Yoga Day 2021: ಜಲ ಯೋಗದ ಮೂಲಕ ಆರೋಗ್ಯದ ಸಂದೇಶ ಸಾರುತ್ತಿರುವ ಕೊಪ್ಪಳ, ಕಲಬುರ್ಗಿಯ ಯೋಗಪಟುಗಳು
International Day of Yoga: ಜಲ ಯೋಗದ ಮೂಲಕ ಉತ್ತಮ ಆರೋಗ್ಯಕ್ಕೆ ಯೋಗಾಸನ ಎಷ್ಟು ಮುಖ್ಯವೆಂಬ ಸಂದೇಶ ಸಾರುತ್ತಿರುವ ಕೊಪ್ಪಳ ಮತ್ತು ಕಲಬುರ್ಗಿ ಯೋಗಪಟುಗಳು ಗ್ರಾಮೀಣ ಭಾಗದಿಂದ ರಾಜ್ಯಾದ್ಯಂತ ಯೋಗ ಪ್ರದರ್ಶನ ಮಾಡುತ್ತಾ, ಯೋಗ ಕಲಿಸುತ್ತಿದ್ದಾರೆ.

ಕಲಬುರಗಿಯಲ್ಲಿ ಜಲ ಯೋಗ ಮಾಡೋ ಮೂಲಕ ಯೋಗ ದಿನಾಚರಣೆ ಆಚರಿಸಲಾಯಿತು. ಪವನ ಕುಮಾರ್ ವಳಕೇರಿ ಮತ್ತು ಪುತ್ರ ರವಿಕಿರಣ್ ವಳಕೇರಿ ಜಲ ಯೋಗ ಮಾಡುತ್ತಿರುವ ಫೋಟೋ ಇಲ್ಲಿದೆ.

ಕಲಬುರಗಿ ಹೊರವಲಯದ ನಂದಿಕೂರನಲ್ಲಿ ಸುಮಾರು ಒಂದು ಗಂಟೆ ಕಾಲ ಜಲ ಯೋಗಾಸನ ಮಾಡಿದರು. ಗ್ರಾಮದ ಬಾವಿಯೊಂದರಲ್ಲಿ ಜಲ ಯೋಗಾಸನ ಮಾಡಿದ ಫೋಟೋಗಳು ವೈರಲ್ ಆಗಿವೆ. ಕಳೆದ 20 ವರ್ಷಗಳಿಂದ ಯೋಗಾಸನ ಮಾಡುತ್ತಿರುವ ಪವನ ಕುಮಾರ ವಳಕೇರಿ ಪದ್ಮಾಸನ ಸೇರಿದಂತೆ ವಿವಿಧ ಬಗೆಯ ಜಲ ಯೋಗಾಸನ ಮಾಡುತ್ತಾರೆ.

ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ, ಕೊರೊನಾದಂಥ ಮಾಹಾಮಾರಿ ವಕ್ಕರಿಸಿದಾಗ ಮಾನಸಿಕ ಗಟ್ಟಿತನ, ದೈಹಿಕವಾಗಿವಾಗಿ ಗಟ್ಟಿಯನಕ್ಕಾಗಿ ಯೋಗ ಅವಶ್ಯವಾಗಿದೆ, ಇದಕ್ಕಾಗಿ ಅನೇಕರು ಯೋಗದತ್ತ ವಾಲುತ್ತಿದ್ದಾರೆ.

ಯೋಗ ಕಲಿಸುವ ಗುರುಗಳ ಹತ್ತಿರ ಹೋಗುತ್ತಿದ್ದಾರೆ, ಆದರೆ ಇಲ್ಲೊಬ್ಬ ಯುವಕ ಏಕಲವ್ಯನಂತೆ ಯೋಗ ಕಲಿತಿದ್ದಾರೆ. ಯಾವುದೇ ಒಂದು ವಿದ್ಯೆ ಕಲಿಯಬೇಕೆಂದರೂ ಸಹ ಗುರುವಿನ ಮಾರ್ಗದರ್ಶನ ಅತ್ಯಗತ್ಯ.

ಗುರುವಿನ ಮೂರ್ತಿಯನ್ನು ಸ್ಥಾಪಿಸಿಕೊಂಡು ಏಕಲವ್ಯ ಬಿಲ್ವಿದ್ಯೆಯಲ್ಲಿ ಪಾರಂಗತನಾದಂತೆ ಈ ಕಲಿಯುಗದಲ್ಲಿಯೂ ಸಹ ಅನೇಕರು ಗುರವಿಲ್ಲದೆ ಏಕಲವ್ಯರಂತೆ ವಿದ್ಯಾ ಪಾರಂಗತರಾಗಿ ಗಮನ ಸೆಳೆಯುತ್ತಾರೆ. ಅಂತಹವರ ಸಾಲಿಗೆ ಈ ಯುವಕ ನಿಲ್ಲುತ್ತಾನೆ. ಗುರುವಿಲ್ಲದೆ ಯೋಗ ಕಲಿತು ಬಳಿಕ ಗುರುವಿನ ಮಾರ್ಗದರ್ಶನದಲ್ಲಿ ಯೋಗವನ್ನು ಮತ್ತಷ್ಟು ಕರಗತ ಮಾಡಿಕೊಂಡಿದ್ದಾನೆ ಈ ಗ್ರಾಮೀಣ ಭಾಗದ ಯುವಕ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪ್ರತಾಪ್ಸಿಂಗ್ ಎಂಬ ಯುವಕ ತಮ್ಮ ಸ್ನೇಹಿತ ವಿಠ್ಠಲ್ ಸಿಂಗ್ ಅವರೊಂದಿಗೆ ಸೇರಿಕೊಂಡು ಕಳೆದ 14 ವರ್ಷಗಳಿಂದ ಯೋಗ ಸಾಧನೆಯಲ್ಲಿ ತೊಡಗಿಕೊಂಡಿದ್ದಾರೆ. ಆರಂಭದಲ್ಲಿ ಯಾವುದೇ ಗುರುವಿನ ಮಾರ್ಗದರ್ಶನವಿಲ್ಲದೆ ತಮ್ಮ ಸಹೋದರ ಮಾವನವರು ಮಾಡುತ್ತಿದ್ದ ಯೋಗದಿಂದ ಪ್ರೇರಣೆಗೊಂಡು ಯೋಗಪಟುವಾಗಿ ಬೆಳೆದು ನಿಂತಿದ್ದಾರೆ.

ಯೋಗಾಭ್ಯಾಸ ಮಾಡದ ಸುಮಾರು 15 ಯುವಕರಿಗೆ ಯೋಗಾಭ್ಯಾಸ ಮಾಡಿಸಿ ಯೋಗಪಟುಗಳನ್ನಾಗಿ ರೂಪಿಸಿ ತಂಡಕಟ್ಟಿಕೊಂಡು ಹಲವಾರು ಕಡೆ ಯೋಗಪ್ರದರ್ಶನ ನೀಡಿದ್ದಾರೆ.

ಕಳೆದ 14 ವರ್ಷಗಳಿಂದ ಯೋಗದ ವಿವಿಧ ಆಸನಗಳನ್ನು ಅತ್ಯಂತ ಲೀಲಾಜಾಲವಾಗಿ ಮಾಡುತ್ತಾರೆ. ಇವರ ಯೋಗ ಮಾಡುವುದನ್ನು ನೋಡಿದರೆ ಬೆರಗಾಗುತ್ತಾರೆ. ಗ್ರಾಮೀಣ ಪ್ರದೇಶದ ಯುವಕರು ಉತ್ತಮ ಯೋಗಪಟುಗಳಾಗಿ ರೂಪುಗೊಂಡಿರುವುದಕ್ಕೆ ಸ್ಥಳೀಯರು ಹೆಮ್ಮೆಪಡುತ್ತಾರೆ.

ಯುವಕ ಪ್ರತಾಪ್ ಸಿಂಗ್ ನೀರಿನಲ್ಲಿ ತೇಲುತ್ತಾ ಯೋಗಾಸನ ಮಾಡುವುದು ನಿಜಕ್ಕೂ ಬೆರಗು ಮೂಡಿಸುತ್ತದೆ. ಪ್ರತಾಪ್ ಸಿಂಗ್ ಸ್ತಂಬ ಪದ್ಮಾಸನ, ದ್ವಿಪಾದ ಅಂಗುಷ್ಟ, ಜಲಬಸ್ತ್ರಿಕಾ, ಜಲನೇತಿ ಹಾಗೂ ಸೂರ್ಯನೇತಿ ಶಿರ್ಶಾಸನ, ಮಯೂರಾಸನ, ಬಕಾಸನ, ಚಕ್ರಾಸನ, ವಕ್ರಾಸನ, ವೃಕ್ಷಾಸನ, ಗರ್ಭಪಿಂಡಾಸನ, ಪಾದಾಂಗುಷ್ಠಾಸನ ಸೇರಿದಂತೆ ಅನೇಕ ಆಸನಗಳನ್ನು ಲೀಲಾಜಾಲವಾಗಿ ಮಾಡುತ್ತಾರೆ.

15 ಯುವಕರಿಗೆ ಯೋಗವನ್ನು ಕಲಿಸಿ ತಂಡಕಟ್ಟಿಕೊಂಡು ಯೋಗಾಸನಕ್ಕೆ ಕೆಲ ಸಾಹಸದ ಟನ್ ನೀಡಿದ್ದಾರೆ. ಈ ತಂಡದಿಂದ ರಾಜ್ಯದ ನಾನಾಕಡೆ ಪ್ರದರ್ಶನ ನೀಡಿ ತಮ್ಮ ಪ್ರತಿಭನೆಯನ್ನು ತೋರಿದ್ದಾರೆ ಅಪ್ಪಟ ಗ್ರಾಮೀಣ ಪ್ರತಿಭೆ ಪ್ರತಾಪಸಿಂಗ್ ಅವರು.

ಪ್ರತಾಪ ಸಿಂಗ್ ಅವರ ಯೋಗಾಸನ

ಪ್ರತಾಪ ಸಿಂಗ್ ಅವರ ಯೋಗಾಸನ