅಪ್ಪನನ್ನು ಪಡೆದ ನಾವುಗಳು ಅದೃಷ್ಟ ವಂತರು.
ಪ್ರತಿಯೊಬ್ಬ ತಂದೆಯರಿಗೆ ಒಂದು ಆಸೆ ಇರುತ್ತೆ ಅದೇನೆಂದರೆ ತಮ್ಮ ಮಕ್ಕಳು ತಾನು ಬಯಸಿದಂತೆ ಉತ್ತಮ ವ್ಯಕ್ತಿಗಳಾಗಿ ಬೆಳೆದರೆ ಆ ಸಾರ್ಥಕತೆ ಪ್ರತಿಯೊಬ್ಬ ತಂದೆಯ ಕಣ್ಣುಗಳಲ್ಲಿ ಕಾಣಬಹುದು ಎಂದು ಹೇಳಬಯಸುತ್ತೇನೆ
ಮಗಳೆಂದರೆ ಅಪ್ಪನಿಗೆ ಜೀವ, ಅಪ್ಪ ಎಂದರೆ ಮಗಳಿಗೆ ಪ್ರಪಂಚ,ಮಗಳ ಪುಟ್ಟ ಪುಟ್ಟ ಆಶೆಗಳಿಗೋಸ್ಕರ ತನ್ನ ದೊಡ್ಡ ಕನಸುಗಳನ್ನು ದೂರವಿರಿಸಿ ಅವಳಿಗೇನು ಕಮ್ಮಿ ಇಲ್ಲದಂತೆ ಬೆಳೆಸಿ,
ಕರುಳಿನ ಜೊತೆ ದೊಡ್ಡ ಸಂಬಂಧ ಬೆಸೆಯುತ್ತಾನೆ
ಒಂದು ದಿನ ಬಿಟ್ಟು ಹೋಗುವ ಸಮಯ ಬಂದಾಗ ತನ್ನೊಳಗೆ ಎಲ್ಲ ನೋವನ್ನು ನುಂಗಿ ನಗುವಿನಿಂದ ಕಳುಹಿಸುವವ ಮಹಾತ್ಮಾ ಈ ನಮ್ಮ ತಂದೆ.
ಕಾಶಿಬಾಯಿ. ಗುತ್ತೇದಾರ ಪಾಳಾ