ಮಂಗಳವಾರ ಟೌನ್ ಹಾಲ್ ಮತ್ತುರಾಮಜಿ ನಗರ ಸಮುದಾಯ ಭವನದಲ್ಲಿ ಕೋವಿಡ್ ಲಸಿಕಾಕರಣ
ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಟೌನ್ ಹಾಲ್ ಮತ್ತು ರಾಮಜೀ ನಗರ ಸಮುದಾಯ ಭವನದಲ್ಲಿ ಇದೇ ಜೂನ್ 22 ರಂದು ಕೋವಿಡ್ ಲಸಿಕಾಕರಣ ವಿಶೇಷ ಅಭಿಯಾನ ಹಮ್ಮಿಕೊಂಡಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
18 ವರ್ಷ ಮೇಲ್ಪಟ್ಟ ಎಲ್ಲಾ ವರ್ಗದ ಸಾರ್ವಜನಿಕರು ಬೆಳಿಗ್ಗೆ 10 ರಿಂದ ಸಾಯಂಕಾಲ 4 ಗಂಟೆಯವರೆಗೆ ಬಂದು ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.